Dharwad: ಕಾಮುಕನನ್ನು ಹಿಡಿದು ಚಪ್ಪಲಿ ಏಟು ಕೊಟ್ಟ ಮಹಿಳೆಯರು: ಸಿಕ್ಕ ಸಿಕ್ಕವರನ್ನ ರೇಟ್‌ ಕೇಳುತ್ತಿದ್ದನಂತೆ..!

By Sathish Kumar KH  |  First Published Dec 30, 2022, 11:28 AM IST

ಧಾರವಾಡ ಶುಭಾಷ್‌ ಮಾರುಕಟ್ಟೆಯಲ್ಲಿ ನಿತ್ಯ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಕಾಮುಕನನ್ನು ಹಿಡಿದು ವ್ಯಾಪಾರಸ್ಥ ಮಹಿಳೆಯರು ಚಪ್ಪಲಿಯಿಂದ ಹೊಡೆದು ಶಿಕ್ಷೆ ನೀಡಿದ್ದಾರೆ.


ಧಾರವಾಡ (ಡಿ.30): ಧಾರವಾಡ ನಗರದ ಶುಭಾಷ್ ಮಾರ್ಕೆಟ್ ನಲ್ಲಿ ಹೂವು, ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದವರು ಹಾಗೂ ಮಾರುಕಟ್ಟೆಗೆ ವಸ್ತುಗಳನ್ನು ಖರೀದಿ ಮಾಡಲು ಬರುತ್ತಿದ್ದ ಮಹಿಳಾ ಗ್ರಾಹಕರಿಗೆ ನಿಮ್ಮ ರೇಟ್‌ ಎಷ್ಟು? ನಿಮ್ಮ ನಂಬರ್‌ ಕೊಡಿ ಎಂದು ಚುಡಾಯಿಸುತ್ತಿದ್ದ ಕಾಮುಕನಿಗೆ ಮಹಿಳೆಯೇ ಹಿಡಿದುಕೊಂಡು ಗೂಸಾ ಕೊಟ್ಟಿರುವ ಘಟನೆ ಇಂದು ನಡೆದಿದೆ. 

ಹೌದು, ಕಾಮುಕರ ಉಪಟಳವನ್ನು ಆಗಿಂದಾಗ್ಗೆ ತಗ್ಗಿಸುವ ನಿಟ್ಟಿನಲ್ಲಿ ಶಿಕ್ಷೆಯನ್ನು ಕೊಡದಿದ್ದರೆ ಅವರು ತಮ್ಮ ಪುಂಡಾಟಿಕೆ ಇನ್ನೂ ಹೆಚ್ಚು ಮಾಡುತ್ತಾರೆ. ಇಂದು ಧಾರವಾಡ ನಗರದಲ್ಲಿಯೂ ಕೂಡ ಕಾಮುಕನೊಬ್ಬನಿಗೆ ಮಹಿಳೆಯರೇ ಹಿಡುದು ಹಿಗ್ಗಾ-ಮುಗ್ಗಾ ಥಳಿಸಿ ಪಾಠ ಕಲಿಸಿರುವ ಘಟನೆ ನಡೆದಿದ್ದು, ಇದಕ್ಕೆ ಸ್ಥಳೀಯರು ಕೂಡ ಸಾಥ್‌ ನೀಡಿದ್ದಾರೆ. ಧಾರವಾಡ ನಗರದ ಶುಭಾಷ್ ಮಾರ್ಕೆಟ್ ನಲ್ಲಿ ಹಣ್ಣು ಮಾರಾಟ ಮಾಡುವ  ಮಹಿಳೆಯರಿಗೆ ಚುಡಾಯಿಸುತ್ತಿದ್ದನು. ಈ ವೇಳೆ ಮಹಿಳೆಯರಿಗೆ ನಿಮ್ಮ ರೇಟ್ ಎನು? ನಿಮ್ಮ ನಂಬರ್ ಕೋಡಿ ಎಂದು ಕಾಮುಕ ಕೇಳಿದ್ದನು. ಈ ವೇಳೆ ಮಹಿಳೆಯರು ಕಾಮುಕನನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಜಾಡಿಸಿ ಧರ್ಮದೇಟು ನೀಡಿದ್ದಾರೆ.

Tap to resize

Latest Videos

undefined

Bengaluru crime: ವೃದ್ಧರ ಆರೈಕೆಗೆ ಬಂದವಳನ್ನು ರೇಪ್‌ ಮಾಡಿ ಕೂಡಿಹಾಕಿದ ಕಾಮುಕ!

ಮಹಿಳೆಯರಿಂದ ಚಪ್ಪಲಿಯಿಂದ ಏಟು: ಇನ್ನು ಮಹಿಳೆಯರಿಗೆ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದರಿಂದ ಇಲ್ಲಿ ಮಹಿಳೆಯರು ನೆಮ್ಮದಿಯಾಗಿ ವ್ಯಾಪಾರ ಮಾಡಲು ಆಗುತ್ತಿರಲಿಲ್ಲ. ಮಹಿಳಾ ವ್ಯಾಪಾರಿಗಳ ಜೊತೆಗೆ ಗ್ರಾಹಕರಿಗೂ ಕಿರುಕುಳ ನೀಡುತ್ತಿದ್ದನು. ಇನ್ನು ಗ್ರಾಹಕರು ಒಂದು ದಿನ ಮಾರುಕಟ್ಟೆಗೆ ಬಂದು ಹೋಗುತ್ತಿದ್ದರಿಂದ ಈತನ ಮಾತುಗಳನ್ನು ಲೆಕ್ಕಿಸದೇ ನಿರ್ಲಕ್ಷ್ಯ ಮಾಡಿ ಹೋಗುತ್ತಿದ್ದರು. ಆದರೆ, ಮಾರುಕಟ್ಟೆಯಲ್ಲಿ ಕಾಮುಕನ ಕಿರುಕುಳವನ್ನು ಹಲವು ದಿನಗಳಿಂದ ನೋಡಿದ್ದ ವ್ಯಾಪಾರಸ್ಥ ಮಹಿಳೆಯರು ಇಂದು ಹಿಡಿದುಕೊಂಡು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ತಮ್ಮ ಚಪ್ಪಲಿಯಿಂದ ಹೊಡೆದು ಶಿಕ್ಷೆ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಾಮುಕನನ್ನು ವಶಕ್ಕೆ ಪಡೆದಿದ್ದಾರೆ. 

click me!