
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಜೂ.21): ಹಣ ಅಂದ್ರೆ ಹೆಣ ಕೂಡ ಬಾಯಿ ತೆರೆಯುತ್ತೆ ಎಂಬ ಗಾದೆ ಮಾತಿದೆ. ಸಾಮಾನ್ಯವಾಗಿ ಹಣ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳು ಸಿಕ್ಕರೆ ಯಾರು ಕೂಡ ಬೇಡ ಅನ್ನಲ್ಲ, ಜೊತೆಗೆ ಸಿಕ್ರೆ ಯಾರಿಗೂ ಕೂಡ ಕೊಡಲ್ಲ. ಯಾಕಂದ್ರೆ ಅಂತಹ ಕಾಲದಲ್ಲಿ ನಾವಿದೀವಿ. ಆದ್ರೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪೋಲಿಸ್ ಠಾಣೆಯ ಪೇದೆ ತಿರುಪತಿಗೌಡ ಎಂಬುವವರು ತಮಗೆ ರಸ್ತೆಯಲ್ಲಿ ಸಿಕ್ಕ ಹಣ ಹಾಗೂ ಇತರೆ ದಾಖಲಾತಿಗಳನ್ನು ಮರಳಿ ವಾಪಸ್ ಹಣ ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ. ಇದರಿಂದ ಪೋಲಿಸ್ ತಿರುಪತಿಗೌಡ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mysuru Bengaluru Expressway Accident: ಮೈ-ಬೆಂ ದಶಪಥ ಹೆದ್ದಾರಿ ಮತ್ತೊಂದು ಭೀಕರ
ಮಗಳ ಪೀಸ್ ಕಟ್ಟಲು ತಂದ ಹಣ ಕಳೆದುಕೊಂಡ ಮಹಿಳೆ:
ನಿಜವಾಗಿಯೂ ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡಾಗ ಆಗುವ ದುಃಖ-ನೋವು ಹೇಳತಿರದು. ಅಂತಹ ಕಳೆದುಕೊಂಡ ಹಣ ಸಿಕ್ಕಾಗ ಆಗುವ ಸಂತೋಷ-ಹರ್ಷವೂ ಕೂಡ ಹೇಳತಿರದು. ಅಂತಹ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಚಿರಲದಿನ್ನಿ ಗ್ರಾಮದ ಕಸ್ತೂರಿ ಪಾಟೀಲ್ ಎಂಬ ಮಹಿಳೆ ಕೆಂಭಾವಿ ಪಟ್ಟಣಕ್ಕೆ ತನ್ನ ಮಗಳ ಖಾಸಗಿ ಶಾಲೆಯ ಅಡ್ಮಿಷನ್ ಗಾಗಿ ಬಂದಿದ್ದಳು. ತನ್ನ ಮಗಳ ಶಾಲಾ ಶುಲ್ಕ ಕಟ್ಟಲು 10 ಸಾವಿರ ರೂ. ಹಾಗೂ ಆಧಾರ್ ಕಾರ್ಡ್ ಸೇರಿದಂತೆ ಇತರೆ ಪ್ರಮುಖ ದಾಖಲಾತಿಗಳು ಇರುವ ಪರ್ಸ್ ನ್ನು ಜನದಟ್ಟಣೆ ಇರುವ ಜಾಗದಲ್ಲಿ ಕಳೆದುಕೊಂಡಿದ್ದಾಳೆ.
ಆ ವೇಳೆ ಕಸ್ತೂರಿ ಪಾಟೀಲ್ ತನ್ನ 10 ಸಾವಿರ ರೂ. ಹಣ ಹಾಗೂ ದಾಖಲಾತಿಗಾಗಿ ಬಹಳಷ್ಟು ಹುಡುಕಾಟ ನಡೆಸಿದ್ದಾಳೆ. ಆದ್ರೆ 10 ಸಾವಿರ ರೂ. ಹಣ ಹಾಗೂ ಯಾವುದೇ ದಾಖಲಾತಿಗಳು ಸಿಕ್ಕಿಲ್ಲ. ಇದರಿಂದ ಕುಸ್ತೂರಿ ಪಾಟೀಲ್ ತನ್ನ ಗ್ರಾಮವಾದ ಚಿರಲದಿನ್ನಿ ವಾಪಸ್ ಹೋಗಿದ್ದಾಳೆ.
Shivamogga: ಇಂಜೆಕ್ಷನ್ ಪಡೆದ ಬಳಿಕ ಕಾಲಿನ ಸ್ವಾಧೀನ ಕಳೆದುಕೊಂಡ ಬಾಲಕಿ! ವೈದ್ಯರ
ಕಾನ್ಸ್ ಟೇಬಲ್ ತಿರುಪತಿಗೌಡ ಆದರ್ಶ ನಡೆ:
ಕಸ್ತೂರಿ ಪಾಟೀಲ್ ಎಂಬ ಮಹಿಳೆ ಕಳೆದುಕೊಂಡ 10 ಸಾವಿರ ರೂ. ಹಣ ಹಾಗೂ ಇತರೆ ದಾಖಲಾತಿ ಇರುವ ಪರ್ಸ್ ಕೆಂಭಾವಿ ಪೋಲಿಸ್ ಠಾಣೆಯ ಕಾನ್ಸ್ ಟೇಬಲ್ ತಿರುಪತಿಗೌಡ ಅವರ ಕೈಗೆ ಸಿಕ್ಕಿದೆ. ಆಗ ಪೇದೆ ತಿರುಪತಿಗೌಡ ಪರ್ಸ್ ನಲ್ಲಿದ್ದ ಆಧಾರ್ ಕಾರ್ಡ್ ನ್ನು ನೋಡಿದಾಗ ಅದು ಮುದ್ದೇಬಿಹಾಳ ತಾಲೂಕು ಎಂಬ ವಿಳಾಸ ನೋಡ್ತಾರೆ. ಆಗ ಅವ್ರು ಮುದ್ದೇಬಿಹಾಳ ಠಾಣೆಗೆ ಸಂಪರ್ಕಿಸಿ, ಕಸ್ತೂರಿ ಪಾಟೀಲ್ ಅವರ ಮಾಹಿತಿಯನ್ನು ಪಡೆಯುತ್ತಾರೆ. ನಂತರ ಮುದ್ದೇಬಿಹಾಳ ತಾಲೂಕಿನ ಚಿರಲದಿನ್ನಿ ಗ್ರಾಮದ ಕಸ್ತೂರಿ ಪಾಟೀಲ್ ಅವರ ಗಂಡನಿಗೆ ಪೋನ್ ಮಾಡಿ, ನಂತರ ಮಹಿಳೆಯನ್ನಿ ಸಂಪರ್ಕಿಸಿ 10 ಸಾವಿರ ರೂ. ಹಣ ಹಾಗೂ ಪ್ರಮುಖ ದಾಖಲೆಗಳನ್ನು ಕಳೆದುಕೊಂಡ ಕಸ್ತೂರಿ ಪಾಟೀಲ್ ಅವ್ರಿಗೆ ವಾಪಸ್ ನೀಡಿ ಪೇದೆ ತಿರುಪತಿಗೌಡ ಆದರ್ಶ ಮೆರೆದಿದ್ದಾನೆ. ಪೋಲಿಸ್ ಕಾನ್ಸ್ ಟೇಬಲ್ ತಿರುಪತಿಗೌಡ ಅವರ ಆದರ್ಶದ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ.