ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಆಟೋ ದರ ವಿಪರೀತ ಹೆಚ್ಚಳವಾಗಿದ್ದು ಶ್ರೀಸಾಮಾನ್ಯ ಜೇಬಿಗೆ ನಿತ್ಯ ಕತ್ತರಿ ಬೀಳುತ್ತಿದೆ. ಆಟೋ ಚಾಲಕರ ನಡವಳಿಕೆಗಳು ಕೂಡಾ ಸರಿಯಾಗಿರುವುದಿಲ್ಲ. ದರದ ವಿಚಾರದಲ್ಲಿ ಪ್ರಯಾಣಿಕರ ಮೇಲೆ ಏರಿ ಹೋಗುತ್ತಾರೆ, ಜಗಳಗಳಾಗುವುದು ಸಾಮಾನ್ಯವಾಗಿದೆ. ಆಟೋಗಳಿಗೆ ಮೀಟರ್ ಅಳವಡಿಸಿ ಪ್ರಯಾಣದರ ನಿಗಧಿಪಡಿಸದ ಕಾರಣ ಇಂತಹದ್ದೊಂದು ಸಮಸ್ಯೆ ಸೃಷ್ಟಿಯಾಗಿದೆ.
ಕ್ಯಾಂಪೇನ್ ಸ್ಟೋರಿ (ಭಾಗ-1)
ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ (ಡಿ.30) : ಇದೇನ್ರಿ ಬಾಯಿಗೆ ಬಂದಂಗೆ ಕೇಳ್ತಾರೆ, ಹೇಳೋರು, ಕೇಳೋರು ಯಾರೂ ಇಲ್ಲವಾ. ದುರ್ಗದಲ್ಲಿ ಮೊದಲೆಲ್ಲ ಆಟೋ ಚಾಲಕರು ಹೀಗೆ ಇರಲಿಲ್ಲ. ಎಷ್ಟೊಂದು ಕೆಟ್ಟು ಹೋಗಿದ್ದಾರೆ. ಕೇಳಿದಷ್ಟುಕೊಡೋಕೆ, ದುಡ್ಡೇನು ಗಿಡದಲ್ಲಿ ಬಿಡ್ತವಾ ?
ನೀವೇನಾದರೂ ರಾತ್ರಿ ಹತ್ತು ಗಂಟೆ ನಂತರ ಚಿತ್ರದುರ್ಗ(Chitradurga)ದ ಕೆಎಸ್ಸಾರ್ಟಿಸಿ ಬಸ್ (KSRTC Bus)ಇಳಿದು ಆಟೋ ಸ್ಟ್ಯಾಂಡ್*(Auto stand) ಕಡೆ ಹೋದರೆ ಇಂತಹದ್ದೊಂದು ಗುನುಗಾಟ ತಂತಾನೆ ಕಿವಿಗೆ ಅಪ್ಪಳಿಸುತ್ತದೆ. ಮನೆಯತ್ತ ತೆರಳಲು ಆಟೋ ಏರಲು ಹೋದರೆ ನೂರು ರುಪಾಯಿ ಆಗುತ್ತೆ, 80 ಆಗುತ್ತೆ. ಕೊಡೋಕೆ ಆದ್ರೆ ಹತ್ತಿ ಅಂತಾರೆ. ಇನ್ನೂ ಹನ್ನೆರೆಡರ ನಂತರ ಏನಾದ್ರು ಬಂದರೆ ಮುಗೀತು. ಅವರು ಕೇಳಿದಷ್ಟೇ ಕೊಡಬೇಕು. ದಾವಣಗೆರೆಯಿಂದ ಚಿತ್ರದುರ್ಗಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(State Road Transport Corporation) ಬಸ್‌ಗಳಲ್ಲಿ ಪ್ರಯಾಣ ದರ 70 ರುಪಾಯಿ ಇದ್ದರೆ ನೀವು ಮನೆಗೆ ಹೋಗಲು 80 ರಿಂದ ನೂರು ರು. ಕೊಡಲೇ ಬೇಕು. ಅಂತಹದ್ದೊಂದು ಪರಿಸ್ಥಿತಿ ಆಟೋ ಚಾಲಕ(Auto driver)ರು ಸೃಷ್ಟಿಸಿಕೊಂಡಿದ್ದು ಅನಿವಾರ್ಯವೆಂಬಂತೆ ಪ್ರಯಾಣಿಕರೂ ಒಗ್ಗಿ ಹೋಗಿದ್ದಾರೆ.
ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ : ಆಟೋ, ಟ್ಯಾಕ್ಸಿ ಚಾಲಕರಿಗೆ ಸಲಹೆ
ಪೆಟ್ರೋಲ್(Petrol), ಗ್ಯಾಸ್ ದರ(Gas price) ಹೆಚ್ಚಳವಾಗಿದೆ ಎಂಬ ಸತ್ಯ ಸಂಗತಿ ಎಲ್ಲರಿಗೂ ಗೊತ್ತಿದೆ. ಪ್ರಯಾಣಿಕರೂ ಕೂಡಾ ತೀರಾ ಕಂಜೂಸ್ ಆಗಿ ನಡೆದುಕೊಳ್ಳುವುದಿಲ್ಲ. ಪೆಟ್ರೋಲ್ ದರ ಹೆಚ್ಚಳಕ್ಕೆ ತಕ್ಕಂತೆ ಆಟೋ ಜಾಜ್‌ರ್ ಕೊಡಲು ಸಿದ್ಧರಿದ್ದಾರೆ. ಆದರೆ ಬಾಯಿಗೆ ಬಂದಂತೆ ಕೇಳಿದರೆ ಕೊಡೋಕೆ ಸಾಧ್ಯವಾಗುವುದಿಲ್ಲ. ನಿಯಮಾವಳಿ ಪ್ರಕಾರ ರಾತ್ರಿ ವೇಳೆ ಒಂದುವರೆ ಪಟ್ಟು ಜಾಸ್ತಿ ಪಾವತಿಸಬೇಕಾಗಿದೆ. ಆದರೆ ಮೂರರಿಂದ ನಾಲ್ಕು ಪಟ್ಟು ಬೇಡಿಕೆಯ ಆಟೋ ಚಾಲಕರು ಮಂಡಿಸುತ್ತಿದ್ದಾರೆ.
