ಪೇಜಾವರ ಶ್ರೀಗಳಿಗೆ  ' ವೈ ' ಶ್ರೇಣಿ ಭದ್ರತೆ

Published : Jan 01, 2021, 12:51 PM IST
ಪೇಜಾವರ ಶ್ರೀಗಳಿಗೆ  ' ವೈ ' ಶ್ರೇಣಿ ಭದ್ರತೆ

ಸಾರಾಂಶ

ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ  ಕರ್ನಾಟಕ ಸರಕಾರ ವೈ ಶ್ರೇಣಿ  ಭದ್ರತೆ

ಉಡುಪಿ(ಜ.01): ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ  ಕರ್ನಾಟಕ ಸರಕಾರ ವೈ ಶ್ರೇಣಿ  ಭದ್ರತೆ ಮಂಜೂರು ಮಾಡಿದ್ದು ಗುರುವಾರದಿಂದಲೇ ಒದಗಿಸಲಾಗಿದೆ .

ರಾಮಮಂದಿರ ನಿರ್ಮಾಣದ ಜನಜಾಗೃತಿ ಅಭಿಯಾನದಲ್ಲಿ ಸದ್ಯ ನಿರತಾಗಿರುವ ಶ್ರೀಗಳು  ದೇಶಾದ್ಯಂತ ಸಂಚಾರ ಕೈಗೊಂಡಿದ್ದಾರೆ . ಈ ಹಿನ್ನಲೆಯಲ್ಲಿ ಅವರಿಗೆ  ಸೂಕ್ತ ಭದ್ರತೆ ಒದಗಿಸುವಂತೆ ಉಡುಪಿ ಶಾಸಕ ಕೆ ರಘುಪತಿ ಭಟ್ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಅಪ್ಪ-ಮಗಳಿಗೆ ಒಲಿದ ಜಯ; ಮೂವರು ದಂಪತಿಗಳು ಆಯ್ಕೆ

ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ , ಶಾಸಕ ಭಟ್ ಹಾಗೂ ರಾಜ್ಯ ಪೋಲೀಸ್ ಮಹಾನಿರ್ದೇಶಕರಿಗೆ ಪೇಜಾವರ ಮಠ ಕೃತಜ್ಞತೆ ಸಲ್ಲಿಸಿದೆ .

PREV
click me!

Recommended Stories

ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್‌ ಅಪ್ಡೇಟ್‌; ಹೊಸತನ ಬಂದರೂ, ಹಳೆಯ ಗುರುತು ಬಿಟ್ಟುಕೊಡದ ಬಿರ್ಲಾ!
ದೇವರೇ.. ದರ್ಶನ್ ಸಂಕಷ್ಟ ದೂರವಾಗಲಿ: ಮಗನಿಗಾಗಿ ವಿಶೇಷ ಪೂಜೆ ಸಲ್ಲಿಸಿದ ತಾಯಿ ಮೀನಾ ತೂಗುದೀಪ