Yadgir: ತಾಯಿಗಾಗಿ ದೇವಸ್ಥಾನ ಕಟ್ಟಿದ ಶಾಸಕ ರಾಜೂಗೌಡ: ಅಮೃತ ಶಿಲೆಯಿಂದ ನಿರ್ಮಾಣ

By Govindaraj S  |  First Published May 8, 2022, 9:39 PM IST

ತಾಯಿ ಈ ಭೂಮಿ ಮೇಲಿರುವ ಏಕೈಕ ನಡೆದಾಡುವ ದೈವ. ಜಗತ್ತಿನಲ್ಲಿ ತಾಯಿ ಪ್ರೀತಿ ಮತ್ತು ತ್ಯಾಗಕ್ಕೆ ಯಾರು‌ ಕೂಡ ಸರಿಸಮಾನರಲ್ಲಾ. ಯಾರು ಎಷ್ಟೇ ಎತ್ತರಕ್ಕೆ ಬೆಳೆದ್ರು ತಾಯಿ‌ಯ ಮುಂದೆ ಅವರು ಮಕ್ಕಳೇ.


ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ (ಮೇ.08): ತಾಯಿ (Mother) ಈ ಭೂಮಿ ಮೇಲಿರುವ ಏಕೈಕ ನಡೆದಾಡುವ ದೈವ. ಜಗತ್ತಿನಲ್ಲಿ ತಾಯಿ ಪ್ರೀತಿ ಮತ್ತು ತ್ಯಾಗಕ್ಕೆ ಯಾರು‌ ಕೂಡ ಸರಿಸಮಾನರಲ್ಲಾ. ಯಾರು ಎಷ್ಟೇ ಎತ್ತರಕ್ಕೆ ಬೆಳೆದ್ರು ತಾಯಿ‌ಯ ಮುಂದೆ ಅವರು ಮಕ್ಕಳೇ. ರಾಜಕೀಯದವರು ಕುಟುಂಬಕ್ಕೆ ಸಮಯ ಕೊಡುವುದಿಲ್ಲ ಅನ್ನೋ ಮಾತಿದೆ. ಅಲ್ಲದೇ ಎಷ್ಟೋ ರಾಜಕಾರಣಿಗಳು (Politicians) ಅವರ ತಂದೆ-ತಾಯಿ‌ರನ್ನು ಕೊನೆಗಳಿಗೆಯಲ್ಲಿ ಕೈಬಿಟ್ಟ ಸಂಗತಿಗಳು ನಮ್ಮ ಕಣ್ಣ ಮುಂದಿವೆ. ಇಂತಹ ನಿದರ್ಶನಗಳ ಮಧ್ಯೆ ಯಾದಗಿರಿ ಜಿಲ್ಲೆಯ ಸುರಪುರದ ಶಾಸಕ ರಾಜೂಗೌಡ (MLA Raju Gowda) ಮಾತ್ರ ವಿಭಿನ್ನವಾಗಿದ್ದಾರೆ. ಅವರ ತಾಯಿ ಬದುಕಿದ್ದಾಗ ಎಷ್ಟು ಪ್ರೀತಿ ಮಾಡಿದರೋ ಅವರು ಸತ್ತ ಮೇಲು ಅದಕ್ಕಿಂತ ಜಾಸ್ತಿ ಪ್ರೀತಿ ಮಾಡುತ್ತಿದ್ದಾರೆ. ಅವರ ತಾಯಿ ಜೊತೆಗೆ ಇರದಿದ್ದರೂ ಅವರ ನೆರಳಿನಲ್ಲಿ ಜೀವನ ಕಳೆಯುತ್ತಿದ್ದಾರೆ.

