ಮೈಸೂರು ಅರಸರಿಗೂ ಬೇಬಿಬೆಟ್ಟಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೇಶ್ವರ ಮಠದ ವತಿಯಿಂದ ನಡೆದ ಲಿಂಗೈಕ್ಯ ಮರೀದೇವರು ಶ್ರೀಗಳ 15 ವರ್ಷದ ಪುಣ್ಯಸ್ಮರಣೆ, ಶ್ರೀ ಸದಾಶಿವಸ್ವಾಮೀಜಿಗಳ 5ನೇ ವರ್ಷದ ಪುಣ್ಯಸ್ಮರಣೆ, ಗದ್ದುಗೆ ಉದ್ಘಾಟನೆ ಹಾಗೂ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಪಾಂಡವಪುರ (ಆ.12): ಮೈಸೂರು ಅರಸರಿಗೂ ಬೇಬಿಬೆಟ್ಟಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೇಶ್ವರ ಮಠದ ವತಿಯಿಂದ ನಡೆದ ಲಿಂಗೈಕ್ಯ ಮರೀದೇವರು ಶ್ರೀಗಳ 15 ವರ್ಷದ ಪುಣ್ಯಸ್ಮರಣೆ, ಶ್ರೀ ಸದಾಶಿವಸ್ವಾಮೀಜಿಗಳ 5ನೇ ವರ್ಷದ ಪುಣ್ಯಸ್ಮರಣೆ, ಗದ್ದುಗೆ ಉದ್ಘಾಟನೆ ಹಾಗೂ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಪೂರ್ವಿಕರು ದ್ವಾರಕದಿಂದ ಮೇಲುಕೋಟೆ ಹಾಗೂ ಬೇಬಿಬೆಟ್ಟಕ್ಕೆ ಬಂದಿದ್ದರು. ಬೇಬಿಬೆಟ್ಟದಲ್ಲಿ ನಡೆಯುವ ದನಗಳ ಜಾತ್ರೆ ವೇಳೆ ನಾನು ಸಹ ಕುಟುಂಬ ಸಮೇತವಾಗಿ ಆಗಮಿಸಿ ಪೂಜೆ ಸಲ್ಲಿಸಿದ್ದೇನೆ.
ನಮ್ಮ ಹಾಗೂ ಮಠದ ಸಂಬಂಧ, ಬಾಂಧವ್ಯ ಹೀಗೇ ಮುಂದುವರೆಯಲಿ ಎಂದರು. ಬೇಬಿಬೆಟ್ಟದಲ್ಲಿ ಅಮೃತ ಮಹಲ್ ಕಾವಲು ಪ್ರದೇಶದಲ್ಲಿ ಇರುವ ನಮ್ಮ ಸ್ವಲ್ಪ ಜಾಗವನ್ನು ಮಠದ ಅಭಿವೃದ್ಧಿಗೆ ನೀಡುವಂತೆ ಮನವಿ ಮಾಡಿದ್ದೀರಾ. ನಾನು ನಿಮ್ಮ ಮನವಿಯನ್ನು ನಮ್ಮ ತಾಯಿ ಅವರಿಗೆ ಸಲ್ಲಿಸುತ್ತೇನೆ. ಆ ಬಳಿಕ ತಾಯಿ ಅವರ ಸಲಹೆ, ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಬೇಬಿಬೆಟ್ಟಪುಣ್ಯ ಪುರುಷರು ತಪ್ಪಸ್ಸು ಮಾಡಿದ ಪವಿತ್ರ ಸ್ಥಳ. ಮೂರು ದೇವಾಲಯಗಳನ್ನು ಹೊಂದಿರುವ ಧಾರ್ಮಿಕ ಕ್ಷೇತ್ರಗಳ ಪೈಕಿ ಬೇಬಿಬೆಟ್ಟಕ್ಷೇತ್ರವೂ ಸಹ ಒಂದಾಗಿದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಕುಸಿತ: ಬೆಳೆಗಾರರಲ್ಲಿ ತೀವ್ರ ನಿರಾಸೆ
ಮನುಷ್ಯರು ಮಠ, ಮಂದಿರಗಳ ಬಗ್ಗೆ ವಿಶ್ವಾಸ, ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕು. ಕುಟುಂಬ, ಸಂಸಾರಗಳು ಮನುಷ್ಯನನ್ನು ಜಂಜಾಟದಲ್ಲಿ ಸಿಲುಕಿಸುತ್ತವೆ. ಅದೇ ಮಠ, ಮಂದಿರಗಳು ಮನುಷ್ಯ ಜಂಜಾಟವನ್ನು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಲು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತವೆ. ಹಾಗಾಗಿ ಪ್ರತಿಯೊಬ್ಬರು ಮಠಗಳ ಬಗ್ಗೆ ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವಸ್ವಾಮೀಜಿ ಮಾತನಾಡಿ, ಬೇಬಿಬೆಟ್ಟಪವಿತ್ರವಾದ ತಪೋಭೂಮಿಯಾಗಿದೆ. ಬೇಬಿಬೆಟ್ಟದ ಮಠಕ್ಕೆ 500 ವರ್ಷಗಳ ಇತಿಹಾಸ ಹೊಂದಿದ್ದು ಶ್ರೀಮರೀದೇವರು ಸ್ವಾಮೀಜಿಗಳು ಬರುವ ಮೊದಲು ಹಲವು ಸಿದ್ದಿಪುರುಷರು ಇಲ್ಲಿ ತಪ್ಪಸ್ಸು ಮಾಡಿ ಹೋಗಿದ್ದಾರೆ ಎಂದರು.
