ಚುನಾವಣೆಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿ : ಜಿಲ್ಲಾಧಿಕಾರಿ

By Kannadaprabha News  |  First Published Apr 6, 2023, 8:27 AM IST

ಚುನಾವಣಾ ಪ್ರಕ್ರಿಯೆಯಲ್ಲಿ ಸೆಕ್ಟರ್‌ ಆಫೀಸರ್‌ಗಳ ಕೆಲಸ ಪ್ರಮುಖವಾಗಿದ್ದು, ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.


  ನಂಜನಗೂಡು :  ಚುನಾವಣಾ ಪ್ರಕ್ರಿಯೆಯಲ್ಲಿ ಸೆಕ್ಟರ್‌ ಆಫೀಸರ್‌ಗಳ ಕೆಲಸ ಪ್ರಮುಖವಾಗಿದ್ದು, ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.

ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಂಜನಗೂಡು ಕ್ಷೇತ್ರ ಮತ್ತು ವರುಣಾ ಕ್ಷೇತ್ರಗಳ ಫ್ಲೈಯಿಂಗ್‌ ಸ್ಕಾ$್ವಡ್‌ ಹಾಗೂ ಸ್ಟಾಟಿಸ್ಟಿಕ್‌ ಸರ್ವೇಲೆನ್ಸ್‌ ತಂಡದ ಸದಸ್ಯರು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಮಾದರಿ ನೀತಿ ಸಂಹಿತೆ ಸಮಿತಿಯ ವತಿಯಿಂದ ನಂಜನಗೂಡಿನ ರಿಟರ್ನಿಂಗ್‌ ಆಫೀಸರ್‌ ಕಚೇರಿಯಲ್ಲಿ ನಡೆದ ತರಬೇತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

Latest Videos

undefined

ಸೆಕ್ಟರ್‌ ಅಧಿಕಾರಿಗಳು ಬೂತ್‌ ಲೆವೆಲ್‌ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಪರಿಹರಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಮತ್ತು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ಏಪ್ರಿಲ್‌ 11 ರವರೆಗೆ ಅವಕಾಶವಿದ್ದು, ತಡ ಮಾಡದೆ ಬಂದ ಅರ್ಜಿಗಳನ್ನು ಸ್ವೀಕರಿಸಿ ಈ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿಯಿಂದ ಹೆಸರುಗಳು ಕೈಬಿಟ್ಟು ಹೋಗದಂತೆ ಮತ್ತು ಮರಣ ಹೊಂದಿದವರ ಪಟ್ಟಿಯ ಬಗ್ಗೆ ಗಮನಹರಿಸಬೇಕು. 80 ವರ್ಷ ಮೇಲ್ಪಟ್ಟಿದ್ದು ಮತಗಟ್ಟೆಗೆ ಬಂದು ಮತ ಹಾಕಲು ಸಾಧ್ಯವಾಗದವರಿಗೆ 12ಡಿ ಮೂಲಕ ಮತದಾನ ಮಾಡಲು ಅವಕಾಶವಿದೆ. ಸಿ- ವಿಜಿಲ್‌ ಮೂಲಕ ದಾಖಲಾದ ದೂರುಗಳಿಗೆ ನೂರು ನಿಮಿಷಗಳಲ್ಲಿ ಪರಿಹಾರಕ್ಕೆ ನಮ್ಮ ಕೈಗೊಳ್ಳಲಾಗುವುದು. ವಲ್ನರಬಲ್‌ ಹಾಗೂ ಕ್ರಿಟಿಕಲ್‌ ಪೋಲಿಂಗ್‌ ಸ್ಟೇಷನ್‌ಗಳನ್ನು ಗುರುತಿಸಿದ್ದು, ಅವುಗಳ ಸರಿಯಾದ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನಹರಿಸಬೇಕು ಎಂದು ಅವರು ಹೇಳಿದರು.

ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌, ರಾರ‍ಯಂಪ್‌ ಫ್ಯಾನ್‌ ಒಳಗೊಂಡಂತೆ ಕನಿಷ್ಠ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು. ಇವಿಎಂ ಮತ್ತು ವಿವಿಪ್ಯಾಟ್‌ಗಳ ನಿರ್ವಹಣೆಯಲ್ಲಿ ಅಥವಾ ಇವುಗಳ ಬಳಕೆಯಲ್ಲಿ ಸಮಸ್ಯೆಯಾದರೆ ರಿಪ್ಲೇಸ್‌ ಮಾಡಿಕೊಡಲಾಗುವುದು. ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿ ತಂಡದವರಿಗೆ ವಾಹನ ಪೂರೈಕೆ ಮಾಡಲು ಆರ್‌ಓ ಹಾಗೂ ಎಆರ್‌ಓಗಳಿಗೆ ಸೂಚಿಸಿದರು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತ ದೇವರಾಜ್‌ ಮೊದಲಾದವರು ಇದ್ದರು.

