Chitraduraga ಪರಿಸರ ಅಭಿವೃದ್ಧಿಗೆ 4 ಕೋಟಿ ಹಣ ಅನುದಾನ; ಶಾಸಕ ತಿಪ್ಪಾರೆಡ್ಡಿ

By Suvarna News  |  First Published Jun 5, 2022, 3:49 PM IST
  • ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕರಿಂದ ಚಾಲನೆ 
  • ಪರಿಸರ ಅಭಿವೃದ್ಧಿಗೆ ಡಿ.ಎಮ್.ಎಫ್ ಹಾಗೂ ನಗರೋತ್ಥಾನದಡಿ ಅನುದಾನ
  • ಚಿತ್ರದುರ್ಗ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಭರವಸೆ
     

ಚಿತ್ರದುರ್ಗ(ಜೂ.5): ಕಳೆದ ವರ್ಷ ಶಾಸಕರಿಗೆ ಬರುವ ಡಿ.ಎಮ್.ಎಫ್ (ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ) ಅಡಿ ಸಾಮಾಜಿಕ ಅರಣ್ಯ ಹಾಗೂ ವಲಯ ಅರಣ್ಯ ಅಭಿವೃದ್ಧಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈ ಬಾರಿ ನಗರೋತ್ಥಾನ ಅನುದಾನದಲ್ಲಿ ನಗರದಲ್ಲಿ ಗಿಡ ನೆಡಲು, ಉದ್ಯಾನವನ ಅಭಿವೃದ್ಧಿಗಾಗಿ 4 ಕೋಟಿ ಹಣ ಮೀಸಲಿರಿಸಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಜೋಗಿಮಟ್ಟಿ (ಆಡುಮಲ್ಲೇಶ್ವರ) ಚೆಕ್ ಫೊಸ್ಟ್ ಬಳಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿದ್ಯಾವಿಕಾಸ ಸಂಸ್ಥೆ, ರೆಡ್ ಕ್ರಾಸ್, ನೆಹರು ಯುವಕೇಂದ್ರ, ರೋಟರಿ ಕ್ಲಬ್ ಜೋಗಿಮಟ್ಟಿ, ಜಿಲ್ಲಾ ಐಟಿ ಡಿಲರ್ಸ್ ಅಸೋಸಿಯೇಷನ್ ಇವರುಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ-2022 ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

Latest Videos

undefined

ಭೋಪಾಲ್‌ನ ಅನಾಥ ಟಾಪರ್‌ಗೆ ಸಾಲ ವಸೂಲಾತಿ ನೋಟಿಸ್‌ !

ನಗರದ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಹಳೆಯ ಮರಗಳನ್ನು ತೆರವುಗೊಳಿಸಲಾಯಿತು. ಇದು ಸಾರ್ವಜನಿಕರಷ್ಟೇ ಅಲ್ಲ, ನನಗೂ ಬೇಸರದ ಸಂಗತಿಯಾಗಿತ್ತು. ನಗರದ ಜನಸಂಖ್ಯೆ ಹಾಗೂ ವಾಹನ ದಟ್ಟಣೆ ಆಧರಿಸಿ, ಸುಗಮ ಸಂಚಾರ ಕಲ್ಪಿಸುವ ದೃಷ್ಟಿಯಿಂದ ಅನಿವಾರ್ಯ ಮರಗಳನ್ನು ತೆರವುಗೊಳಿಸಲಾಯಿತು.

ತೆರವುಗೊಳಿಸಿದ ಮರಗಳಿಗೆ ಪ್ರತಿಯಾಗಿ ಗಿಡಗಳನ್ನು ಬೆಳಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ ವಿಷೇಶ ಯೋಜನೆ ರೂಪಿಸಲಾಗಿದೆ. ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಗಿಡ ನೆಡಲು ಅಗತ್ಯ ಜಾಗವನ್ನು ಬಿಡುವಂತೆ ಲೋಕೋಪಯೋಗಿ ಇಲಾಖೆ ನಗರ ಸಭೆ‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. 

