Uttara Kannada: ವಾಹನಗಳ ಪಾಸಿಂಗ್‌ ಸಮಸ್ಯೆಗೆ ಕಂಗೆಟ್ಟಮಾಲೀಕರು

Published : Sep 07, 2022, 01:32 PM IST
Uttara Kannada: ವಾಹನಗಳ ಪಾಸಿಂಗ್‌ ಸಮಸ್ಯೆಗೆ ಕಂಗೆಟ್ಟಮಾಲೀಕರು

ಸಾರಾಂಶ

ಪಾಸಿಂಗ್‌ ಆಗದೆ ವಾಹನಗಳನ್ನು ರಸ್ತೆಗಿಳಿಸುವಂತಿಲ್ಲ. ಆದರೆ ಪಾಸಿಂಗ್‌ ಆಗುತ್ತಿಲ್ಲ. ಅಷ್ಟಕ್ಕೂ ವಾಹನಗಳಿಗೆ ಪಾಸಿಂಗ್‌ ಮಾಡುವವರು ಯಾರು? ಎಂದೇ ಗೊತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ಪಾಸಿಂಗ್‌ ಮಾಡಬೇಕಿದ್ದ ವಾಹನಗಳ ಮಾಲೀಕರು ಏನು ಮಾಡಬೇಕೆಂದು ತಿಳಿಯದೆ ಕಂಗೆಟ್ಟಿದ್ದಾರೆ.

ಕಾರವಾರ (ಸೆ.7) : ಪಾಸಿಂಗ್‌ ಆಗದೆ ವಾಹನಗಳನ್ನು ರಸ್ತೆಗಿಳಿಸುವಂತಿಲ್ಲ. ಆದರೆ ಪಾಸಿಂಗ್‌ ಆಗುತ್ತಿಲ್ಲ. ಅಷ್ಟಕ್ಕೂ ವಾಹನಗಳಿಗೆ ಪಾಸಿಂಗ್‌ ಮಾಡುವವರು ಯಾರು? ಎಂದೇ ಗೊತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ಪಾಸಿಂಗ್‌ ಮಾಡಬೇಕಿದ್ದ ವಾಹನಗಳ ಮಾಲೀಕರು ಏನು ಮಾಡಬೇಕೆಂದು ತಿಳಿಯದೆ ಕಂಗೆಟ್ಟಿದ್ದಾರೆ. ನಿಯಮಾವಳಿ ಪ್ರಕಾರ ಆನ್‌ಲೈನ್‌ನಲ್ಲಿ ಫಾರಂ ಭರ್ತಿ ಮಾಡಬೇಕು. ನಂತರ ವಾಹನಗಳಿಗೆ ರೇಡಿಯಂ ಸ್ಟಿಕರ್‌ ಹಾಕಬೇಕು. ಅದರ ಫೋಟೋ ತೆಗೆದು ಅಪ್‌ಲೋಡ್‌ ಮಾಡಬೇಕು. ನಂತರ ಬರುವ ಓಟಿಪಿಯನ್ನು ಸಾರಿಗೆ ಇಲಾಖೆ ಕಚೇರಿಗೆ ನೀಡಬೇಕು. ನಂತರವಷ್ಟೇ ಪಾಸಿಂಗ್‌ ಆಗುತ್ತದೆ. ಆದರೆ ಇವಾವುದೂ ನಡೆಯುತ್ತಿಲ್ಲ. ಇದನ್ನು ಮಾಡಬೇಕಾದವರು ಯಾರು? ಎನ್ನುವುದೇ ವಾಹನ ಮಾಲೀಕರಿಗೆ ಗೊತ್ತಾಗುತ್ತಿಲ್ಲ.

Uttara Kannada: ಕುಮಟಾದಲ್ಲಿ 12ನೇ ಶತಮಾನದ ಕನ್ನಡ ಶಾಸನ ಪತ್ತೆ

ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ವಾಹನಗಳ ಪಾಸಿಂಗ್‌ ಹೊಣೆಯನ್ನು 8 ಕಂಪನಿಗಳಿಗೆ ನೀಡಲಾಗಿದೆ. ಅವರೇ ಸ್ಟಿಕರ್‌ ಅಂಟಿಸುತ್ತಾರೆ. ಎಲ್ಲ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ ಎಂದು ಉತ್ತರಿಸುತ್ತಾರೆ. ಆದರೆ ಆ 8 ಕಂಪನಿಗಳು ಯಾವವು ಎನ್ನುವುದು ಅಧಿಕಾರಿಗಳಿಗೇ ಗೊತ್ತಿಲ್ಲ. ಯಾವಾಗ ಕೆಲಸ ಆರಂಭಿಸಲಿದ್ದಾರೆ ಎನ್ನುವುದೂ ತಿಳಿದಿಲ್ಲ.

