ಪೇಜಾವರ ಶ್ರೀಗಳಿಂದ ಕಠಿಣ ಯೋಗ: ಇತರ ಮಠಾಧೀಶರಿಂದಲೂ ಯೋಗ ದಿನಾಚರಣೆ

By Govindaraj S  |  First Published Jun 21, 2023, 12:41 PM IST

ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಪ್ರಧಾನಿ ಮೋದಿ 9 ವರ್ಷಗಳ ಹಿಂದೆ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಎಂದು ಘೋಷಿಸಿದ್ದಾರೆ. ದೇಶ ವಿದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜನ ಆಚರಿಸುತ್ತಿದ್ದಾರೆ. 


ಉಡುಪಿ (ಜೂ.21): ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಪ್ರಧಾನಿ ಮೋದಿ 9 ವರ್ಷಗಳ ಹಿಂದೆ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಎಂದು ಘೋಷಿಸಿದ್ದಾರೆ. ದೇಶ ವಿದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜನ ಆಚರಿಸುತ್ತಿದ್ದಾರೆ. ಉಡುಪಿ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸ್ವತಃ ಯೋಗ ಪಟು. ತನ್ನ ದೈನಂದಿನ ಚಟುವಟಿಕೆಗಳ ನಡುವೆ ಸಮಯ ಸಿಕ್ಕಷ್ಟು ಕಾಲ ಶ್ರೀಗಳು ಯೋಗಾಭ್ಯಾಸ ಮಾಡುತ್ತಾರೆ. ತಮಿಳುನಾಡಿನ ಚೆನ್ನೈ ಪ್ರವಾಸದಲ್ಲಿರುವ ಪೇಜಾವರ ಶ್ರೀಗಳು, ಇಂದು ಬೆಳಗ್ಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಮಾಡಿದರು.

ಮಠದಲ್ಲಿ ದೇವರ ಗರ್ಭಗುಡಿಯ ಮುಂಭಾಗ ಸ್ವಾಮೀಜಿ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶನ ಮಾಡಿದರು. ಮಠದ ಶಿಷ್ಯರು ಪೇಜಾವರ ಶ್ರೀಗಳಿಗೆ ಸಾತ್ ನೀಡಿದರು. ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಕಾಪಾಡಲು ಯೋಗ ಅತ್ಯವಶ್ಯಕ. ಎಲ್ಲರೂ ಸೂರ್ಯ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಪೇಜಾವರ ಸ್ವಾಮೀಜಿ ಕರೆ ನೀಡಿದ್ದಾರೆ. ಅರವತ್ತರ ಹರೆಯದಲ್ಲೂ ಪೇಜಾವರ ಶ್ರೀಗಳು , ಯುವಕರು ನಾಚುವಷ್ಟು ಸಕ್ರಿಯರಾಗಿರುತ್ತಾರೆ. ಕೇವಲ ಸಾಮಾನ್ಯ ಆಸನಗಳು ಮಾತ್ರವಲ್ಲದೆ ಅತ್ಯಂತ ಕಠಿಣ ಯೋಗಾಸನಗಳನ್ನು ಮಾಡುವುದರಲ್ಲೂ ವಿಶ್ವ ಪ್ರಸನ್ನ ತೀರ್ಥರು ಸಿದ್ದಹಸ್ತರು. 

Tap to resize

Latest Videos

undefined

ಅಂತಾರಾಷ್ಟ್ರೀಯ ಯೋಗ ದಿನ: ಕೊಡಗಿನಲ್ಲಿ ಯೋಗಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು

ಪುತ್ತಿಗೆ ಸ್ವಾಮೀಜಿ ಯೋಗ ಮತ್ತು ಸಂದೇಶ: ಪರ್ಯಾಯ ಸಂಚಾರದ ನಿಮಿತ್ತ ವಾರಣಾಸಿಗೆ ಆಗಮಿಸಿದ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರನ್ನು ಅತ್ಯಂತ ಪ್ರಾಚೀನ ವಿದ್ಯಾಸಂಸ್ಥೆಯಾದ ಕಾಶೀ ಹಿಂದೂ ವಿಶ್ವವಿದ್ಯಾಲಯದ ಮಾಲವೀಯ ಭವನದಲ್ಲಿ ಗೌರವಾದರಗಳಿಂದ ಸ್ವಾಗತಿಸಿ ಭಗವದ್ಗೀತಾ ಉಪನ್ಯಾಸವನ್ನು ಆಯೋಜಿಸಲಾಗಿತ್ತು.  

9ನೇ ವಿಶ್ವ ಯೋಗ ದಿನಾಚರಣೆ: ವಿಧಾನಸೌಧ ಮುಂಭಾಗ ಯೋಗಾಸನ ಮಾಡಿ ಗಮನಸೆಳೆದ ಗಣ್ಯರು

ಅಂತಾರಾಷ್ಟ್ರೀಯ ಯೋಗ ದಿವಸದ ಹಿನ್ನೆಲೆಯಲ್ಲಿ ಗೀತಾ ಯೋಗದ ಆವಶ್ಯಕತೆಯನ್ನು ಈ ವೇಳೆ ಸ್ವಾಮೀಜಿ ವಿವರಿಸಿದರು. ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಗೀತಾ ಲೇಖನ ಯಜ್ಞದ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ಮಾಲವೀಯ ಭವನದ ನಿರ್ದೇಶಕರಾದ ಪ್ರೋ.ರಾಜಾರಾಮ್ ಶುಕ್ಲ , ಕಾಶಿಯ ಸಂಪೂರ್ಣಾನಂದ ವಿಶ್ವವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ ಪ್ರೋ. ವ್ರಜಭೂಷಣ ಓಝಾ ಮುಂತಾದವರು ಉಪಸ್ಥಿತರಿದ್ದರು. ಇದೆ ವೇಳೆ ಯೋಗಾಸನಗಳನ್ನು ಮಾಡುವ ಮೂಲಕ ಪುತ್ತಿಗೆ ಶ್ರೀಗಳು ಗಮನ ಸೆಳೆದರು.

click me!