ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ಕಾರ್ ರ್ಯಾಲಿ ಮನೋರಂಜನೆ ಕೊಡ್ತು. ಒಂದೊಂದು ಕಾರ್ ಧೂಳೆಬ್ಬಿಸ್ತಾ ಹೋದಂಗೂ ಜನ ಹುಚ್ಚೆದ್ದು ಕುಣಿಯುತ್ತಿದ್ರು, ಕೇಕೆ ಹಾಕಿ, ಕುಣಿದು ಕುಪ್ಪಳಿಸಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.08): ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದ ಕಾರ್ ರ್ಯಾಲಿ (Car Rally) ಮನೋರಂಜನೆ ಕೊಡ್ತು. ಒಂದೊಂದು ಕಾರ್ ಧೂಳೆಬ್ಬಿಸ್ತಾ ಹೋದಂಗೂ ಜನ ಹುಚ್ಚೆದ್ದು ಕುಣಿಯುತ್ತಿದ್ರು, ಕೇಕೆ ಹಾಕಿ, ಕುಣಿದು ಕುಪ್ಪಳಿಸಿದ್ರೆ, ಅಂತರಾಷ್ಟ್ರೀಯ ಡ್ರೈವರ್ಗಳ ಜೊತೆ ಸ್ಥಳಿಯ ಪ್ರತಿಭೆಗಳು ನಾನಾ-ನೀನಾ ಅಂತ ತೊಡೆ ತಟ್ಟಿದ್ರು. ಭಾರತದ (India) ನಂಬರ್ ಓನ್ ಸ್ಪಂಟ್ ರೈಡರ್ ಪದ್ಮ ಪ್ರಶಾಂತ್‌ರಿಂದ (Padma Prashanth) ನಡೆದ ಸ್ಟಂಟ್ ಶೋ ಪ್ರೇಕಕರ ಮನಸೂರೆಗೊಂಡಿತು.,
ಕಾಫಿನಾಡಿನಲ್ಲಿ ನಡೆದ ಕಾರ್ ರ್ಯಾಲಿಯಲ್ಲಿ ಧೂಳೆಬ್ಬಿಸಿದ ಸವಾರರು: ಚಿಕ್ಕಮಗಳೂರು ನಗರದ ಮೌಂಟೇನ್‌ವ್ಯೂ ಶಾಲೆಯ ಆವರಣದಲ್ಲಿ ಅಬ್ಲೈಸ್ ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ ಎಫ್.ಎಂ.ಎಸ್.ಸಿ. ರ್ಯಾಲಿ ಭಾನುವಾರದ ಭರ್ಜರಿ ಮಜಾವನ್ನು ಜನರಿಗೆ ನೀಡಿತ್ತು. ಟ್ರ್ಯಾಕ್‌ನಲ್ಲಿ ಧೂಳೆಬ್ಬಿಸ್ತಾ ಸಾಗ್ತಿದ ಕಾರುಗಳು. ಧೂಳನ್ನ ಸೀಳಿ ಹೊರಬರ್ತಿರೋ ರ್ಯಾಲಿ ಕಾರ್ಗಳು ಜೊತೆಗೆ ತಿರುವುಗಳಲ್ಲಿ ಗಾಡಿಯನ್ನ ಬ್ಯಾಲೆನ್ಸ್ ಮಾಡುತ್ತಲೇ ಧೂಳೆಬ್ಬಿಸ್ತಾ ಎಕ್ಸಲೇಟರ್ ತುಳಿದ ಚಾಲಾಕಿ ಚಾಲಕ ಮಿಂಚಿನ ವೇಗದಲ್ಲಿ ನುಗ್ತಿದ ರೀತಿಯನ್ನು ನೋಡಿದ ಪ್ರೇಕ್ಷಕರು ಕೇಕೆ ಹಾಕುತ್ತಾ ಶಿಳ್ಳೆ ಹೊಡೆದರು.
ಕಾಫಿನಾಡ ಪೊಲೀಸರಿಗೆ ದೇಹ ದಂಡಿಸುವ ಚಾಲೆಂಜ್: ಬೆಸ್ಟ್ ಆಫರ್ ಕೊಟ್ಟ ಎಸ್‌ಪಿ
ಡರ್ಟ್ ಟ್ರ್ಯಾಕ್ ರ್ಯಾಲಿಯ ಮೊದಲೆರಡು ರೌಂಡ್ ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಮುಗಿದಿದ್ದು ಕಾಫಿನಾಡಲ್ಲಿ ಮೂರನೇ ರೌಂಡ್ ಆಯೋಜನೆಗೊಂಡಿದೆ. ಈ ರ್ಯಾಲಿಯಲ್ಲಿ 56 ಜನ ಕಾಂಪಿಟೇಟರ್ ಇದ್ದು 196 ಜನ ಎಂಟ್ರಿ ಇದೆ. ಏಕ ಕಾಲದಲ್ಲಿ 10 ರೀತಿಯ ವಿಭಾಗಗಳಿಗೆ ನಡೆದ ರ್ಯಾಲಿಯಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದ್ವು. ಮಾರುತಿ ಎಸ್ಟೀಮ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್ ಕಾರುಗಳು ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗುತ್ತಿದ್ವು. ಕೆಲವು ಕಾರ್ ಕ್ರೇಜ್ ಪ್ರಿಯರು ಮಿನಿಜಿಬ್ಸಿ, ಆಲ್ಟೋ ಹಾಗೂ 800 ಕಾರನ್ನೂ ತಂದು ರ್ಯಾಲಿಯಲ್ಲಿ ಡ್ರೈವ್ ಮಾಡಿ ಖುಷಿಪಟ್ಟರು.