ಪಾಸಿಂಗ್‌ ಆಗದೆ ಇದ್ದರೆ, ಏನೇ ಅವಘಡ ಉಂಟಾದರೂ ವಿಮೆ ಸಿಗದು. ಯಾವ ಸೌಲಭ್ಯವೂ ಸಿಗದು. ಸೆ.1 ರಿಂದ ಪಾಸಿಂಗ್‌ ಮಾಡಬೇಕಿತ್ತು. ಪಾಸಿಂಗ್‌ ಮಾಡದೆ ಇರುವುದರಿಂದ ರಾಜ್ಯಾದ್ಯಂತ ಹೊಸ ಬಸ್‌, ಕಾರು, ಆಟೋ ರಸ್ತೆಗಿಳಿಯುತ್ತಿಲ್ಲ. ಕೆಲವರು ಪಾಸಿಂಗ್‌ ಆಗದ ವಾಹನಗಳನ್ನು ರಸ್ತೆಗಿಳಿಸಿದ್ದರೂ ಸ್ವಂತ ರಿಸ್‌್ಕ ಮೇಲೆಯೇ ಓಡಿಸಬೇಕು.

ವಾಹನಗಳಿಗೆ ಫಿಟ್ನೆಸ್‌ ಸರ್ಟಿಫಿಕೇಟ್‌ ಮಾಡಿಕೊಂಡು ಓಡಿಸಬಹುದು. ನಂತರ ಪಾಸಿಂಗ್‌ ಮಾಡಿಕೊಂಡರೆ ಸಾಕು ಎಂದು ಸಾರಿಗೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಫಿಟ್ನೆಸ್‌ ಸರ್ಟಿಫಿಕೇಟ್‌ ಕೊಡಲು ಹಿಂದೇಟು ಹಾಕುತ್ತಾರೆ. ವಾಹನ ಮಾಲೀಕರು ಏನು ಮಾಡಬೇಕೆಂದು ತಿಳಿಯದೆ ಗೊಂದಲದಲ್ಲಿದ್ದಾರೆ.

Uttara Kannada; ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಸಾತೇರಿದೇವಿ ಜಾತ್ರಾ ಮಹೋತ್ಸವ

ಪಾಸಿಂಗ್‌ ಮಾಡುವವರು ಯಾರು ಎಂದು ತಿಳಿಯುತ್ತಿಲ್ಲ. ಪಾಸಿಂಗ್‌ ಆಗದೆ ಇದ್ದರೆ ವಿಮೆ ಸಿಗದು. ಹೀಗಾಗಿ ನನ್ನದೆ 3 ಬಸ್‌ಗಳು ಸೆ.1ರಿಂದ ಹಾಗೆಯೇ ನಿಂತಿದೆ. ಯಾರಿಂದಲೂ ಸಮರ್ಪಕ ಉತ್ತರ ಬರುತ್ತಿಲ್ಲ.

ವೆಂಕಟ್ರಮಣ ಹೆಗಡೆ- ಎಸ್‌ಆರ್‌ಎಲ್‌ ಮಾಲೀಕರು

ಪಾಸಿಂಗ್‌ ಮಾಡುವುದನ್ನು 8 ಕಂಪನಿಗಳಿಗೆ ವಹಿಸಲಾಗಿದೆ. ಅವರು ಸದ್ಯದಲ್ಲಿಯೇ ಬಂದು ಕೆಲಸ ಆರಂಭಿಸಲಿದ್ದಾರೆ. ಅಲ್ಲಿಯ ತನಕ ಫಿಟ್ನೆಸ್‌ ಸರ್ಟಿಫಿಕೇಟ್‌ ಪಡೆದು ವಾಹನ ಓಡಿಸಬಹುದು.

ಮಲ್ಲಿಕಾರ್ಜುನ, ಹೆಚ್ಚುವರಿ ಆಯುಕ್ತ (ಎನ್‌ ಫೋರ್ಸಮೆಂಟ್‌) ಸಾರಿಗೆ ಇಲಾಖೆ

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!