Tap to resize

Latest Videos

undefined

ಅಮೃತ ಶಿಲೆಯಿಂದ ತಾಯಿ ದೇವಸ್ಥಾನ ನಿರ್ಮಿಸಿದ ಶಾಸಕ ರಾಜೂಗೌಡ: ಅಮೃತ ಶಿಲೆಯಿಂದ (Marble) ನಿರ್ಮಾಣಗೊಂಡಿರುವ ಅದ್ಬುತ ದೇವಸ್ಥಾನ (Temple). ಹಸಮ್ಮುಖಿ ರೂಪದಲ್ಲಿ ಕುಳಿತಿರುವ ತಾಯಿ. ತಾನು ಶಾಸಕ ಅನ್ನೊದು ಮರೆತು ತಾಯಿ ಮೂರ್ತಿಯನ್ನು ಸ್ವಚ್ಛಗೊಳಿಸುತ್ತಿರುವ ರಾಜೂಗೌಡ. ಇದು ಸುರಪುರದ ಬಿಜೆಪಿ ಶಾಸಕ ರಾಜೂಗೌಡ ತಮ್ಮ ಸ್ವಗ್ರಾಮ ಕೊಡೆಕಲ್ ನ ಜಮೀನಿನಲ್ಲಿ ಅವರ ತಾಯಿ ನೆನಪಿನಲ್ಲಿ ಕಟ್ಟಿಸಿರುವ ದೇವಸ್ಥಾನ. ಶಾಸಕ ರಾಜೂಗೌಡರು ತಮ್ಮ ತಾಯಿ‌ ತಿಮ್ಮಮ್ಮನವರ ನೆನಪಿಗಾಗಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಇಷ್ಟೇ ಅಲ್ಲದೇ ಅವರ ತಾಯಿ ಬಹಳಷ್ಟು ಪ್ರೀತಿಯಿಂದ ಸಾಕಾಗಿದ್ದ ಗೋವುಗಳಿಗಾಗಿ ಗೋಶಾಲೆ, ಕುರಿ ಸಾಗಾಣಿಕೆ ಜೊತೆಗೆ ನೈಸರ್ಗಿಕ ಕೃಷಿಗೆ ಸಹ ಮುಂದಾಗಿದ್ದಾರೆ.ಅವರ ತಾಯಿ ನಡೆದಾಡ ಸ್ಥಳ ಇಂದು ಶಾಂತಿಧಾಮವಾಗಿದೆ. ಅಷ್ಟೇ ಅಲ್ಲದೆ ಅವರ ತಾಯಿ ಸಮಾಧಿ ಬಳಿಯೇ ಮನೆ ನಿರ್ಮಾಣ ಮಾಡಿಕೊಂಡಿರುವ ರಾಜೂಗೌಡರು ಸದ್ಯ ಅಲ್ಲಿಯೇ ವಾಸವಾಗಿದ್ದಾರೆ.

ಯಾದಗಿರಿಯಲ್ಲೊಬ್ಬ ಗೋ ಪ್ರೇಮಿ: ಗೋವುಗಳ ನೀರಿನ ದಾಹ ತಣಿಸುತ್ತಿರುವ ಗಫರ್ ಕಾರ್ಯಕ್ಕೆ ಜನರ ಮೆಚ್ಚುಗೆ!