ಭಾರತದ ನಂಬರ್ ಓನ್ ಸ್ಪಂಟ್ ರೈಡರ್ ಪದ್ಮ ಪ್ರಶಾಂತ್‌ರಿಂದ ಸ್ಟಂಟ್ ಶೋ: ನೋಡುಗರ ಮನೋರಂಜನೆಗೆಂದೇ ಸಿದ್ಧಪಡಿಸಿದ್ದ ಟ್ರ್ಯಾಕ್‌ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದ್ರು. 3 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡ್ದೋರ ಎದೆ ಮೇಲೆ ಹೋದಂತಿತ್ತು. ಈ ಱಲಿಯಲ್ಲಿ ಭಾರತದ ನಂಬರ್ ಓನ್ ಸ್ಪಂಟ್ ರೈಡರ್ ಪದ್ಮ ಪ್ರಶಾಂತ್ ರಿಂದ ಸ್ಟಂಟ್ ಶೋ ಸೇರಿದಂತೆ ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಹಾಸನ, ಮೂಡಿಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗದ ನ್ಯಾಷನಲ್, ಇಂಟರ್‌ನ್ಯಾಷನಲ್ ಸ್ಪರ್ಧಾಳುಗಳು ಭಾಗವಹಿಸಿದ್ದರು. ಚೆನ್ನೈ, ಕೇರಳ, ತಮಿಳುನಾಡಿನಿಂದಲೂ ಸ್ಪರ್ಧಾಳುಗಳು ಬಂದಿದ್ದರು.
ಕಾಫಿನಾಡಿನಲ್ಲಿ ಚುರುಕುಗೊಂಡ ಕೃಷಿ ಕಾರ್ಯ: ಮಲೆನಾಡು, ಬಯಲು ಸೀಮೆಯಲ್ಲೂ ಬಿತ್ತನೆ ಕಾರ್ಯ
ಹೊರ ಜಿಲ್ಲೆ-ರಾಜ್ಯದ ಸ್ಪರ್ಧಾಗಳುಗಳಿಗೆ ಸ್ಥಳಿಯ ಪ್ರತಿಭೆಗಳು ತೊಡೆ ತಟ್ಟಿದ್ದು ರ್ಯಾಲಿಯ ವಿಶೇಷವಾಗಿತ್ತು. ಇನ್ನು ಇದೇ ಮೊದಲ ಬಾರಿಗೆ ರ್ಯಾಲಿಯಲ್ಲಿ ಪಾಲ್ಗೊಂಡು ಸ್ಥಳಿಯ ಪ್ರತಿಭೆ ಶ್ರೀಮಯಿ ಇದೇ ಫಸ್ಟ್ ರ್ಯಾಲಿ. ಆರಂಭದಲ್ಲಿ ಭಯವಾಗಿತ್ತು. ಈಗ ರೈಡ್ ಮಾಡಿದ ಮೇಲೆ ಭಯವಿಲ್ಲ. ಮುಂದಿನ ದಿನಗಳಲ್ಲಿ ಮತ್ತೇ ರ್ಯಾಲಿಯನ್ನ ಕಂಟಿನ್ಯೂ ಮಾಡುತ್ತೇನೆ ಎಂದು ರ್ಯಾಲಿಯನ್ನ ಎಂಜಾಯ್ ಮಾಡಿದ್ದಾರೆ. ಒಟ್ಟಾರೆ ಪ್ರೇಕ್ಷಕರ ರಂಜನೆಗೆಂದೇ ಆಯೋಜಿಸಿದ್ದ ರ್ಯಾಲಿಯಲ್ಲಿ ರಾಷ್ಟ-ಅಂತರಾಷ್ಟ್ರೀಯ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. 150ರಿಂದ 200 ಕಿ.ಮೀ. ವೇಗದಲ್ಲಿ ಓಡ್ತಿರೋ ಕಾರುಗಳನ್ನ ನೋಡಿ ಜನ ಫಿದಾ ಆಗಿದ್ದಾರೆ. ಮೂಡಿಗೆರೆಯ ಚಂದ್ರಾಪುರ, ಕಮ್ಮರಗೋಡು, ಚಟ್ನಹಳ್ಳಿ ಕಾಫಿ ತೋಟಗಳಲ್ಲಿ ಇನ್ನು ಎರಡು ದಿನ ಓಡೋ ಕಾರುಗಳು ನೋಡುಗರಿಗೆ ಮತ್ತಷ್ಟು ಮನೋರಂಜನೆ ನೀಡಲಿದೆ.