ಸ್ಮಾರ್ಟ್‌ ಸಿಟಿ ಅಕ್ರಮ ಕಾಮಗಾರಿ ಕುರಿತು ತನಿಖೆ: ಸಚಿವ ಜಾರಕಿಹೊಳಿ

By Kannadaprabha News  |  First Published Jun 21, 2023, 8:12 PM IST

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಲೋಕಾಯುಕ್ತದಲ್ಲಿ ಬುಡಾ ಆಯುಕ್ತರ ವಿರುದ್ಧವೂ ದೂರು ದಾಖಲಾಗಿದೆ ಮುಂದಿನ ತನಿಖೆ ನಡೆಸಲಾಗುವುದು: ಸತೀಶ ಜಾರಕಿಹೊಳಿ 


ಬೆಳಗಾವಿ(ಜೂ.21): ನಗರದ ಟಿಳಕವಾಡಿ ಪ್ರದೇಶದಲ್ಲಿರುವ ವ್ಯಾಕ್ಸಿನ್‌ ಡಿಪೋದಲ್ಲಿ ಅಕ್ರಮವಾಗಿ ಸ್ಮಾರ್ಟ್‌ ಸಿಟಿ ಕಾಮಗಾರಿ ಮಾಡಿರುವ ಬೆಳಗಾವಿ ಸ್ಮಾರ್ಟ್‌ ಸಿಟಿ ಎಂಡಿಗಳ ವಿರುದ್ಧ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ದೂರು ದಾಖಲು ಮಾಡಿದ್ದು ನಿಜ. ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡ್ಮೂರು ವರ್ಷಗಳಿಂದ ಸ್ಮಾರ್ಟ್‌ ಸಿಟಿ ಕಾಮಗಾರಿ ಅಕ್ರಮವಾಗಿ ನಡೆಯುತ್ತಿದೆ. ಇದರಲ್ಲಿ ಎರಡ್ಮೂರು ಸ್ಮಾರ್ಟ್‌ ಸಿಟಿ ಎಂಡಿಗಳು ಬರುತ್ತಾರೆ. ಆರೋಗ್ಯ ಇಲಾಖೆಯ ಅನುಮತಿ ಪಡೆದಿಲ್ಲ. ಗಿಡ ಕಡಿದಿದ್ದಾರೆ. ಔಷಧಿ ಸಸಿಯುಳ್ಳ ಪ್ರದೇಶವನ್ನು ಹಾಳು ಮಾಡಿ ಸ್ಮಾರ್ಟ್‌ ಸಿಟಿ ಕಾಮಗಾರಿ ಮಾಡಿದ್ದಾರೆ. ಹೀಗಾಗಿ ಪೊಲೀಸರು ಅದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು. ಕಳೆದ ಮೂರು ವರ್ಷಗಳಿಂದ ಸಂಬಂಧಿಸಿದವರ ಗಮನಕ್ಕೆಇದ್ದರೂ ಕೂಡ ರಾಜಕೀಯ ಒತ್ತಡದಿಂದ ಏನೂ ಮಾಡಲು ಆಗಿರಲಿಲ್ಲ. ಸದ್ಯ ವಾತಾವರಣ ಬೇರೆ ಇದೆ ಪ್ರಕರಣ ದಾಖಲಿಸಿದ್ದಾರೆ. ಇದು ಮುಕ್ತವಾಗಿ ತನಿಖೆ ನಡೆಸಲಾಗುವುದು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಲೋಕಾಯುಕ್ತದಲ್ಲಿ ಬುಡಾ ಆಯುಕ್ತರ ವಿರುದ್ಧವೂ ದೂರು ದಾಖಲಾಗಿದೆ ಮುಂದಿನ ತನಿಖೆ ನಡೆಸಲಾಗುವುದು ಎಂದರು.

Tap to resize

Latest Videos

ಕೇಂದ್ರದಿಂದ ಸರ್ವರ್‌ ಹ್ಯಾಕ್‌, ಕರ್ನಾಟಕದ ಯೋಜನೆಗಳಿಗೆ ಅಡ್ಡಿ ಯತ್ನ: ಜಾರಕಿಹೊಳಿ

ಕೇಂದ್ರದಲ್ಲಿ 7 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ದಾಸ್ತಾನು ಇದೆ. ಅದನ್ನು ನಮ್ಮ ಬೇಡಿಕೆ ಇರುವುದು 2 ಲಕ್ಷ ಮೆಟ್ರಿಕ್‌ ಟನ್‌ ಅಷ್ಟೆ. ಮೊದಲು ಕೇಂದ್ರ ಆಹಾರ ಸಮಿತಿ ಕೊಡುವುದಾಗಿ ಹೇಳಿಈಗ ಇಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಾಗೂ ಜನರಿಗೆ ದ್ವಂದ್ವ ನಿಲುವಿನಬಗ್ಗೆ ತಿಳಿಸಲು ಪ್ರತಿಭಟನೆ ನಡೆಸಲಾಗುವುದು ಎಂದರು.

ರಾಜ್ಯದ ಜನರಿಗೆ ಒಂದು ತಿಂಗಳು ಅಕ್ಕಿಸಿಗುವುದು ತಡವಾಗಬಹುದು. ಆದರೆ ನಾವು ಭರವಸೆ ನೀಡಿದ ಹಾಗೆ ಕೊಟ್ಟೆಕೊಡುತ್ತೇವೆ. ನಮ್ಮಗ್ಯಾರಂಟಿ ಯೋಜನೆ ಬಿಜೆಪಿಗೆ ಭಯ ಹುಟ್ಟಿಸಿರುವುದು ಲೋಕಸಭಾ ಚುನಾವಣೆವರೆಗೆ ಕಾದು ನೋಡಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದವರನ್ನು ಕೇಳಿ ನಮ್ಮಸರ್ಕಾರ ನಡೆಸಬೇಕಾ ಎಂದುಪ್ರಶ್ನಿಸಿದರು.

ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗುವ ಮನ್ಸೂಚನೆ ಇದೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಅಲ್ಲಿ ನೀರಿನ ಟ್ಯಾಂಕರ್‌ ಮೂಲಕ ಸರಬರಾಜು ಮಾಡಲು ಸೂಚಿಸಲಾಗಿದೆ ಎಂದರು.

click me!