ನಗರೋತ್ಥಾನ ಅನುದಾನದಲ್ಲಿ ಖಾಸಗಿ ಲೇ ಔಟ್‌ಗಳಲ್ಲೂ ಗಿಡ ಮರಗಳನ್ನು ಬೆಳಸಲಾಗುವುದು. ಪರಿಸರ ಕುರಿತು ಸಾರ್ವಜನಿಕರಲ್ಲಿ ಕಾಳಜಿ ಅಗತ್ಯ. ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಜೊತೆ ಜನರು ಕೈಜೋಡಿಸಬೇಕು. ಸರ್ಕಾರ ಪ್ರತಿ ವರ್ಷ ಅರಣ್ಯೀಕರಣಕ್ಕೆ ಖರ್ಚು ಮಾಡುವ ಹಣದಲ್ಲಿ, ಅರ್ಧದಷ್ಟು ಗಿಡಮರಗಳು ಬೆಳೆದಿದ್ದರು, ದೇಶದಲ್ಲಿ ಅಗತ್ಯ ಪ್ರಮಾಣದ ಅರಣ್ಯ ಇರುತ್ತಿತ್ತು. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ವಿಶ್ವ ಸಂಸ್ಥೆ ಇದರ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ನೈಸರ್ಗಿಕ ವಿಕೋಪ, ಅಸಾಧರಣ ಮಳೆ, ಬಿಸಿಲು ಜಾಗತಿಕ ತಾಪಮಾನದ ಪರಿಣಾಮ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಹಲವು ಜಾತಿಯ ಗಿಡದ ಬೀಜಗಳನ್ನು ಊಳುವ ಕಾರ್ಯಕ್ರಮಕ್ಕೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು‌. ವಿದ್ಯಾರ್ಥಿಗಳು ಜೋಗಿಮಟ್ಟಿ ಹಾಗೂ ಆಡುಮಲ್ಲೇಶ್ವರ ಪ್ರದೇಶದಲ್ಲಿ ಬೀಜಗಳನ್ನು ಊಳಿದರು.

CDS Examnನಲ್ಲಿ ಚಾಲಕನ ಪುತ್ರ ದೇಶಕ್ಕೆ ಫಸ್ಟ್ ರ‍್ಯಾಂಕ್ 

ರೈತರು, ಕುರಿಗಾಯಿಗಳಿಗೆ ಹೆಲಿಕಾಪ್ಟರ್‌ನಲ್ಲಿ ಹಾರುವ ಭಾಗ್ಯ ಕಲ್ಪಿಸಿದ ಶಾಸಕ!: ವಾರೇ ವ್ಹಾ... ನಾವೇನು ಮಲೆನಾಡಿನಲ್ಲಿದ್ದೀವಾ, ಇಷ್ಟೊಂದು ಸುಂದರ ಪರಿಸರ ನಮ್ಮಲ್ಲಿಯೂ ಇದೆಯಾ, ನಿಜಕ್ಕೂ ನಾವು ನೋಡೆ ಇಲ್ವಾಲ್ಲಾ ಇಂತಹ ಸುಂದರ ಸೊಬಗನ್ನ, ಇದು ಶಾಸಕ ಗೂಳಿಹಟ್ಟಿ ಶೇಖರ್‌ ಗುರುವಾರ ಕುರಿಗಾಯಿಗಳಿಗೆ ಹಾಗೂ ರೈತರಿಗಾಗಿ ಏರ್ಪಡಿಸಿದ್ದ ಹೆಲಿಕಾಪ್ಟರ್‌ನಲ್ಲಿ ವಿವಿಸಾಗರ ಜಲಾಶಯ ವೀಕ್ಷಣೆ ಮಾಡಿದ ನಂತರ ಕುರಿಗಾಯಿಗಳೂ ಹಾಗೂ ರೈತರ ಬಾಯಲ್ಲಿ ಕೇಳಿ ಬಂದ ಮಾತಿದು. ವಿಮಾನಯಾನ, ಹಾಗೂ ಹೆಲಿಕಾಪ್ಟರ್‌ಗಳಲ್ಲಿ ಹಾರಾಟ ಎಂಬುದು ಶ್ರೀಮಂತರ ಆಯ್ಕೆ ಆಗಿರುತ್ತೆ. 

ಗ್ರಾಮೀಣ ಭಾಗದ ಬಡ ರೈತರು - ಕುರಿಗಾಯಿಗಳು ವಿಮಾನ ಹಾಗೂ ಹೆಲಿಕಾಪ್ಟರ್ ಅನ್ನು ಆಕಾಶದಲ್ಲಿ ಹಾರಾಡುವಾಗ ಮಾತ್ರ ತಲೆ‌ ಎತ್ತಿ ನೋಡಿ ಖುಷಿ ಪಟ್ಟಿರುತ್ತಾರೆ.  ಆದರೆ ಸದಾ ವಿಶೇಷತೆಯ ರೂವಾರಿಯಾದ ಹಾಗೂ ಜನರ ಸೇವೆಗೆ ಹೆಚ್ಚು ಕಾಲ ಮಿತಿ ಇಡುವ ಜನಪ್ರಿಯ ಶಾಸಕ ಗೂಳಿಹಟ್ಟಿ ಶೇಖರ್‌ ಕುರಿಗಾಯಿಗಳು ಹಾಗೂ ರೈತರಿಗೂ ಹೆಲಿಕಾಪ್ಟರ್ ಪ್ರಯಾಣದ ಅನುಭವ ತೋರಿಸಿದರು. ಹೊಸದುರ್ಗ ತಾಲೂಕು ಸುಂದರ ಪರಿಸರ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿದೆ. ಆದರೆ ಇದನ್ನು ಅಭಿವೃದ್ಧಿಪಡಿಸದೇ ಹಿನ್ನಡೆಯಾಗಿದೆ.  

click me!