ಶಾಸಕ ರಾಜೂಗೌಡರಿಗೆ ತಾಯಿ ತಿಮ್ಮಮ್ಮನವರೇ ಸ್ಟ್ರೆಂತ್ ಆಗಿದ್ರು: ರಾಜೂಗೌಡರು ಶಾಸಕರ ಆಗೋಕೆ ಅವರ ತಾಯಿ ತಿಮ್ಮಮ್ಮ ಮತ್ತು ಅವರ ತಂದೆ ಶಂಭುನಗೌಡರ ಶ್ರಮ ಬಹಳಷ್ಟಿದೆ. ರಾಜೂಗೌಡರು ಸುರಪುರಕ್ಕೆ ಮಾತ್ರ ಶಾಸಕರು ಆದ್ರೆ ಸುರಪುರ ಕ್ಷೇತ್ರದ ಜನತೆಗೆ ತಿಮ್ಮಮ್ಮನವರೇ ಶಾಸಕಿಯಾಗಿದ್ರು, ಕ್ಷೇತ್ರದ  ಬಡವರ ಕಷ್ಟಕ್ಕೆ ತಿಮ್ಮಮ್ಮನವರೇ ಆಸರೆಯಾಗಿದ್ದರು. ಕಷ್ಟ ಹೇಳಿಕೊಂಡು ಮನೆಗೆ ಯಾರೇ ಬಂದರೂ ಅವರೇ ತಮ್ಮ ಕೈಯಾರ ಊಟ ಬಡಸಿ ಅವರ ಕಷ್ಟ ಆಲಿಸಿ ಅವರಿಗೆ ಸಹಾಯ ಮಾಡುತ್ತಿದ್ದರು. ಅಲ್ಲದೇ ಶಾಸಕ ರಾಜೂಗೌಡ ಮತ್ತು ಅವರ ಸಹೋದರ ಬಬ್ಲುಗೌಡ ಇಷ್ಟು ದೊಡ್ಡವಾರದ್ರು ದಿನಾಲೂ ಅವರ ತಾಯಿಯ ಕೈತುತ್ತು‌ ತಿನ್ನುತ್ತಿದ್ದರು. ರಾಜೂಗೌಡರಿಗೆ ರಾಜಕೀಯ ಒತ್ತಡ ಹೆಚ್ಚಾದ್ರೆ ಅವರ ತಾಯಿ ಮಡಿಲಲ್ಲಿ ಮಲಗಿ ವಿಶ್ರಾಂತಿ ಪಡೆಯೋದು ರೂಢಿ. ಆದರೆ ಅನಾರೋಗ್ಯದ ಹಿನ್ನೆಲೆ ಅವರ ತಾಯಿ ಎರಡು ವರ್ಷದ ಹಿಂದೆ ನಿಧನರಾದರು. ರಾಜೂಗೌಡರಿಗೆ ಅವರ ತಾಯಿ ಅಗಲಿಕೆ ಅತೀವ ನೋವು ನೀಡಿತು.‌ ಅಲ್ಲದೆ ಅವರ ತಾಯಿ ಮಡಿಲು ಅವರಿಗೆ ಬೇಕೆನ್ನಿಸತು. ಹೀಗಾಗಿ ರಾಜಸ್ಥಾನದ ವಿಶೇಷ ಶಿಲ್ಪಗಳಿಂದ ಅವರ ತಾಯಿ ಮೂರ್ತಿಯನ್ನು ಮತ್ತು ಆಂಧ್ರದ ಶಿಲ್ಪಿಗಳಿಂದ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.

