ಲೋಕಾಪುರದಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿರುವ ಗುಂಡಿಗಳು!

By Web Desk  |  First Published Nov 21, 2019, 11:18 AM IST

ಲೋಕಾಪುರ-ಮುಧೋಳ ಹೆದ್ದಾರಿ ಪಕ್ಕದಲ್ಲಿ ಬಿದ್ದ ದೊಡ್ಡ ಗುಂಡಿ| ಈ ಮಾರ್ಗವಾಗಿ ನಿತ್ಯ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ| ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಇದನ್ನು ದುರಸ್ತಿಗೊಳಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹ|


ಶ್ರೀನಿವಾಸ ಬಬಲಾದಿ

ಲೋಕಾಪುರ(ನ.21): ಲೋಕಾಪುರ-ಮುಧೋಳ ಹೆದ್ದಾರಿ ಪಕ್ಕದ ಜನತಾ ಪ್ಲಾಟ್‌ ಹತ್ತಿರದ ಚರಂಡಿಯ ಬಾಯ್ಲರ್‌ ಕುಸಿದ್ದು ಬಿದಿದೆ. ಹೀಗಾಗಿ ಇಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಈ ಮಾರ್ಗವಾಗಿ ನಿತ್ಯ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಇದನ್ನು ದುರಸ್ತಿಗೊಳಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹ.

Tap to resize

Latest Videos

ಬಿಎಸ್‌ಎನ್‌ಎಲ್‌ ಆಫೀಸ್‌ ಹತ್ತಿರ ಡಾಂಬರೀಕರಣ ರಸ್ತೆಯಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಅದರ ಸುತ್ತಲಿನ ಕೆಳ ಅಳತೆಗೆ ತಕ್ಕಂತೆ ಸಿಮೆಂಟ್‌ ಮುಚ್ಚಳ ಹಾಕದೇ, ಅದರೊಳಗೆ ಕೆಡವಿ ಹೋಗಿದ್ದಾರೆ. ಅದರ ಸುತ್ತ ಮುಳ್ಳು-ಕಲ್ಲುಗಳನ್ನಿಟ್ಟು ಕೈ ತೊಳೆದುಕೊಂಡು ಹೋದವರು ಯಾರು ಎಂಬುದು ಸಾರ್ವಜನಿಕರಿಗೆ ಪ್ರಶ್ನೆಯಾಗಿದೆ. ಇನ್ನೂ ಇದೇ ರಸ್ತೆಯಲ್ಲಿ ಮೂರು ಒಳಚರಂಡಿಗಳು ಸಹ ಅನಾಹುತಕ್ಕೆ ಎಡೆ ಮಾಡಿಕೊಡುವಂತಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೀದಿ ದೀಪಗಳಿಲ್ಲದ ಈ ರಸ್ತೆಯಲ್ಲಿ ರಾತ್ರಿಯಾಯಿತೆಂದರೆ ಕಣ್ಣು ತೆರೆದು ಓಡಾಡಬೇಕು. ಇಲ್ಲಿ ಎರಡು ಶಾಲೆಗಳು ಕಾಲೇಜು ವಿದ್ಯಾರ್ಥಿಗಳು ಇದೇ ಹಾದಿಯಲ್ಲಿ ಹಾಗೂ ಸರಕಾರಿ ಶಾಲೆ ಇನ್ನೊಂದು ಖಾಸಗಿ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಕಾರು, ಮೋಟಾರ್‌ ಸೈಕಲ್‌ಗಳ ಅನೇಕ ಸಂಚಾರಿ ವಾಹನಗಳು ತಮ್ಮ ಭರಾಟೆಯಲ್ಲಿಯೇ ಸಾಗುತ್ತಿರುತ್ತವೆ. ಜೊತೆಗೆ ಶಾಲಾ ಮಕ್ಕಳು ಸೇರಿದಂತೆ ವಾರ್ಡ್‌ನ ನಿವಾಸಿಗಳಿಗೂ ಇದೇ ರಸ್ತೆ ಅನಿವಾರ್ಯವಾಗಿದ್ದು, ನಡೆಯುವಾಗ ವಾಹನಗಳ ಮೇಲೆ ಹೋಗುವಾಗ ಎಚ್ಚರಿಕೆಯಿಂದಲೇ ಸಾಗಬೇಕಿದೆ. ಸ್ವಲ್ಪ ಆಯಾ ತಪ್ಪಿದರೂ ಈ ಒಳಚರಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವೆ ಆತಂಕ ಇದೆ.

ಈ ಬಗ್ಗೆ ಮಾತನಾಡಿದ ವಕೀಲ ಸಂಗಮೇಶ ಪಲ್ಲೇದ ಅವರು, ಸಾರ್ವಜನಿಕರ ಸಂಚಾರಕ್ಕೆ, ಮಕ್ಕಳಿಗೆ ಅಪಾಯ ಒಡ್ಡುವ ಒಳಚರಂಡಿ ಸ್ಥಿತಿಯನ್ನು ಕಂಡು ಲೋಕೋಪಯೋಗಿ ಇಲಾಖೆ ಅಥವಾ ಅದಕ್ಕೆ ಸಂಭಂದಪಟ್ಟ ಅಧಿಕಾರಿಗಳು ಬೇಗನೆ ಎಚ್ಚೆತ್ತು ಮುಂದಾಗುವ ಅನಾಹುತವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)
 

click me!