ವಿಜಯಪುರದಲ್ಲಿ ಕಸ ನಿರ್ವಹಣೆಗೆ ಮಹಿಳೆಯರ ಸಾರಥ್ಯ!

By Govindaraj S  |  First Published Sep 20, 2022, 3:00 AM IST

ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿದ್ದು, ಇಲ್ಲಿ ಕಸ ನಿರ್ವಹಣೆಗೆ ಮಹಿಳೆಯರದ್ದೇ ಸಾರಥ್ಯ!


ಖಾಜಾಮೈನುದ್ದೀನ್‌ ಪಟೇಲ್‌

ವಿಜಯಪುರ (ಸೆ.20): ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿದ್ದು, ಇಲ್ಲಿ ಕಸ ನಿರ್ವಹಣೆಗೆ ಮಹಿಳೆಯರದ್ದೇ ಸಾರಥ್ಯ! ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆ ಬದಿ ಕಸದ ರಾಶಿ ಮತ್ತು ತಿಪ್ಪೆಗುಂಡಿಗಳಿದ್ದು ಕಲುಸಿತ ವಾತಾವರಣ ಸೃಷ್ಟಿಸಿವೆ. ಮನೆ-ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಆದರೆ ಈಗ ಘನತ್ಯಾಜ್ಯ ಘಟಕಗಳ ನಿರ್ವಹಣೆಯ ಜವಾಬ್ದಾರಿಯನ್ನು ಸರ್ಕಾರದ ಆದೇಶದಂತೆ ಜಿಪಂ ವತಿಯಿಂದ ಮಹಿಳಾ ಒಕ್ಕೂಟದ ಸದಸ್ಯರಿಗೆ ನೀಡಲಾಗಿದೆ.

Latest Videos

undefined

ವಿಜಯಪುರ ಜಿಲ್ಲೆಯ 211 ಗ್ರಾಪಂಗಳಿಗೆ ‘ಸ್ವಚ್ಛ ವಾಹಿನಿ’ ಕಸ ವಿಲೇವಾರಿ ವಾಹನಗಳು ಬಂದಿವೆ. ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರದ ಆದೇಶದಂತೆ ಮಹಿಳಾ ಒಕ್ಕೂಟಗಳಿಗೆ ನೀಡಿದೆ. ಜಿಲ್ಲೆಯ 154 ಮಹಿಳಾ ಸಂಘಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಮಹಿಳೆಯ ಸಂಘದ ಸದಸ್ಯರಿಗೆ ಕಸ ವಿಲೇವಾರಿ ಹೇಗಿ ಮಾಡಿಬೇಕು? ಎಂಬುವುದರ ಕುರಿತಂತೆ ಸಹ ತರಬೇತಿ ನೀಡಲಾಗಿದೆ. ಸ್ವಚ್ಛ ಭಾರತ್‌ ಅಭಿಯಾನದಲ್ಲಿ ಘನತ್ಯಾಜ್ಯ ನಿರ್ವಹಣೆಯೂ ಪ್ರಮುಖವಾಗಿದೆ. ಗ್ರಾಮೀಣ ಮಹಿಳೆಯರ ಬದುಕಿಗೆ ದಾರಿ ಕಲ್ಪಿಸುವ ಉದ್ದೇಶದಿಂದ ಈ ಘಟಕಗಳ ನಿರ್ವಹಣೆ ಹೊಣೆಯನ್ನು ಮಹಿಳೆಯರಿಗೇ ವಹಿಸಲು ತೀರ್ಮಾನಿಸಲಾಗಿದೆ. 

Vijayapura; ಚೆಲುವಿನ ಚಿತ್ತಾರ ರೀತಿ ಹುಡುಗಿ ಜೊತೆಗೆ ಮಗ ಪರಾರಿ, ಮಗನ ತಪ್ಪಿಗೆ ಅಪ್ಪನಿಗೆ ಶಿಕ್ಷೆ!

ಈಗಾಗಲೇ 60 ಮಹಿಳಾ ಚಾಲಕರಿಗೆ ತರಬೇತಿ ನೀಡಲಾಗಿದೆ. ಜತೆಗೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪಿಡಿಒಗಳಿಗೂ ತರಬೇತಿ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾರು ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಿದ್ದಾರೆ. ವಿಜಯಪುರದ ರುಡ್‌ಸೆಟ್‌ ಮೂಲಕ 60 ಜನ ಮಹಿಳಾ ಚಾಲಕರಿಗೆ ತರಬೇತಿ ಪಡೆದುಕೊಂಡಿದ್ದಾರೆ. ಅದರಲ್ಲಿ 30 ಜನರಿಗೆ ವಾಹನ ಚಾಲನೆ ಪರವಾನಿಗೆ ಸಿಕ್ಕಿದೆ. ಶೀಘ್ರ 30 ಜನರಿಗೆ ಪರವಾನಿಗೆ ನೀಡಲಾಗುವುದು. ಈ ಮಹಿಳೆಯರಿಂದ ಜಿಲ್ಲೆಯನ್ನು ಕಸ ಮುಕ್ತ ಮಾಡಲು ಜಿಪಂ ಇಲಾಖೆ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

