ಕಾಂಗ್ರೆಸ್ ನಾಯಕರಿಗೆ ಎರಡು ನಾಲಿಗೆ: ನಳಿನ್ ಕುಮಾರ್ ಕಿಡಿ

By Suvarna News  |  First Published Dec 31, 2020, 1:38 PM IST

ಕಾಂಗ್ರೆಸ್ ನಾಯಕರಿಗೆ ಎರಡು ನಾಲಗೆ ಇದೆ. ಗಲಭೆ ಆದಾಗ SDPI ಜೊತೆ ಸಂಬಂಧ ಇಲ್ಲ ಅಂತಾ ಹೇಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ಗೆದ್ದ ಉನ್ಮಾದದಲ್ಲಿ SDPI ರಾಷ್ಟ್ರ ವಿರೋಧಿ ವರ್ತನೆ ತೋರಿಸಿದೆ. SDPI ಭಯೋತ್ಪಾದನಾ ಸಂಸ್ಥೆ ಅಲ್ಲ ಅಂತಾ ತಿಳಿದುಕೊಂಡಿದ್ದೆವು. ಆದರೆ ಈಗ  ಭಯೋತ್ಪಾದನೆಗೆ ಪೂರಕವಗಿ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, SDPI ನಡೆ ರಾಷ್ಟವಿರೋಧಿ ಕೃತ್ಯಕ್ಕೆ ಪೂರಕವಾಗಿದೆ. SDPI ಭಾರತ್ ಮಾತಕೀ ಜೈ ಘೋಷಣೆ ಕೂಗಬೇಕಿತ್ತು. ಆದರೆ ನಮ್ಮ ಶತ್ರು ರಾಷ್ಟ್ರದ  ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

Tap to resize

Latest Videos

ಠೇವಣಿ ಉಳಿಸ್ಕೊಳ್ಳೋಕೆ ಕಾಂಗ್ರೆಸ್ ಪರದಾಟ: ನಳಿನ್ ಕುಮಾರ್

PFI ತರಹವೇ SDPi ದೇಶವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡಿದೆ. ಡಿಜೆಹಳ್ಳಿ ಕೆಜೆ ಹಳ್ಳಿ ಗಲಭೆ, CAA ಗಲಭೆ,ಕೊಲೆ ಪ್ರಕರಣ ದಲ್ಲಿ SDPI ಪಾತ್ರ ಇದೆ. SDPI ಪಕ್ಷ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ಬರುತ್ತದೆ. SDPIಯ ದೇಶ ವಿರೋಧಿ ಕೃತ್ಯದ ಬಗ್ಗೆ ಆಯೋಗ ಗಮನಿಸುತ್ತಿದೆ ಎಂದಿದ್ದಾರೆ.

undefined

SDPI ಕಾರ್ಯಕರ್ತರ ವಿರುದ್ದ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಯಾರದ್ದೋ ಬಂಧನ ಆದಾಗ ಕಚೇರಿ ಮುತ್ತಿಗೆ ಮಾಡುತ್ತಾರೆ. ಗಲಭೆ ಸೃಷ್ಟಿ ಮಾಡಲು ಯತ್ನ ಮಾಡುತ್ತಾರೆ. ಕಾಂಗ್ರೆಸ್ ನಾಯಕರಿಗೆ ಎರಡು ನಾಲಗೆ ಇದೆ. ಗಲಭೆ ಆದಾಗ SDPI ಜೊತೆ ಸಂಬಂಧ ಇಲ್ಲ ಅಂತಾ ಹೇಳುತ್ತಾರೆ ಎಂದಿದ್ದಾರೆ.

ಸ್ಲಂನಲ್ಲಿದ್ದು ಮೆಡಿಕಲ್‌ ಬಿಎಸ್ಸಿ ಓದಿದ ಯುವತಿ ಈಗ ಗ್ರಾ.ಪಂ. ಸದಸ್ಯೆ!

ಬಂಟ್ವಾಳ‌ನಗರ ಸಭೆ,ಕೆಲ ಗ್ರಾಮ ಪಂಚಾಯತ್ ನಲ್ಲಿ SDPI ಜೊತೆ ಮೈತ್ರಿ ಮಾಡಿದೆ. ಬೆಳಗ್ಗೆ ವಿರೋಧ ಮಾಡಿ ರಾತ್ರಿ SDPI ಜೊತೆ ಸಭೆ ಮಾಡುತ್ತಾರೆ. ಕಾಂಗ್ರೆಸ್ ಧೈರ್ಯವಿದ್ದರೆ ನೇರವಾಗಿ ಹೇಳಲಿ. SDPI ಜೊತೆ ಇದ್ದಾರಾ ಇಲ್ವ ಅಂತಾ ಹೇಳಲಿ. ನಿಮ್ಮ ದ್ವಂದ್ವ ನಿರ್ಧಾರದಿಂದ ಜನ ಕೈ ಬಿಡುತ್ತಿದ್ದಾರೆ. ಅಲ್ಪಸಂಖ್ಯಾತರೇ ಕಾಂಗ್ರೆಸ್ ಕೈ ಬಿಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

click me!