ದಾಖಲೆ ಇಲ್ಲದ ಕೋಟಿ ಕೋಟಿ ಜಪ್ತಿ

ಶೇಷಮೂರ್ತಿ ಅವಧಾನಿ

ಕಲಬುರಗಿ(ಏ.05): ಅಸೆಂಬ್ಲಿ ಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿತಕ್ಕೆ ಮೂಗುದಾರ ಹಾಕುವ ಸದುದ್ದೇಶದಿಂದ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ ಸಿಬ್ಬಂದಿಗಳೇ ಹುಶಾರ್‌, ಗಡಿಯಲ್ಲಿ, ಇನ್ನೆಲ್ಲೋ ಇದ್ದೇವೆ, ನಮ್ಮ ಕೆಲಸದ ಮೇಲೆ ಅದ್ಯಾರು ನಿಗಾ ಇಡ್ತಾರೆ ಬಿಡಿ ಎಂದು ಚುನಾವಣೆಯ ಈ ಜವಾಬ್ದಾರಿಯುತ ಕೆಲಸ ನಿರ್ವಹಿಸುವಲ್ಲಿ ಮೈ ಮರೆತರೆ ಜೋಕೆ! ಆಮಿಷ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆಗಾಗಿ ಸಂಕಲ್ಪ ಮಾಡಿರುವ ಕಲಬುರಗಿ ಜಿಲ್ಲಾಧಿಕಾರಿ ಯಶ್ವಂತ ಗುರುಕರ್‌ ಜಿಲ್ಲಾದ್ಯಂತ ಹರಡಿರುವ ಚೆಕ್‌ಪೋಸ್ಟ್‌ ಕಾರ್ಯವೈಖರಿ ಮೇಲೆ ನಿಗಾ ಇಡಲು ಖುದ್ದು ತಾವೇ ರಾತ್ರಿ ಹೊತ್ತು ಸರ್ಕಾರಿ ವಾಹನ ಬದಿಗಿಟ್ಟು ಖಾಸಗಿ ಕಾರಲ್ಲಿ ಸಂಚಾರಕ್ಕೆ ಹೊರಟಿದ್ದಾರೆ! ಜಿಲ್ಲಾಡಳಿತದ ‘ಬಿಗ್‌ ಬಾಸ್‌’ ಇಲೆಕ್ಷನ್‌ ಸಂದರ್ಭದಲ್ಲಿ ಶುರು ಮಾಡಿರುವ ಮಿಂಚಿನ ಸಂಚಾರ ಇಡೀ ಜಿಲ್ಲೆಯ ಚುನಾವಣೆ ಕೆಲಸ ಕಾರ್ಯಗಳಲ್ಲಿ ನಿರಂತರ ಲವಲವಿಕೆ, ಕಟ್ಟೆಚ್ಚರ ಇರುವಂತೆ ಮಾಡಿದೆ.

ಕಳೆದ ವಾರ 3 ದಿನ ರಾತ್ರಿ ಸಂಚಾರ:

ನಂಬಲರ್ಹ ಮೂಲಗಳ ಪ್ರಕಾರ ಡಿಸಿ ಯಶ್ವಂತ ಗುರುಕರ್‌ ಕಳೆದ ವಾರ 3 ದಿನ ರಾತ್ರಿ ರಾತ್ರಿ ನಿತ್ಯ ಹಲವು ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಖಾಸಗಿ ವಾಹನದಲ್ಲಿ ಸಾಗಿ ತಪಾಸಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಮಾರುವೇಷದಲ್ಲಿ ಡಿಸಿ ಇದ್ದಂತಹ ವಾಹನ ತಡೆದು ನಿಲ್ಲಿಸಿ ಕರ್ತವ್ಯ ನಿರತರಾಗಿರುವ ಸಿಬ್ಬಂದಿ ನಿಯಮದಂತೆ ತಪಾಸಣೆ ಮಾಡಿದ್ದಾರೆ. ತಪಾಸಣೆಯಾದ ನಂರವೇ ಅವರಿಗೆ ಗೊತ್ತಾಗಿದ್ದು ತಾವು ತಪಾಸಮೆ ಮಾಡಿರೋ ಕಾರಲ್ಲಿ ಡಿಸಿ ಸಾಹೇಬರು ಇರೋದು ಎಂಬ ಸಂಗತಿ!