ಚಿತ್ರದುರ್ಗವನ್ನು ಬೆಟ್ಟಗುಡ್ಡಗಳು ಸುತ್ತುವರಿದಿರುವುದರಿಂದ ನಗರ ಹೆಚ್ಚು ಬೆಳೆಯಲು ಸಾಧ್ಯವಾಗಿಲ್ಲ. ಐಯುಡಿಪಿ ಲೇಔಟ್, ಬ್ಯಾಂಕ್ ಕಾಲೋನಿ, ಜೋಗಿಮಟ್ಟಿರಸ್ತೆ ಹೊರತು ಪಡಿಸಿ ಬೇರೆ ಎಲ್ಲಿಗೆ ಹೋದರೂ ಎರಡರಿಂದ ಮೂರು ಕಿಮೀ ದೂರವಾಗುವುದಿಲ್ಲ. ಆಟೋ ಪ್ರಯಾಣ ದರ ಪ್ರತಿ ಎರಡು ಕಿಮೀಗೆ ನಿಗದಿ ಮಾಡಲಾಗುತ್ತದೆ. ಹಾಗಾಗಿ ಚಿತ್ರದುರ್ಗದಲ್ಲಿ ಪ್ರಮುಖ ಬಡಾವಣೆಗಳಿಗೆ ಹೋದರೆ ಮಿನಿಮಮ್ ಚಾಜ್‌ರ್ ಆಗುತ್ತೆ. ಈ ಅಂಶ ಗೊತ್ತಿದ್ದರೂ ಆಟೋ ಚಾಲಕರು ಹೆಚ್ಚುವರಿ ವಸೂಲು ಮಾಡುತ್ತಿದ್ದಾರೆ.
Bike Taxi : ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮಾಲೀಕರು, ಆಟೋ ಚಾಲಕರ ಜಟಾಪಟಿ ಶುರು
ಹಗಲು ಹೊತ್ತಿನಲ್ಲಿ ಆಟೋಗಳ ಸಂಚಾರ ಹೇರಳವಾಗಿರುವುದರಿಂದ ಚಾಲಕರು ದುಬಾರಿ ದರ ಕೇಳುವುದಿಲ್ಲ. 30 ರಿಂದ 40 ರುಪಾಯಿ ಪಡೆಯುತ್ತಾರೆ. ಹಾಗೊಂದು ವೇಳೆ ಜಾಸ್ತಿ ಕೇಳಿದರೆ ಅಲ್ಲಲ್ಲಿ ಕಂಡು ಬರುವ ಪೊಲೀಸರತ್ತ ಪ್ರಯಾಣಕರು ಕೈ ತೋರುತ್ತಾರೆ. ಹಾಗಾಗಿ ಅನಿವಾರ್ಯವೆಂಬಂತೆ ಕರೆದುಕೊಂಡು ಹೋಗುತ್ತಾರೆ. ರಾತ್ರಿ ವೇಳೆ ಮಾತ್ರ ಸಮಸ್ಯೆ ಸೃಷ್ಟಿಸುತ್ತಾರೆ.ರಾತ್ರಿ ವೇಳೆ ಕೆಲ ಆಟೋ ಚಾಲಕರು ದರದ ವಿಚಾರದಲ್ಲಿ ಪ್ರಯಾಣಿಕರೊಂದಿಗೆ ಜಟಾಪಟಿಗೆ ಇಳಿಯುತ್ತಾರೆ. ಆವರ ಈ ತರಹದ ನಡವಳಿಕೆ ಗಮನಿಸಿದರೆ ಪ್ರಯಾಣಿಕರು ಭಯ ಪಡುತ್ತಾರೆ. ಆಟೋ ಚಾಲನೆ ಮಾಡುವವರು ಚಾಲಕರೇ ? ಸುರಕ್ಷಿತವಾಗಿ ಮನೆಗೆ ತಲುಪಬಹುದೇÜ ಎಂಬಿತ್ಯಾದಿ ಅನುಮಾನಗಳು ಪ್ರಯಾಣಿಕರ ಮನದ ಆಚೆ, ಈಚೆ ಸುಳಿದಾಡುತ್ತವೆ. ಆಟೋ ಪ್ರಯಾಣಿಕರ ಬಗ್ಗೆ ಪೊಲೀಸರು ತಳೆದಿರುವ ಉದಾಸೀನತೆ ಇದಕ್ಕೆ ಪ್ರಮುಖ ಕಾರಣ. ಇದರಿಂದಾಗಿ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಿದೆ