ಸಾರಾ ಮಹೇಶ್ ಇತರೆ ಶಾಸಕರಿಗೆ ಮಾದರಿ : ಹೊಗಳಿದ ಸಚಿವ ಸೋಮಶೇಖರ್

Kannadaprabha News   | Asianet News
Published : May 24, 2021, 11:51 AM ISTUpdated : May 24, 2021, 12:29 PM IST
ಸಾರಾ ಮಹೇಶ್ ಇತರೆ ಶಾಸಕರಿಗೆ ಮಾದರಿ :  ಹೊಗಳಿದ ಸಚಿವ ಸೋಮಶೇಖರ್

ಸಾರಾಂಶ

ಸ್ವಂತ ಹಣದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿರುವ ಶಾಸಕ ಸಾ.ರಾ. ಮಹೇಶ್‌  ಇತರ ಕ್ಷೇತ್ರಗಳ ಶಾಸಕರಿಗೆ ಮಾದರಿಯಾದ ಶಾಸಕ ಸಾ ರಾ ಮಹೇಶ್ ಕಾರ್ಯ ಸಾ.ರಾ. ಮಹೇಶ್‌ ಅವರಂತಹ ಹೃದಯ ವೈಶಾಲ್ಯವುಳ್ಳ ಶಾಸಕರೆಂದು ಅಭಿನಂದನೆ

ಕೆ.ಆರ್‌. ನಗರ (ಮೇ.24):  ಸ್ವಂತ ಹಣದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿರುವ ಶಾಸಕ ಸಾ.ರಾ. ಮಹೇಶ್‌ ಜಿಲ್ಲೆಯ ಇತರ ಕ್ಷೇತ್ರಗಳ ಶಾಸಕರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಪ್ರಶಂಸೆ ವ್ಯಕ್ತಪಡಿಸಿದರು.

ತಾಲೂಕಿನ ಕಗ್ಗೆರೆ ಗ್ರಾಮದ ಬಳಿ ಸಾ.ರಾ. ಸ್ನೇಹ ಬಳಗದ ವತಿಯಿಂದ ಆರಂಭಿಸಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಶಾಸಕ ಸಾ.ರಾ. ಮಹೇಶ್‌, ಸಂಸದ ಪ್ರತಾಪ್‌ಸಿಂಹ ಮತ್ತು ಅಧಿಕಾರಿಗಳೊಂದಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಭಾರೀ ಪ್ರಗತಿ

ಸಾ.ರಾ. ಮಹೇಶ್‌ ಅವರಂತಹ ಹೃದಯ ವೈಶಾಲ್ಯವುಳ್ಳ ಶಾಸಕರು ಇಂತಹ ಕೆಲಸ ಮಾಡಿರುವುದರಿಂದ ಸರ್ಕಾರಕ್ಕೆ ಮತ್ತು ಜನರಿಗೆ ಸಾಕಷ್ಟುಅನುಕೂಲವಾಗಿದ್ದು ಜನರಿಂದ ಆಯ್ಕೆಯಾದ ಒಬ್ಬ ಜನನಾಯಕ ಮಾಡುವ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿರುವ ಅವರನ್ನು ಸರ್ಕಾರ ಮತ್ತು ಜಿಲ್ಲಾಡಳಿತದ ಪರವಾಗಿ ಅಭಿನಂದಿಸುತ್ತೇನೆ ಎಂದು ಸಚಿವರು ತಿಳಿಸಿದರು.

200 ಹಾಸಿಗೆಗಳ ಆಸ್ಪತ್ರೆ ಆರಂಭಿಸುವುದರ ಜತೆಗೆ ವೈಯುಕ್ತಿಕ ಹಣದಲ್ಲಿ ವೈದ್ಯರನ್ನು ನೇಮಕ ಮಾಡಿರುವುದು ಸರ್ವರೂ ಮೆಚ್ಚವಂತಹ ಕೆಲಸವಾಗಿದ್ದು ಸಂಕಷ್ಟದ ಕಾಲದಲ್ಲಿ ನೊಂದವರ ಪರವಾಗಿರುವ ಅವರ ಸೇವೆ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