ಸೇಡಂ ಜಿದ್ದಾಜಿದ್ದಿ: ಕಾಗಿಣಾ ತೀರದಲ್ಲಿ ಈ ಬಾರಿ ಮತ್ತೊಂದು ಚತುಷ್ಕೋನ ಕದನ

ಹೀಗೆ ಜಿಲ್ಲಾದ್ಯಂತ ಚೆಕ್‌ಪೋಸ್ಟ್‌ನಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿರೋದನ್ನ ಕಣ್ಣಾರೆ ಕಂಡಿರುವ ಡಿಸಿ ಸಿಬ್ಬಂದಿಗಳ ಕೆಲಸ ಹಾಗೂ ಸಮಯ ಪ್ರಜ್ಞೆಯನ್ನ ಮೆಚ್ಚಿಕೊಂಡಿದ್ದಾರೆಂದು ಗೊತ್ತಾಗಿದೆ. ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಜಿಲ್ಲೆಯಲ್ಲಿ ಕಾರ್ಯಾರಂಭಿಸಿರುವ 42 ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿರೋದರಿಂದ 2 ವಾರದಲ್ಲೇ 4.65 ಕೋಟಿ ರು. ನಷ್ಟುಮೊತ್ತದ ನಗದು, ಚಿನ್ನ, ರಜತ, ಗಿಫ್ಟ್‌ ಸಾಮಗ್ರಿ ಜಪ್ತಿಯಾಗಿದೆ.

42 ಚೆಕ್‌ ಪೋಸ್ಟ್‌ ಸ್ಥಾಪನೆ:

ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿರಬೇಕೆಂಬ ಉದ್ದೇಶದಿಂದ ಜಿಲ್ಲಾಡಿತ ಜಿಲ್ಲಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿನ ಕಟ್ಟೆಚ್ಚರ ಬಿಗಿ ಮಾಡಿದೆ. ಅಲ್ಲಿಂದ ಸಾಗುವ ಯಾವುದೇ ವಾಹನಕ್ಕೆ ಬಿಡದಂತೆ ತಪಾಸಣೆಗೆ ಸೂಚಿಸಿದೆ. ಜಿಲ್ಲೆಯಾದ್ಯಂತ 42 ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ಇದರಲ್ಲಿ ಮಹಾರಾಷ್ಟ್ರ ಮತ್ತು ತೆಲಾಂಗಾಣಾ ಗಡಿಗೆ ತಲಾ 8 ಅಂತರ ರಾಜ್ಯ ಗಡಿ ಚೆಕ್‌ ಪೋಸ್ಟ್‌ ಮತ್ತು ಕಲಬುರಗಿ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಲ್ಲಿ 10 ಚೆಕ್‌ ಪೋಸ್ಟ್‌ಗಳಿವೆ. ಇದಲ್ಲದೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 2017 ಸೆಕ್ಟರ್‌ ಅಧಿಕಾರಿಗಳು, 42 ಸ್ಟಾಟಿಕ್‌ ಸರ್ವೆಲೆನ್ಸ್‌ ತಂಡ, 44 ಫ್ಲೈಯಿಂಗ್‌ ಸ್ಕ್ಯಾಡ್‌ ತಂಡ, 9 ವಿ.ಎಸ್‌.ಟಿ. ತಂಡ, 9 ವಿ.ವಿ.ಟಿ. ತಂಡ, 9 ಅಕೌಂಟ್‌ ತಂಡ ಹಾಗೂ 9 ಖರ್ಚು ವೆಚ್ಚಗಳ ತಂಡ ರಚಿಸಿ ಅಕ್ರಮ ಹಣ ಕ್ಷೇತ್ರದಲ್ಲೆಲ್ಲೂ ಚಲಾವಣೆಗೆ ಬಾರದಂತೆ ಕಟ್ಟುನಿಟ್ಟಿನ ನಿಗಾ ಜಿಲ್ಲಾಡಳಿತ ಇಟ್ಟಿದೆ.

click me!