ಮಂಡ್ಯ: ದ.ಕ, ಮಡಿಕೇರಿಗೆ 1 ಲೋಡ್‌ ಮೇವು ರವಾನೆ

By Kannadaprabha NewsFirst Published Aug 18, 2019, 9:10 AM IST
Highlights

ಮಹಾಮಳೆಯಿಂದ ತತ್ತರಿಸಿರುವ ಮಡಿಕೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗೋವುಗಳ ಮೇವಿನ ಕೊರತೆ ನೀಗಿಸಲು ಮಂಡ್ಯ ಜಿಲ್ಲಾ ಭಾರತೀಯ ಗೋ ಪರಿವಾರದ ವತಿಯಿಂದ ಶುಕ್ರವಾರ ರಾತ್ರಿ 1 ಲೋಡ್‌ ಒಣ ಹುಲ್ಲನ್ನು ಕಳಿಸಿಕೊಡಲಾಯಿತು. ಮೇವು ಕೊಡುವವರು ಕರೆ ಮಾಡಿದರೆ ಆಯಾ ಗ್ರಾಮಕ್ಕೆ ಲಾರಿ ಅಥವಾ ಇತರೆ ವಾಹನ ಕಳಿಸಲು ವ್ಯವಸ್ಥೆ ಮಾಡಲಾಗಿದೆ.

ಮಂಡ್ಯ(ಆ.18): ಮಹಾಮಳೆಯಿಂದ ತತ್ತರಿಸಿರುವ ಮಡಿಕೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗೋವುಗಳ ಮೇವಿನ ಕೊರತೆ ನೀಗಿಸಲು ಮಂಡ್ಯ ಜಿಲ್ಲಾ ಭಾರತೀಯ ಗೋ ಪರಿವಾರದ ವತಿಯಿಂದ ಶುಕ್ರವಾರ ರಾತ್ರಿ 1 ಲೋಡ್‌ ಒಣ ಹುಲ್ಲನ್ನು ಕಳಿಸಿಕೊಡಲಾಯಿತು.

ರಾಮಚಂದ್ರಪುರ ಮಠದ ಸಲಹೆ ಮೇರೆಗೆ ಗೋ ಪರಿವಾರದ ಮುಖಂಡರಾದ ಆಡಿಟರ್‌ ಅನಂತರಾವ್‌, ಹನಿಯಂಬಾಡಿ ಸೋಮಶೇಖರ್‌ ಮೇವು ಸಂಗ್ರಹಣೆಗೆ ಮುಂದಾಗಿದ್ದರು. ಈ ಕೋರಿಕೆ ಮೇರೆಗೆ ಮದ್ದೂರು ತಾಲೂಕಿನ ಅಂಬರಹಳ್ಳಿ ಕೃಷ್ಣೇಗೌಡ, ಯಡಗನಹಳ್ಳಿಯ ಆನಂದ್‌ ತಮ್ಮ ಬಳಿ ಇದ್ದ ಮೇವನ್ನು ನೀಡಿದರು.

ಟೆರರ್ ಅಲರ್ಟ್: ಬೆಂಗಳೂರು ನಗರದಲ್ಲಿ ಕಟ್ಟೆಚ್ಚರ

ಬೆಳಗ್ಗೆ ಉಜಿರೆಯಿಂದ ಗೋ ಪರಿವಾರದ ರಾಮಭಟ್‌ ಕರೆತಂದಿದ್ದ ಲಾರಿಯಲ್ಲಿ ಎರಡು ಗ್ರಾಮಗಳಿಗೆ ತೆರಳಿ ಹುಲ್ಲನ್ನು ಲೋಡ್‌ ಮಾಡಲಾಯಿತು. ಸಂಜೆ 6 ಗಂಟೆ ವೇಳೆಗೆ ನಗರಕ್ಕೆ ಆಗಮಿಸಿದ ಮೇವು ತುಂಬಿದ ಲಾರಿಯನ್ನು ಸ್ವಾಯತ್ತ ಕಾಲೇಜಿನ ಬಳಿ ಬೀಳ್ಕೊಡಲಾಯಿತು.

ಸೋಮವಾರ 2 ಲೋಡುಗಳ ಜತೆಗೆ ಕೆರಗೋಡು ಗ್ರಾಮದಲ್ಲಿ 1 ಲೋಡ್‌ ಸಂಗ್ರಹಿಸಿ ಕಳಿಸಿಕೊಡಲಾಗುವುದು. ಕೊಡಗು ಹಾಗೂ ದಕ್ಷಿಣ ಕನ್ನಡದ ನೆರೆಯಿಂದಾಗಿ ಜಾನುವಾರುಗಳ ಮೇವಿಗೆ ತೀವ್ರ ಸಮಸ್ಯೆ ಆಗಿದೆ.

ಟೆರರ್ ಅಲರ್ಟ್: ಶಂಕಿತರನ್ನು ಮಂಗಳೂರು ಪೊಲೀಸರು ಖೆಡ್ಡಾಗೆ ಬೀಳಿಸಿದ್ದು ಹೀಗೆ...

ಕೊಡಗಿನ ಜನರ ಋುಣ ತೀರಿಸುವ ಜವಾಬ್ದಾರಿ ಜಿಲ್ಲೆಯ ಜನರ ಮೇಲಿದೆ. ಆದ್ದರಿಂದ ಜನತೆ ಮೇವನ್ನು ನೀಡಬೇಕು. ಮೇವು ಕೊಡುವವರು ಕರೆ ಮಾಡಿದರೆ ಆಯಾ ಗ್ರಾಮಕ್ಕೆ ಲಾರಿ ಅಥವಾ ಇತರೆ ವಾಹನ ಕಳಿಸಲಾಗುವುದು. ಆಸಕ್ತರು 944826816 ಸಂಪರ್ಕಿಸಬೇಕೆಂದು ಅನಂತ್‌ ರಾವ್‌ ಕೋರಿದರು.

click me!