ತಾಯಿ ಮೂರ್ತಿ ಸ್ವಚ್ಛಗೊಳಿಸುವ ಶಾಸಕ ರಾಜೂಗೌಡ: ಇನ್ನೂ ರಾಜೂಗೌಡರು ಅವರ ತಾಯಿ ಮೂರ್ತಿಯನ್ನು ಅವರೇ ಸ್ವಚಗೊಳಿಸಿ, ಪೂಜೆ ಮಾಡಿ ನಮಸ್ಕರಿಸಿ ಬಳಿಕವೇ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾರೆ. ಅವರ ಸಮಾಧಿ ಸ್ಥಳಕ್ಕೆ ಬಹಳಷ್ಟು ಆಭಾರಿಯಾಗಿರುವ ರಾಜೂಗೌಡ, ಎಲ್ಲಿಯೇ ಇದ್ರೂ ರಾತ್ರಿ ಎಷ್ಟೋ ಹೊತ್ತಾದ್ರು ವಾಪಸು ಇಲ್ಲಿಗೆ ಬಂದು ಬಿಡುತ್ತಾರೆ. ಅಲ್ಲದೆ ತಮ್ಮ ತಾಯಿಯ ಮುಖಚಿತ್ರವನ್ನು ಕೈಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಎಷ್ಟೋ ಜನ ತಂದೆ-ತಾಯಿಯರ ಮುಪ್ಪಿನ ಕಾಲದಲ್ಲಿ ಹೊರಗೆ ಹಾಕಿ, ಅವರ ಇಳಿ ವಯಸ್ಸಿನ ಜೀವನವನ್ನು ನರಕ ಮಾಡುತ್ತಾರೆ ಕೆಲ ಮಕ್ಕಳು‌‌‌. ಇಂತವರ ಮಧ್ಯೆ ತಾವು ಶಾಸಕರಾಗಿದ್ರು,  ಮಗುನಂತಿದ್ದು ಅವರ ಜೊತೆಗೆ ಜೀವನ ಕಳೆದು ಈಗ ಅವರನ್ನು ಕಳೆದುಕೊಂಡು ಅವರು ನಡೆದಾಡಿದ ಸ್ಥಳವನ್ನು ಶಾಂತಿಧಾಮ ಮಾಡಿರುವ ಶಾಸಕ ರಾಜೂಗೌಡ ಮತ್ತು ಅವರ ಸಹೋದರ ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ನಡೆದಾಡುವ ದೈವ ತಾಯಿಗಾಗಿ ನಡೆಯುತ್ತೆ ಇಲ್ಲಿ ನಿತ್ಯ ಪೂಜೆ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ ಗ್ರಾಮದ ಯುವ ಉದ್ಯಮಿ ಎಸ್.ಪಿ.ದಯಾನಂದ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹತ್ತು ವರ್ಷದ ಹಿಂದೆ ವಜ್ಜಲ ಗ್ರಾಮದ ಹೊರವಲಯದಲ್ಲಿ ತಮ್ಮ ತಾಯಿ ಸುಶೀಲಮ್ಮ ಪಟ್ಟಣಶೆಟ್ಟಿ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ತಾಯಿ ಸುಶೀಲಮ್ಮನವರ ಮೂರ್ತಿ ಪ್ರತಿಷ್ಠಾಪಿಸಿದ್ದು, ನಿತ್ಯವೂ ಪೂಜೆ ನಡೆಯುತ್ತದೆ.

ಯಾದಗಿರಿಯಲ್ಲಿ ಅದ್ದೂರಿ ಬಸವೇಶ್ವರ ಜಯಂತಿ ಆಚರಣೆ, ಕಾರು, ಬೈಕ್ ರ್‍ಯಾಲಿ, ರಾಜೂಗೌಡ ಸಖತ್ ಡ್ಯಾನ್ಸ್

ಕಷ್ಟಪಟ್ಟು ದುಡಿದ್ರೆ ಮುಂದಿನ ರಾಜ್ಯನಂತೆ ಮೆರೆಯಿತ್ತೀಯಾ ಎಂದಿದ್ರಂತೆ ಸುಶೀಲಮ್ಮ: ಉದ್ಯಮಿ ಎಸ್.ಪಿ.ದಯಾನಂದ ಅವರು ಬಹಳ ಕಷ್ಟಪಟ್ಟು ಮುಂದೆ ಬಂದವರು. ಜೀವನದಲ್ಲಿ ಕಷ್ಟಪಟ್ರೆ ಫಲ ಸಿಗುತ್ತೆ ಎಂಬುದಕ್ಕೆ ಇವರೇ ಉದಾಹರಣೆ, ದಯಾನಂದ ಅವರ ತಾಯಿ ಸುಶೀಲಮ್ಮ ಪಟ್ಟಣಶೆಟ್ಟಿ ಅವರು ದಯಾನಂದ ಅವರಿಗೆ ಒಂದು ಮಾತು ಹೇಳಿದ್ರಂತೆ ಅದೇನಂದ್ರೆ ಕಷ್ಟಪಟ್ಟು ದುಡಿದ್ರೆ ಮುಂದಿನ ರಾಜ್ಯನಂತೆ ಮೆರೆಯಿತ್ತೀಯಾ ಎಂದು ಮಾರ್ಮಿಕ ಹೇಳಿದ್ರಂತೆ ಅವರ ಮಾತಿನಂತೆ ದುಡಿದು ಈಗ ಒಬ್ಬ ಮಾದರಿ ಉದ್ಯಮಿಯಾಗಿದ್ದಾರೆ.

click me!