ಜಿಲ್ಲೆಯ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಸ ವಿಲೇವಾರಿಗಾಗಿ ಈಗಾಗಲೇ ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಕಾರ್ಯಯಶಸ್ವಿಯಾಗಿ ಮಾಡಿದ್ದಾರೆ. ಈ ಘಟಕಗಳಿಗೆ ಊರಿನ ಕಸ ಸಾಗಿಸಲು, ಕಸ ವಿಲೇವಾರಿ ವಾಹನಗಳ ಕಾರ್ಯಾಚರಣೆಗೆ ಮುತುವರ್ಜಿವಹಿಸಿ ಕೆಲಸ ಮಾಡುತ್ತಿರುವುದರಿಂದ ಎಲ್ಲೆಂದರಲ್ಲಿ ಬಿಳುವ ಕಸ, ವಿಲೇವಾರಿ ಮಾಡಿ ಊರು ಸ್ವಚ್ಛಗೊಳ್ಳುವ ವಿಶ್ವಾಸ ಜನರಲ್ಲಿ ಮೂಡಿದೆ. ಪ್ರತಿ ಗ್ರಾಮಕ್ಕೆ ಭೇಟಿ ನೀಡಿದಾಗ, ಜನರಿಂದ ವಾಸ್ತವ ತಿಳಿದುಕೊಂಡು, ಅದರ ಪರಿಹಾರಕ್ಕೆ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ ಎಂದು ಜಿಪಂ ಸಿಇಒ ರಾಹುಲ್‌ ಶಿಂಧೆ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ಧಾರೆ.

ಮಹಿಳೆಯರ ಸಾರಥ್ಯಕ್ಕೆ ಜಿಪಿಎಸ್‌!: ಗ್ರಾಮದಲ್ಲಿ ಪ್ರತಿನಿತ್ಯ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ‘ಸ್ವಚ್ಛ ವಾಹಿನಿಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಜಿಲ್ಲೆಯ 211 ವಾಹನಗಳಲ್ಲಿ ಕೇವಲ ಪ್ರಾಯೋಗಿಕವಾಗಿ 40 ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸಲು ಸಿದ್ಧತೆ ನಡೆದಿದೆ. ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮ ಹಾಗೂ ಅಲ್ಲಿ ಗುರುತಿಸಲಾದ ಪ್ರತಿ ಕಾರ್ನರ್‌ಗೆ ಬಂದ ಹೋಗಿ ವಿವರ ದಾಖಲಾಗುತ್ತದೆ. ಇದರಿಂದ ಕಾಟಾಚಾರಕ್ಕೆ ಕೆಲಕಡೆ ಹೋಗಿ ಬಂದರೆ ನಡೆಯುವುದಿಲ್ಲ ಎಂದು ಈ ಕೆಲಸಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಗೆ ಜಿಪಿಎಸ್‌ ಎಚ್ಚರಿಕೆ ನೀಡುತ್ತದೆ.

ಪ್ರಚಾರಕ್ಕೆ ಬಳಿಕೆ: ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ಸಂಚರಿಸಿ ಸರ್ಕಾರದ ಯೋಜನೆಗಳನ್ನು ಪಲುಪಿಸಲು ಸ್ವಚ್ಛ ವಾಹಿನಿಗಳು ಸಹಾಯಕವಾಗಿದ್ದು, ಇದರಿಂದ ಕಸದ ಜೊತೆ ಸರ್ಕಾರದ ಯೋಜನೆಗಳ ಜನರ ಮನೆ ಬಾಗಿಲು ಮುಟ್ಟಿಸಲು ಪೂರಕವಾಗಿದೆ. ಸರ್ಕಾರ ಯೋಜನೆಗಳಿಗೆ ವಾಹಿನೆ ಸಹಾಯಕವಾಗಿದೆ.

ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಕರ್ನಾಟಕದ ಇಮೇಜ್‌ ಹಾಳಾಗಿದೆ: ಎಂಬಿಪಾ

ಇನ್ನೂ 30 ಮಹಿಳೆಯರಿಗೆ ತರಬೇತಿ: ಕಸ ವಿಲೇವಾರು ಮಾಡುವ ವಾಹನಗಳಿಗೆ ಮಹಿಳೆಯರಿಂದ ಹೆಚ್ಚಿನ ಆಸಕ್ತಿ ಬಂದಿದ್ದರಿಂದ ಈಗ ಮತ್ತೆ 30 ಜನ ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡಲು ಸಿದ್ಧತೆ ನಡೆದಿದೆ. ಒಂದು ವಾರದೊಳಗೆ ಈ ತರಬೇತಿ ಆರಂಭಿಸಿ, ಅವರಿಗೆ ತರಬೇತಿ ನೀಡಲು ಜಿಪಂ ಮುಂದಾಗಿದೆ.

ಗ್ರಾಮವನ್ನು ಕಸಮುಕ್ತ ಮಾಡಲು ಗ್ರಾಪಂಗಳಿಗೆ ಕಸ ವಿಲೇವಾರಿ ವಾಹನ ನೀಡಲಾಗಿದ್ದು, ಕಸ ವಾಹನ ಚಾಲಕರು ಸಮಸ್ಯೆ ಬಂದಾಗ ಈ ವಾಹನಗಳಿಗೆ ಮಹಿಳೆಯರಿಗೆ ತರಬೇತಿ ನೀಡಿ, ಅವರಿಂದ ಕಸ ವಿಲೇವಾರು ಮಾಡಲಾಗುವುದು.
-ರಾಹುಲ್‌ ಶಿಂಧೆ ಸಿಇಒ ವಿಜಯಪುರ

click me!