ಮೈಸೂರು ಸಂಸ್ಥಾನಕ್ಕೂ ಮಠಕ್ಕೂ ನಂಟಿದೆ. ಮಠದ ಆವರಣದಲ್ಲಿ ಮೊದಲ ಶಾಲೆಯೊಂದು ನಡೆಯುತ್ತಿತ್ತು. ಇದೀಗ ಅದನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲೊಂದು ಶಾಲೆ ತೆರೆಯಬೇಕೆಂದು ಆಲೋಚನೆ ಇದೆ. ಹಾಗಾಗಿ ಮೈಸೂರು ಅರಸುಗಳು ಮಠ ಹೊಂದಿರುವ ಜಾಗ ಹಾಗೂ ಶಾಲೆ ತೆರೆಯಲು ಅನುಕೂಲ ಮಾಡಿಕೊಂಡಬೇಕೆಂದು ಮಠದ ವತಿಯಿಂತಿ ಯಧುವೀರದತ್ತ ಒಡೆಯರ್ ಅವರಿಗೆ ಮನವಿ ಪತ್ರ ನೀಡಿದರು. ಇದಕ್ಕೂ ಮುನ್ನ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಶ್ರೀಸದಾಶಿವಸ್ವಾಮೀಜಿಗಳ ಗದ್ದುಗೆಯನ್ನು ಶ್ರೀಸಿದ್ದಲಿಂಗಸ್ವಾಮೀಜಿ, ಸತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಉದ್ಘಾಟಿಸಿದರು.
ಸಮಾರಂಭದಲ್ಲಿ ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಮಹಾಸ್ವಾಮಿ, ಕನಕಪುರದ ದೇಗುಲಮಠ ಮುಮ್ಮಡಿ ನಿರ್ವಾಣಮಹಾಸ್ವಾಮಿಜೀ ಕಲ್ಲುಮಠದ ಮಹಾಂತಸ್ವಾಮೀಜಿ, ಮಂಜುನಾಥ ಶಿವಾಚಾರ್ಯ ಸ್ವಾಮೀಜಿ, ಕರಡಿ ಗವಿಮಠದ ಶಿವಾಶಂಕರಸ್ವಾಮೀಜಿ, ಸದಾಶಿವಸ್ವಾಮೀಜಿ, ರೈತನಾಯಕಿ ಸುನೀತಪುಟ್ಟಣ್ಣಯ್ಯ, ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್, ಎ.ಎಲ್.ಕೆಂಪೂಗೌಡ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ನಿರಂಜನ್‌ಬಾಬು, ಮಾಜಿ ಅಧ್ಯಕ್ಷ ಎಸ್.ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ ಸೇರಿದಂತೆ ವಿವಿಧ ಮಠಾಧೀಶರು, ಭಕ್ತರು, ಮುಖಂಡರು ಹಾಜರಿದ್ದರು.
ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ: ಸಚಿವ ಎಚ್.ಕೆ.ಪಾಟೀಲ್
ಅರಸರ ತ್ಯಾಗದ ಫಲ ಅಣೆಕಟ್ಟು: ಮೈಸೂರು ಮಹಾರಾಜದ ತ್ಯಾಗದ ಫಲವನ್ನು ಮಂಡ್ಯ ಜನತೆ ಅನುಭವಿಸುತ್ತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಸಂಸ್ಥಾನದ ಚಿನ್ನಾಭರಣವನ್ನು ಮಾರಾಟ ಮಾಡಿ ಒಳ್ಳೆಯ ಮನಸ್ಸಿನಿಂದ ಅಣೆಕಟ್ಟೆನಿರ್ಮಾಣ ಮಾಡಿದರು. ಅದರ ಫಲವಾಗಿ ಇಂದು ಜಿಲ್ಲೆಯ ಜನತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಜಿಲ್ಲೆಯಲ್ಲಿ ಜನಿಸಿದ ಜನರೇ ಪುಣ್ಯವಂತರು ಎಂದರು.