ಕಾರವಾರದಲ್ಲಿ ಕೊಂಕಣಿ ಬರೆಯುವುದು ತಪ್ಪಲ್ಲ: ಭಾಷಾ ವಿವಾದದ ಬೆಂಕಿಗೆ ತುಪ್ಪ ಸುರಿದ ಆಸ್ನೋಟಿಕರ್

By Girish Goudar  |  First Published Oct 16, 2022, 8:01 AM IST

ಕಾರವಾರದಲ್ಲಿ ಕೊಂಕಣಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯುವುದು ತಪ್ಪಲ್ಲ. ಸಂವಿಧಾನದ ಪ್ರಕಾರ ಫಲಕಗಳನ್ನು ಕೊಂಕಣಿಯಲ್ಲಿ ಬರೆಯಬಹುದು. ನಾನು ಆಯ್ಕೆಯಾಗಿ ಬಂದಲ್ಲಿ ಕಾರವಾರದಲ್ಲಿ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಬರೆಯಲು ಅವಕಾಶ ನೀಡ್ತೇನೆ: ಆನಂದ್ ಆಸ್ನೋಟಿಕರ್ 


ಉತ್ತರಕನ್ನಡ(ಅ.16):  ಕಾರವಾರದಲ್ಲಿ ಕೊಂಕಣಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯುವುದು ತಪ್ಪಲ್ಲ. ಸಂವಿಧಾನದ ಪ್ರಕಾರ ಫಲಕಗಳನ್ನು ಕೊಂಕಣಿಯಲ್ಲಿ ಬರೆಯಬಹುದು. ನಾನು ಆಯ್ಕೆಯಾಗಿ ಬಂದಲ್ಲಿ ಕಾರವಾರದಲ್ಲಿ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಬರೆಯಲು ಅವಕಾಶ ನೀಡ್ತೇನೆ ಅಂತ ಹೇಳುವ ಮೂಲಕ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಭಾಷಾ ವಿವಾದದ ಬೆಂಕಿಗೆ ಮತ್ತೆ ತುಪ್ಪ ಸುರಿದಿದ್ದಾರೆ. 

ನಿನ್ನೆ(ಶನಿವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸಚಿವನಾಗಿದ್ದಾಗ ಪ್ರಾದೇಶಿಕ ಭಾಷೆಗಳನ್ನು ಫಲಕಗಳಲ್ಲಿ ಬರೆಯಲು ಅವಕಾಶ ನೀಡಿದ್ದೆ. ಕೊಂಕಣಿ ಭಾಷೆಗೆ ಅದರದ್ದೇ ಆದ ಲಿಪಿಯಿದ್ದು, ಕಾರವಾರದಲ್ಲಿ ಕೊಂಕಣಿಗರು ಇರೋದ್ರಿಂದ ಪ್ರಾದೇಶಿಕ ಭಾಷೆಯನ್ನು ಫಲಕಗಳಲ್ಲಿ ಬರೆಯಬಹುದು.‌ ಗೋವಾದಲ್ಲಿ ಆಡಳಿತವನ್ನು ಕೂಡಾ ಕೊಂಕಣಿಯಲ್ಲೇ ಮಾತನಾಡಲಾಗುತ್ತದೆ ಎಂದರು.‌ 

Latest Videos

undefined

Uttara Kannada: ಆರ್ಥಿಕ ನಷ್ಟ ಎದುರಿಸುತ್ತಿರುವ ಕಬ್ಬು ಬೆಳೆಗಾರರು: ಎಸ್‌‌ಎಪಿಗೆ ಆಗ್ರಹ

ಕಾರವಾರವನ್ನು ಗೋವಾಕ್ಕೆ ಸೇರಿಸಬೇಕೆಂದು‌ ಧ್ವನಿ ಎತ್ತುವವರಿಗೆ ಇದು ಪೂರಕವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಕಾರವಾರಿಗರು ಯಾರೂ ಕೂಡಾ ಗೋವಾದ ಜತೆ ಕಾರವಾರ ಸೇರಲು ಬಯಸುವುದಿಲ್ಲ. ನಾವು ಕರ್ನಾಟಕದವರಾಗಿದ್ದು, ಪ್ರಥಮ ಆದ್ಯತೆ ಕನ್ನಡವೇ ಆಗಿದೆ. ಉತ್ತರಕನ್ನಡ ಜಿಲ್ಲೆಗೆ ಸಾಕಷ್ಟು ಅನ್ಯಾಯವಾಗಿದ್ದು, ಗಡಿಭಾಗವಾದ ಕಾರವಾರವನ್ನು ರಿಸರ್ವ್ಡ್ ಪ್ರದೇಶವೆಂದು ಘೋಷಿಸಿ ಸರ್ಕಾರ ವಿಶೇಷ ಅನುದಾನ ಒದಗಿಸಬೇಕು ಎಂದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಒತ್ತಾಯಿಸಿದರು. 
 

click me!