ಬೆಳಗಾವಿ: ವ್ಹೀಲ್‌ಚೇರ್‌ನಲ್ಲಿ ಒಂದು ಕಿಮೀ ಕರೆದ್ಯೂಯ್ದು ಸಿಟಿ ಸ್ಕ್ಯಾನ್‌ ಮಾಡಿಸಿದ ಸಂಬಂಧಿಕರು

By Kannadaprabha News  |  First Published May 24, 2021, 10:43 AM IST

* ಬೇಕಾಬಿಟ್ಟಿ ಹಣ ಕೇಳಿದ ಖಾಸಗಿ ಆಂಬ್ಯುಲೆನ್ಸ್‌
* ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಲಭ್ಯವಾಗದ ಆಟೋ ರಿಕ್ಷಾ 
* ಬೆಳಗಾವಿ ನಗರದಲ್ಲಿ ನಡೆದ ಘಟನೆ
 


ಬೆಳಗಾವಿ(ಮೇ.24): ​ವೃದ್ಧರೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಖಾಸಗಿ ಆಂಬ್ಯುಲೆನ್ಸ್‌ನವರು ಬೇಕಾಬಿಟ್ಟಿ ಹಣ ಕೇಳಿದ ಹಿನ್ನೆಲೆಯಲ್ಲಿ ಒಂದು ಕಿಮೀವರೆಗೆ ವ್ಹೀಲ್‌ ಚೇರ್‌ ಮೂಲಕವೇ ಸಿಟಿ ಸ್ಕ್ಯಾನ್‌ ಕೇಂದ್ರಕ್ಕೆ ತೆರಳಿದ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ಭಾನುವಾರ ನಡೆದಿದೆ.

ಬೆಳಗಾವಿಯ ಗೋಂಧಳಿ ಗಲ್ಲಿಯ ಖೋತ ಎಂಬುವವರನ್ನು ಅವರ ಸಂಬಂಧಿಕರು ವ್ಹೀಲ್‌ ಚೇರ್‌ ಮೂಲಕವೇ ಅಯೋಧ್ಯಾ ನಗರದಲ್ಲಿರುವ ಸ್ಕ್ಯಾನಿಂಗ್‌ ಸೆಂಟರ್‌ಗೆ ತೆರಳಿದರು. ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯಾವುದೇ ಆಟೋ ರಿಕ್ಷಾ ಲಭ್ಯವಾಗಲಿಲ್ಲ. ಹಾಗಾಗಿ, ಖಾಸಗಿ ಆಂಬ್ಯುಲೆನ್ಸ್‌ನವರಿಗೆ ಬಾಡಿಗೆ ಬರುವಂತೆ ಕೇಳಿದರೆ ಬೇಕಾಬಿಟ್ಟಿ ಹಣ ಕೇಳಿದರು. ಹಾಗಾಗಿ ವೃದ್ದರೊಬ್ಬರನ್ನು 1 ಕಿಮೀವರೆಗೆ ವ್ಹೀಲ್‌ ಚೇರ್‌ ಮೂಲಕವೇ ತಳ್ಳಿಕೊಂಡು ಸಿಟಿ ಸ್ಕ್ಯಾನಿಂಗ್‌ ಮಾಡಿಸಿಕೊಂಡು ಮರಳಿ ಮನೆಗೆ ಬಂದರು.

Latest Videos

undefined

ಆ್ಯಂಬುಲೆನ್ಸ್‌ನವರು 1 ಕಿಮೀವರೆಗೆ ಹೋಗಲು 4 ಸಾವಿರ ಕೊಟ್ಟರೆ ಮಾತ್ರ ಬರುತ್ತೇವೆ ಎಂದು ಹೇಳಿದರು. ಯಾವುದೇ ವಾಹನ ಲಭ್ಯವಾಗದ ಹಿನ್ನೆಲೆಯಲ್ಲಿ ವ್ಹೀಲ್‌ ಚೇರ್‌ ಮೂಲಕ ಸಿಟಿ ಸ್ಕ್ಯಾನಿಂಗ್‌ ಸೆಂಟರ್‌ಗೆ ತೆರಳಲು ತೀರ್ಮಾನಿಸಿದೇವು ಎಂದು ಅವರ ಪತ್ನಿ, ಮಗ ಹೇಳಿದರು.

ಗೋಕಾಕ: ದೈವ ಕುದುರೆ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ, ಮರಡಿಮಠ ಸೀಲ್‌ಡೌನ್‌

ಪ್ರತಿಬಾರಿ ನಾವು ಆಟೋ ರಿಕ್ಷಾದಲ್ಲೇ ಹೋಗುತ್ತಿದ್ದೇವು. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಟೋ ರಿಕ್ಷಾಗಳು ಲಭ್ಯವಾಗಲಿಲ್ಲ. ಆ್ಯಂಬುಲೆನ್ಸ್‌ವರನ್ನು ಕೇಳಿದರೆ ಬೇಕಾಬಿಟ್ಟಿ ಹಣ ಕೇಳಿದರು. ಅಷ್ಟು ಹಣ ಕೊಡಲು ನಮ್ಮಿಂದ ಸಾಧ್ಯವಿರಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ನಾವು ವ್ಹೀಲ್‌ ಚೇರ್‌ ಮೂಲಕ ಸಿಟಿ ಸ್ಕ್ಯಾನ್‌ ಸೆಂಟರ್‌ಗೆ ಕರೆದುಕೊಂಡು ಹೋಗಬೇಕಾಯಿತು ಎಂದು ಅವರ ಕುಟುಂಬಸ್ಥರು ಹೇಳಿದರು. 

ಸಮಾಜ ಸೇವಕ ಸುರೇಂದ್ರ ಅನಗೋಳ್ಕರ್‌ ಅವರು ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆಯಿಂದ ಸಹಾಯಕ್ಕೆ ಬರಬೇಕು. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಹೆಚ್ಚಿನ ಹಣ ವಸೂಲಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!