‘ಹುಲಿ ಪತ್ರಿಕೆ 1’ ಕಾದಂಬರಿ ಬಿಡುಗಡೆ ಮಾಡಿದ ಯದುವೀರ್

By Kannadaprabha News  |  First Published Jul 2, 2020, 11:01 AM IST

ಅನುಗ್ರಹ ಪ್ರಕಾಶನವು ಹೊರತಂದಿರುವ ಅನುಷ್‌ ಎ. ಶೆಟ್ಟಿಅವರು ಬರೆದಿರುವ ’ಹುಲಿ ಪತ್ರಿಕೆ 1’ ಎಂಬ ಕಾದಂಬರಿಯನ್ನು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮೈಸೂರಿನ ಅರಮನೆಯಲ್ಲಿ ಬುಧವಾರ ಬಿಡುಗಡೆಗೊಳಿಸಿದರು.


ಮೈಸೂರು(ಜು.02): ಅನುಗ್ರಹ ಪ್ರಕಾಶನವು ಹೊರತಂದಿರುವ ಅನುಷ್‌ ಎ. ಶೆಟ್ಟಿಅವರು ಬರೆದಿರುವ ’ಹುಲಿ ಪತ್ರಿಕೆ 1’ ಎಂಬ ಕಾದಂಬರಿಯನ್ನು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮೈಸೂರಿನ ಅರಮನೆಯಲ್ಲಿ ಬುಧವಾರ ಬಿಡುಗಡೆಗೊಳಿಸಿದರು.

ಅನುಗ್ರಹ ಪ್ರಕಾಶನವು ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಮೈಸೂರಿನ ಸಂಸ್ಥೆಯಾಗಿದೆ. ಇದೀಗ ಅನುಷ್‌ ಎ ಶೆಟ್ಟಿಅವರು ಬರೆದಿರುವ ’ಹುಲಿ ಪತ್ರಿಕೆ 1’ ಎಂಬ ಕಾದಂಬರಿಯು ಬಿಡುಗಡೆಯಾಗಿದ್ದು, ಕಾದಂಬರಿಯು ಪುಸ್ತಕ ರೂಪದಲ್ಲಿ ಮತ್ತು ಮೈಲಾಂಗ್‌ ಬುಕ್ಸ್‌ ಎಂಬ ಅಪ್ಲಿಕೇಶನ್‌ನಲ್ಲಿ ಇ-ಬುಕ್‌ ರೂಪದಲ್ಲಿ ಇಂದಿನಿಂದ ಓದುಗರಿಗೆ ಲಭ್ಯವಿದೆ.

Tap to resize

Latest Videos

ಮೂರು ಕರಡಿಗಳೊಂದಿಗೆ ಹೋರಾಡಿ ಬಚಾವಾದ ಬಾಲಮಣಿ

ಹುಲಿ ಪತ್ರಿಕೆಯು ಮೈಸೂರಿನ ಸ್ವಾತಂತ್ರ ನಂತರ ಪತ್ರಿಕೆಗಳಲ್ಲಿ ಒಂದಾಗಿದ್ದು, ಅದನ್ನೊಳಗೊಂಡಿರುವ ಕಾಲ್ಪನಿಕ ಕಾದಂಬರಿ ಇದಾಗಿದೆ. ಇದು ಲೇಖಕ ಅನುಷ್‌ ಶೆಟ್ಟಿಅವರ ಐದನೇ ಕಾದಂಬರಿಯಾಗಿದ್ದು, ‘ಆಹುತಿ’, ’ಕಳ್ಬೆಟ್ಟದ ದರೋಡೆಕೋರರು’, ’ಜೋಡ್ಪಾಲ’ ಮತ್ತು ‘ನೀನು ನಿನ್ನೊಳಗೆ ಖೈದಿ’ ಇವರ ಇತರ ಕಾದಂಬರಿಗಳಾಗಿವೆ. ‘ಕಳ್ಬೆಟ್ಟದ ದರೋಡೆಕೋರರು’ ಕಾದಂಬರಿಯು ಸಿನಿಮಾವಾಗಿ ಕೂಡ ಹೊರಬಂದಿದೆ.

ಕೊರೋನಾ ಪರಿಸ್ಥಿತಿಯಿಂದಾಗಿ ಹೊರಗೆಲ್ಲೂ ಸಭೆ ಸಮಾರಂಭಗಳು ಜರುಗದಿರುವುದರಿಂದ ಯದುವೀರ್‌ ಅವರು ತಮ್ಮ ನಿವಾಸದಲ್ಲೇ ಪುಸ್ತಕ ಲೋಕಾರ್ಪಣೆ ಗೊಳಿಸಿದರು.

ಮಂಗಳೂರಿನಲ್ಲಿ ಜನಿಸಿದ, ಹುಣಸೂರಿನಲ್ಲಿ ಓದಿದ ಅನುಷ್‌ ಎ ಶೆಟ್ಟಿ, ಮೈಸೂರು ವಿವಿಯ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ,ಎಸ್ಸಿ ಪಡೆದಿದ್ದಾರೆ. ಗೆಳೆಯರೊಂದಿಗೆ ಸೇರಿ ’ನಾವು’ ಮತ್ತು ’ರಿದಂ ಅಡ್ಡ’ ಬ್ಯಾಂಡ್‌ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿರುತ್ತಾರೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವ ಕಡೆಗೆ ಬಂದ ಅನುಷ್‌ ಎಲ್ಲಾ ಕಾದಂಬರಿಗಳ ಮೂಲವಸ್ತು ಪ್ರಕೃತಿಯೇ ಆಗಿರುವುದು ವಿಶೇಷ.

click me!