ಅನಧಿಕೃತವಾಗಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟ್‌ನ್ನು ಗಾಬಿತ ಕೇಣಿಯ ಮೀನುಗಾರರು ತಡೆ ಹಿಡಿದು, ಪ್ರತಿಭಟನೆ ನಡೆಸಿ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಗುರುವಾರ ನಡೆದಿದೆ.
ಅಂಕೋಲಾ (ಡಿ.30) : ಅನಧಿಕೃತವಾಗಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟ್‌ನ್ನು ಗಾಬಿತ ಕೇಣಿಯ ಮೀನುಗಾರರು ತಡೆ ಹಿಡಿದು, ಪ್ರತಿಭಟನೆ ನಡೆಸಿ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಗುರುವಾರ ನಡೆದಿದೆ.
ನದಿ ಮತ್ತು ಸಮುದ್ರದ ತಟದಲ್ಲಿ ಕರಾವಳಿಯ ತೀರದ ಉದ್ದಕ್ಕೂ ಮೀನುಗಾರರು(Fishermen) ನದಿ ಮತ್ತು ಸಮುದ್ರ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮೀನುಗಾರಿಕೆಯೇ ಇವರ ಜೀವಾಳ. ಚಿಕ್ಕ-ಪುಟ್ಟನಾಡದೋಣಿಗಳನ್ನು ಬಳಸಿ ಮೀನುಗಾರರು ಮೀನಿಗಾಗಿ ತೆರಳುತ್ತಾರೆ. ಆದರೆ ಸುಪ್ರೀಂಕೋರ್ಚ್‌ನ ಆದೇಶವಿದ್ದಾಗಲೂ ಕೆಲವು ಬೋಟ್‌ಗಳ ಮಾಲಕರು ಅನಧಿಕೃತವಾಗಿ ಲೈಟ್ ಫಿಶಿಂಗ್ ಮಾಡುತ್ತಿದ್ದು, ಇದು ನಮ್ಮ ಜಿಲ್ಲೆಯಲ್ಲಿ ಸಂಪೂರ್ಣ ನಿಲ್ಲಬೇಕು ಎಂದು ಮೀನುಗಾರರು ಆಗ್ರಹಿಸಿದರು.
undefined
ಅಕ್ರಮ ಲೈಟ್ ಫಿಶಿಂಗ್ : 9 ಬೋಟ್ ಪೊಲೀಸರ ವಶಕ್ಕೆ
ರಾತ್ರಿ ವೇಳೆ ತದಡಿ(Tadadi)ಯ ಬೋಟ್(boat) ಭಾರಿ ಪ್ರಮಾಣದ ಲೈಟ್ ಹಾಕಿ ಮೀನುಗಾರಿಕೆ(fishering) ನಡೆಸುತ್ತಿತ್ತು. ಇದನ್ನು ನೋಡಿದ ನಾಡದೋಣಿಯ ಸ್ಥಳೀಯ ಮೀನುಗಾರರ ಇದು ಅನಧಿಕೃತ ಎನ್ನುವುದನ್ನು ಬೋಟ್‌ನ ಮಾಲಕರಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಈ ಬೋಟ್‌ನ ಕೆಲಸಗಾರರು ಮತ್ತು ನಾಡದೋಣಿ(nadadoni)ಯ ಸ್ಥಳೀಯ ಮೀನುಗಾರರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಸ್ಥಳೀಯ ಮೀನುಗಾರರೆಲ್ಲರೂ ಸೇರಿದಾಗ ಆರ್ಯಾದುರ್ಗಾ ಎನ್ನುವ ಹೆಸರಿನ ಬೋಟ್ ವಶವಾಗಿದೆ.
ಗಾಬಿತ ಕೇಣಿಯಲ್ಲಿ ಮೀನುಗಾರರು ಬೋಟ್ ಹಿಡಿದು ಜಮಾಯಿಸುತ್ತಿದ್ದಂತೆ ಸಂಬಂಧಿಸಿದ ಮೀನುಗಾರಿಕಾ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುರೇಶ ನಾಯಕ ಮತ್ತು ಸಿಬ್ಬಂದಿ ಗಾಬಿತ ಕೇಣಿಗೆ ಆಗಮಿಸಿ, ತೆಪ್ಪದ ಮೇಲೆ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟ್ ಇದ್ದಲ್ಲಿಗೆ ತೆರಳಿ ಬೋಟ್‌ನ ಮಾಲಕರ ವಿರುದ್ಧ ದೂರು ದಾಖಲಿಸಿದ್ದಲ್ಲದೆ ಸ್ಥಳೀಯರೊಂದಿಗೆ ಚರ್ಚಿಸಿದರು. ಸ್ಥಳೀಯ ಮೀನುಗಾರ ಮಹಿಳೆಯರು ಮತ್ತು ಸೇರಿದ 300ಕ್ಕೂ ಹೆಚ್ಚು ಮೀನುಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕ್ರಮಕ್ಕೆ ಆಗ್ರಹಿಸಿ ಪಟ್ಟು ಹಿಡಿದರು.
ಮೀನುಗಾರರು ಪ್ರತಿಭಟನೆ(Protest) ನಡೆಸುತ್ತಿದ್ದಂತೆ ಸ್ಥಳಕ್ಕೆ ಪಿಎಸೈ ಪ್ರೇಮನಗೌಡ ಆಗಮಿಸಿ ಮೀನುಗಾರರೊಂದಿಗೆ ಮಾತನಾಡಿ, ಯಾವುದನ್ನು ಮಾಡುವುದಿದ್ದರೂ ಕಾನೂನಾತ್ಮಕವಾಗಿ ಮಾಡಬೇಕು. ತಪ್ಪು ಮಾಡಿದವರಿಗೆ ಏನೆಲ್ಲ ಶಿಕ್ಷೆಯಾಗಬೇಕು, ಅದನ್ನು ಮಾಡಿಸುತ್ತೇವೆ. ತಪ್ಪೆಸಗಿದ ಬೋಟ್ ಮಾಲಕರನ್ನು ಕರೆಸುತ್ತೇವೆ ಎಂದು ಬೋಟ್‌ನ ಮೇಲಿದ್ದ 3 ಕಾರ್ಮಿಕರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆ ತಂದರು.
ಉತ್ತರಕನ್ನಡದಲ್ಲಿ ಹಾರ್ನ್‌ಬಿಲ್ ಪಕ್ಷಿಯ ಮನುಷ್ಯ ಪ್ರೀತಿ, ಹಕ್ಕಿ ಬರೋದನ್ನೇ ಕಾಯುವ ಕುಟುಂಬ
ಬಾಳು ಹಳನ್ಕರ, ವಿಜಯ ಅಂಕೋಲೆಕರ, ಕಿರಣ ನಾವಗೆ, ಪ್ರಭಾಕರ ಖಾರ್ವಿ, ದೀಪಕ ಜೋಶಿ, ಪ್ರದೀಪ ಕುರ್ಲೆ, ಸಂದೀಪ ಬಂಟ, ಚಂದ್ರಕಾಂತ ಹರಿಕಾಂತ ಸೇರಿದಂತೆ ನೂರಾರು ಮೀನುಗಾರರು ಉಪಸ್ಥಿತರಿದ್ದರು.