KRS ಸಮೀಪ ಶಬ್ದ ಕೇಳಿಸಿದ್ರೆ ಈ ಬಗ್ಗೆ ಸರ್ಕಾರಿ ಅಧಿಕಾರಿಗಳೇ ಮಾಹಿತಿ ನೀಡಬೇಕೆಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. KRS ಅಣೆಕಟ್ಟಿನ ಬಳೆ ಭಾರೀ ಶಬ್ದ ಕೇಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆ ಯದುವೀರ್ ಹೇಳಿಕೆ ನೀಡಿದ್ದಾರೆ.
ಮಂಡ್ಯ(ಆ.18): ಕೃಷ್ಣರಾಜಸಾಗರ ಅಣೆಕಟ್ಟೆಸುತ್ತಮುತ್ತ ಕೇಳಿಬಂದ ಭಾರೀ ಶಬ್ಧದ ಬಗ್ಗೆ ಸರ್ಕಾರದ ಅಧಿಕಾರಿಗಳೇ ಮಾಹಿತಿ ನೀಡಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮದ್ದೂರಿನ ಶ್ರೀ ನರಸಿಂಹಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಕೆಆರ್‌ಎಸ್ ಮೈಸೂರು - ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಇಂತಹ ಸ್ಥಳದಲ್ಲಿ ಗಣಿಗಾರಿಕೆ ಸ್ಫೋಟದಿಂದ ಈ ಶಬ್ಧ ಕೇಳಿಬಂದಿದೆಯೋ ಅಥವಾ ಇತರೆ ಕಾರಣ ಇರಬಹುದು ಎಂದು ಸಂಬಂಧಿಸಿದ ಅಧಿಕಾರಿಗಳು ಉತ್ತರ ನೀಡಬೇಕು ಎಂದರು.
ಒಂದೂ ಕಾಲು ರು. ಹರಕೆ ಹೊತ್ತ ಯದುವೀರ್ ಒಡೆಯರ್
ಬೇಬಿ ಬೆಟ್ಟಮತ್ತು ಆಸುಪಾಸಿನ ಸ್ಥಳಗಳಲ್ಲಿ ಮೈಸೂರು ಮಹಾಸಂಸ್ಥಾನಕ್ಕೆ ಸೇರಿದ ಭೂಮಿಗಳ ಬಗ್ಗೆ ಜಿಲ್ಲಾಕಾರಿಗಳು ಸೂಕ್ತ ದಾಖಲೆ ನೀಡಿಲ್ಲ. ಈ ದಾಖಲೆ ಪಡೆಯುವ ಹಕ್ಕು ತಮ್ಮ ತಾಯಿ ಪ್ರಮೋದಾ ದೇವಿ ಅವರಿಗಿದೆ. ಆನಂತರ ಅದು ನಮಗೆ ಸೇರುತ್ತದೆ. ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ದಸರಾ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ:
ಕಳೆದ 400 ವರ್ಷಗಳಿಂದಲೂ ಮೈಸೂರು ರಾಜಮನೆತನ ಸಂಸ್ಥಾನದ ವತಿಯಿಂದ ದಸರಾ ಉತ್ಸವ ನಡೆಸಿಕೊಂಡು ಬರುತ್ತಿದೆ. ರಾಜ್ಯ ಸರ್ಕಾರ ಸಹ ತನ್ನದೇ ಆದ ಕಾರ್ಯಕ್ರಮಗಳನ್ನು ಆಚರಣೆ ಮಾಡುತ್ತದೆ. ನೆರೆ ಹಾವಳಿ ಇರುವುದರಿಂದ ನಾವು ಸಂಪ್ರದಾಯಬದ್ಧವಾಗಿ ನಡೆಸಿಕೊಂಡುವ ಬಂದಿರುವ ಧಾರ್ಮಿಕ ವಿಧಿ ವಿಧಾನಗಳನ್ನು ನಾವು ನೆರವೇರಿಸುತ್ತೇವೆ. ದಸರಾ ಹಬ್ಬದ ಆಚರಣೆಯನ್ನು ಅದ್ದೂರಿ ಅಥವಾ ಸರಳವಾಗಿ ಆಚರಿಸಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟವಿಚಾರವಾಗಿದೆ ಎಂದಷ್ಟೇ ಸೂಕ್ಷ್ಮವಾಗಿ ತಿಳಿಸಿದರು.