Sea turtle: ಹೊನ್ನಾವರ: ಸಮುದ್ರ ಸೇರಿದ ಪುಟಾಣಿ ಕಡಲಾಮೆಗಳು!

By Kannadaprabha News  |  First Published Apr 6, 2023, 8:25 AM IST

ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕ ಕಡಲ ತೀರದ ಮೀನುಗಾರಿಕಾ ಪ್ರದೇಶದಲ್ಲಿ ಈಗ ಕಡಲಾಮೆಗಳ ಸಂತತಿಯ ಹಬ್ಬವಾಗಿದೆ. ತಾಯಿ ಆಮೆಯು 45 ದಿನಗಳ ಹಿಂದೆ ಭೂಗರ್ಭದಲ್ಲಿ ಮೊಟ್ಟೆಯ ರೂಪದಲ್ಲಿ ಇಟ್ಟಿತ್ತು. ಇದೀಗ ಪುಟ್ಟಪುಟ್ಟಕಡಲಾಮೆಯ ಮರಿಗಳು ಒಂದರೊಂದರಂತೆ ಭೂ ತಾಯಿಯ ಮಡಿಲಿನಿಂದ ಹೊರಬರುತ್ತಿದೆ.


ಹೊನ್ನಾವರ (ಏ.6) : ತಾಲೂಕಿನ ಕಾಸರಕೋಡ ಟೊಂಕ ಕಡಲ ತೀರದ ಮೀನುಗಾರಿಕಾ ಪ್ರದೇಶದಲ್ಲಿ ಈಗ ಕಡಲಾಮೆಗಳ ಸಂತತಿಯ ಹಬ್ಬವಾಗಿದೆ. ತಾಯಿ ಆಮೆಯು 45 ದಿನಗಳ ಹಿಂದೆ ಭೂಗರ್ಭದಲ್ಲಿ ಮೊಟ್ಟೆಯ ರೂಪದಲ್ಲಿ ಇಟ್ಟಿತ್ತು. ಇದೀಗ ಪುಟ್ಟಪುಟ್ಟಕಡಲಾಮೆಯ ಮರಿಗಳು ಒಂದರೊಂದರಂತೆ ಭೂ ತಾಯಿಯ ಮಡಿಲಿನಿಂದ ಹೊರಬರುತ್ತಿದೆ.

ಟೊಂಕ ಮೀನುಗಾರ(Fisherman women) ಮಹಿಳೆಯರು, ಯುವಕರು, ಸ್ಥಳೀಯರು ಜೊತೆಗೆ ಅರಣ್ಯ ಇಲಾಖೆ(Forest depertment) ಸೇರಿ ಕಡಲಾಮೆ ಮರಿಗಳ ಕಾಳಜಿ ವಹಿಸಿದ್ದರು. ಈ ಪ್ರದೇಶದಲ್ಲಿ ಒಟ್ಟು 46 ಗೂಡುಗಳಿದ್ದು, 45 ಸಂಖ್ಯೆಯ ಗೂಡಿನಿಂದ ಮಂಗಳವಾರ ರಾತ್ರಿ ಹೊರ ಬಂದ ಕಡಲಾಮೆಯ ಮರಿಯನ್ನು ಹೊನ್ನಾವರ ನ್ಯಾಯಾಲಯದ ನ್ಯಾಯಾಧೀಶ ಕುಮಾರ್‌.ಜಿ ಅವರು ಕುಟುಂಬ ಸಮೇತವಾಗಿ ಆಗಮಿಸಿ ಮಧ್ಯರಾತ್ರಿ ತನಕ ಪುಟ್ಟಪುಟ್ಟಕಡಲಾಮೆಯ ಮರಿಗಳನ್ನು ಸಮುದ್ರಕ್ಕೆ ಬಿಟ್ಟು ಸಂತಸಗೊಂಡರು.

Tap to resize

Latest Videos

ಕಾಸರಕೋಡ ಟೊಂಕದ ಕಡಲತೀರದಲ್ಲಿ Olive ridley ಜಾತಿಯ ಕಡಲಾಮೆ ಮೊಟ್ಟೆಪತ್ತೆ!

ಈ ಸಂದರ್ಭದಲ್ಲಿ ಆರ್‌ಎಫ್‌ಓ ವಿಕ್ರಂ(RFO Vikram), ಕಡಲ ವಿಜ್ಞಾನಿ ಡಾ. ಪ್ರಕಾಶ್‌ ಮೇಸ್ತ(Dr Prakash mesta), ಸ್ಥಳೀಯರಾದ ಗಣಪತಿ ತಾಂಡೇಲ…, ರೇಣುಕಾ ತಾಂಡೇಲ…, ರಾಜೇಶ್‌ ತಾಂಡೇಲ…, ರಮೇಶ್‌ ತಾಂಡೇಲ…, ಜಗದೀಶ್‌ ತಾಂಡೇಲ…, ಭಾಸ್ಕರ, ವಿನಯ…, ನರಸಿಂಹ, ವಿಕ್ರಂ, ಗಿರೀಶ್‌, ಸಚಿನ್‌, ರಾಜು ತಾಂಡೇಲ…, ಮಕ್ಕಳು, ಮಹಿಳೆಯರು ಮತ್ತಿರರು ಹಾಜರಿದ್ದರು.

ಕರ್ನಾಟಕದ ಕರಾವಳಿ(Coast of Karnataka)ಯ ತೀರಪ್ರದೇಶದಲ್ಲಿ ಕಡಲಾಮೆಯೆ ಇಲ್ಲ ಎಂದು ವಾದಿಸಿ ಸಾದಿಸಲು ಹೋರಟ ಎಚ್‌ಪಿಪಿಎಲ್‌ ವಾಣಿಜ್ಯ ಬಂದರು ಕಂಪನಿಗೆ, ಕಂಪನಿಯ ಕೆಲವು ಬಂಡವಾಳ ಶಾಹಿಗಳಿಗೆ ಮತ್ತು ಕೆಲವು ಹಿತಾಸಕ್ತಿಗಳಿಗೆ ಮೂಕ ಕೂರ್ಮಗಳು ತಮ್ಮ ಇರುವಿಕೆಯ ತಕ್ಕ ಉತ್ತರ ನೀಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಪರಿಸರ ಪ್ರೇಮಿಗಳು, ಪರಿಸರವಾದಿಗಳು, ಸಂಬಂಧಪಟ್ಟವರು ಇನ್ನಾದರೂ ಈ ಪ್ರದೇಶವನ್ನು ಕಡಲಾಮೆಯ ಅವಾಸ ಸ್ಥಾನ ಎಂದು ಘೋಷಿಸಲಿ ಎನ್ನುವುದು ಮೀನುಗಾರ ರಾಜೇಶ್‌ ತಾಂಡೇಲ್‌ ಅವರ ಅಭಿಪ್ರಾಯವಾಗಿದೆ.

Udupi: ಕೋಡಿಯಲ್ಲಿ ಕಡಲಾಮೆಯ ಮೊಟ್ಟೆಗಳ ರಕ್ಷಣೆಗೆ ವ್ಯಾಪಕ ಪ್ರಶಂಸೆ

click me!