Bengaluru: ವಿಂಟೇಜ್ ಕಾರ್ ಮತ್ತು ಬೈಕ್ ಶೋಗೆ ಚಾಲನೆ ನೀಡಿದ ಯದುವೀರ್ ಒಡೆಯರ್

By Govindaraj SFirst Published Nov 27, 2022, 8:22 PM IST
Highlights

ಇಷ್ಟು ದಿನ ಬರೀ ಹಳೇ ಸಿನಿಮಾಗಳಲ್ಲಿ ಮಾತ್ರ ವಿಂಟೇಜ್ ಕಾರ್‌ಗಳನ್ನ ನೋಡಿದ್ವಿ. ಕಣ್ಣು ಮುಚ್ಚಿ ತೆಗೆಯೋವಷ್ಟರಲ್ಲೀ ಅಯ್ಯೋ ಕಾರ್ ಹೋಗೇ ಬಿಡ್ತಲ್ಲಪ್ಪಾ ಅಂತ ಬೇಜಾರ್ ಆಗ್ತಿದ್ವಿ. ಆದ್ರೆ ಇಂದು ಬೆಂಗಳೂರಿನ ಕ್ಲಬ್ ವತಿಯಿಂದ ವಿಂಟೇಜ್ ಕಾರ್ ಮತ್ತು ಬೈಕ್ ಶೋ ಆಯೋಜಿಸಲಾಗಿತ್ತು. 

ವರದಿ: ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು 

ಬೆಂಗಳೂರು (ನ.27): ಇಷ್ಟು ದಿನ ಬರೀ ಹಳೇ ಸಿನಿಮಾಗಳಲ್ಲಿ ಮಾತ್ರ ವಿಂಟೇಜ್ ಕಾರ್‌ಗಳನ್ನ ನೋಡಿದ್ವಿ. ಕಣ್ಣು ಮುಚ್ಚಿ ತೆಗೆಯೋವಷ್ಟರಲ್ಲೀ ಅಯ್ಯೋ ಕಾರ್ ಹೋಗೇ ಬಿಡ್ತಲ್ಲಪ್ಪಾ ಅಂತ ಬೇಜಾರ್ ಆಗ್ತಿದ್ವಿ. ಆದ್ರೆ ಇಂದು ಬೆಂಗಳೂರಿನ ಕ್ಲಬ್ ವತಿಯಿಂದ ವಿಂಟೇಜ್ ಕಾರ್ ಮತ್ತು ಬೈಕ್ ಶೋ ಆಯೋಜಿಸಲಾಗಿತ್ತು. ಹಳೆಯ ಡೆಮ್ಲೀ ಡಿ.ಬಿ, ಅಮೆರಿಕನ್ ಕಾರ್ಸ್, ಬ್ರಿಟಿಷ್ ಕಾರ್ಸ್, ಮರ್ಸೆಡಿಸ್ ಬೆಂಜ್, ಮಿನಿ ಕೂಪರ್, ಜಾಗ್ವರ್, ಫೋರ್ಡನಂತಹ ಅನೇಕ ಕಂಪನಿಯ ವಿಂಟೇಜ್ ಕಾರು ಹಾಗೂ ಬೈಕ್‌ಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು.

ಮೈಸೂರು ಮಹಾರಾಜರು, ಗಾಂಧೀಜಿ, ನೆಹರು ರಂತಹ ಗಣ್ಯಾತಿ ಗಣ್ಯರು ಉಪಯೋಗಿಸುತ್ತಿದ್ದ ಕಾರ್‌ಗಳು ಈಗ ಒಂದೇ ಸೂರಿನಡಿಯಲ್ಲಿದೆ. ಮತ್ತಷ್ಟು ಗಣ್ಯರ ಕಾರ್‌ಗಳು ಕೂಡ ಇಲ್ಲೇ ಟೆಂಟ್ ಹಾಕಿತ್ತು, ಈ ಕಾರ್‌ಗಳು ಬರಿ ಪಳಪಳ ಹೊಳೆಯೋದಲ್ಲದೇ ರನ್ನಿಂಗ್ ಕಂಡೀಷನ್‌ನಲ್ಲಿರೋದು ನಂಬಲು ಅಸಾಧ್ಯವಾಗಿದೆ.

ಬದಲಾಗಿದೆ ಬೆಂಗಳೂರು, ಬಾಡಿಗೆ ಮನೆ ಪಡೆಯಲು ನಿಮ್ಮಲಿರಬೇಕು ಈ ಪದವಿ!

ಮೈಸೂರಿನ ಮಹಾರಾಜ ಯದುವೀರ್ ಒಡೆಯರ್ ಬೆಂಗಳೂರು ಕ್ಲಬ್ ಆಯೋಜಿಸಿದ ವಿಂಟೇಜ್ ಕಾರ್ ಆಂಡ್ ಬೈಕ್ ಷೋಗೆ ಚಾಲನೆ ನೀಡಿದ್ರು. ಅಷ್ಟೇ ಅಲ್ಲದೇ ಮೈಸೂರು ಮನೆತನಕ್ಕೆ ಸೇರಿದ ಕಾರ್‌ನಲ್ಲಿ ರೌಂಡ್ಸ್ ಹಾಕಿದ್ರು. ಇನ್ನೂ ವೀದೇಶಿ ಮೂಲದ ಕಾರುಗಳು ನೋಡುಗರ ಕಣ್ಮಣ ಸೆಳೆದವು. ವಿಂಟೇಜ್ ಕಾರು ಬೈಕ್‌ಗಳನ್ನು ನೋಡುವುದರ ಮೂಲಕ ಜನ ದಿಲ್ ಖುಷ್ ಆದ್ರು. ಕಾರು ಬೈಕ್‌ಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಜನ ಬ್ಯುಸಿ ಇದ್ರು. ಕಾರು ಬೈಕ್‌ ನ ಮಾಲೀಕರಂತು ತಮ್ಮ ಬಳಿ ವಿಂಟೇಜ್ ವಾಹನ ಇರೋದು ನಮ್ಮ ಪುಣ್ಯ ಅಂತಾ ಖುಷಿಪಟ್ಟರು.

ವಿಂಟೇಜ್ ಕಾರ್ ಅಂದ್ರೇನೆ ಹಾಗೆ, ಎಲ್ರಿಗೂ ಒಂಥರಾ ಖುಷಿ. ಮನೆಲಿರೋ ಕಾರು ಬೈಕ್ ರಸ್ತೆಗಿಳಿಸೋದು ಅಂದ್ರೆ ಇನ್ನೂ ಖುಷಿ. ಈ ಕಾರಲ್ಲಿ ಬೈಕಲ್ಲಿ ಹೋಗ್ತಿದ್ರೆ ಪ್ರಾಚೀನ ಕಾಲ ನೆನಪಾಗತ್ತೆ. ಈ ಕಲರ್ಫುಲ್ ವಾಹನಗಳ ಜತೆಗೆ ಲೈಫ್ ಸಹ ಬ್ಯೂಟಫುಲ್ಲಾಗಿತ್ತು ಅನ್ನೋದು ಸಾಬೀತಾಗತ್ತೆ. ಹೀಗಾಗಿ ಅದೆಷ್ಟೋ ಜನ ವಿಂಟೇಜ್ ಕಾರು ಬೈಕ್ ಗಳನ್ನ ಇಷ್ಟ ಪಡ್ತಾರೆ. 

ಒಕ್ಕಲಿಗ ಮೀಸಲಾತಿ ಹೋರಾಟದ ಮೂಲಕ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

ಒಟ್ಟಿನಲ್ಲಿ ಓಲ್ಡ್ ಈಸ್ ಗೋಲ್ಡ್ ಅನ್ನೋದು ಹಂಡ್ರೆಡ್ ಪರ್ಸೆಂಟ್ ಸತ್ಯ. ಏನೇ ಹೇಳಿ ಕೋಟಿ ಕೊಟ್ಟು ಕಾರ್ ಬೈಕ್ ಪರ್ಚೇಸ್ ಮಾಡಿದ್ರು, ಇವುಗಳ ಮುಂದೆ ಎಲ್ಲವೂ ಡಮ್ಮೀನೆ. ಇಂಥಾ ಓಲ್ಡ್ ಬ್ಯೂಟಿ ಜತೆ ಲಾಂಗ್ ಡ್ರೈವ್ ಹೋಗೋದ್ರಲ್ಲಿ ಇರೋ ಮಜಾನೇ ಬೇರೆ.

click me!