ಹೆಣ್ಮಕ್ಳೇ ಸ್ಟ್ರಾಂಗು ಗುರು: ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ: ಉಪನ್ಯಾಸಕನಿಗೆ ಹಿಗ್ಗಾಮುಗ್ಗಾ ಥಳಿತ

Published : Apr 16, 2022, 10:24 AM IST
ಹೆಣ್ಮಕ್ಳೇ ಸ್ಟ್ರಾಂಗು ಗುರು: ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ: ಉಪನ್ಯಾಸಕನಿಗೆ ಹಿಗ್ಗಾಮುಗ್ಗಾ ಥಳಿತ

ಸಾರಾಂಶ

*  ಬೆಳಗಾವಿ ನಗರದ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ ನಡೆದ ಘಟನೆ *  ಅತಿಥಿ ಉಪನ್ಯಾಸಕಿಯರ ಜತೆ ಅಸಭ್ಯ ವರ್ತನೆ ಆರೋಪ *  ಖಾಯಂ ಉಪನ್ಯಾಸಕನಿಗೆ ಉಪನ್ಯಾಸಕಿಯರಿಂದ ಥಳಿತ

ಬೆಳಗಾವಿ(ಏ.16):  ನಗರದ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನ ಖಾಯಂ ಉಪನ್ಯಾಸಕ ನಿತ್ಯ ಮದ್ಯ(Alcohol) ಸೇವಿಸಿ ಅತಿಥಿ ಉಪನ್ಯಾಸಕಿಯರ ಜೊತೆ ಅಸಭ್ಯ ವರ್ತನೆ ಮಾಡುತ್ತಿದ್ದನೆಂದು ಆರೋಪಿಸಿ ಅತಿಥಿ ಉಪನ್ಯಾಸಕಿಯರು ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆಗಿದೆ‌. 

ಏಪ್ರಿಲ್ 12 ರಂದು ಸರ್ಕಾರಿ ಸರ್ದಾರ್ ಪಿಯು ಕಾಲೇಜಿನ ಸ್ಟಾಫ್ ರೂಮ್‌ನಲ್ಲೇ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಾಲಿನಿಂದ ಒದ್ದು ಚಪ್ಪಲಿಯಿಂದ ಕಾಲೇಜಿನ ಮಹಿಳಾ ಸಿಬ್ಬಂದಿ ಧರ್ಮದೇಟು ನೀಡಿದ್ದಾರೆ. ಇಂಗ್ಲಿಷ್ ವಿಭಾಗದ ಖಾಯಂ ಉಪನ್ಯಾಸಕ ಅಮಿತ್ ಬಸವಮೂರ್ತಿ ನಿತ್ಯ ಮದ್ಯ ಸೇವಿಸಿ ಕಾಲೇಜಿಗೆ ಆಗಮಿಸಿ ಅವಾಚ್ಯ ಶಬ್ದಗಳಿಂದ ಉಪನ್ಯಾಸಕಿಯರನ್ನು ನಿಂದಿಸುತ್ತಿದ್ದನಂತೆ‌‌. ಮಹಿಳಾ ಸಿಬ್ಬಂದಿ(Womens Staff) ಇರುವ ವಿಶ್ರಾಂತಿ ಕೊಠಡಿಗೆ ತೆರಳಿ ಅಸಭ್ಯ ವರ್ತನೆ ಮಾಡುತ್ತಿದ್ದನಂತೆ ಈ ಕುರಿತು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಉಪನ್ಯಾಸಕನ ಹಿಗ್ಗಾಮುಗ್ಗಾ ಥಳಿಸಿ ಬಳಿಕ ಮಹಿಳಾ‌ ಪೊಲೀಸ್(Police) ಠಾಣೆಗೆ ಅತಿಥಿ ಉಪನ್ಯಾಸಕಿಯರು(Guest Lecturers) ದೂರು ನೀಡಿದ್ದಾರೆ.

ಸಿಡಿ ಕೇಸ್​​​​​​​​​​​​​​​​​​ನಲ್ಲಿದ್ದ ಮಹಾನಾಯಕನ ತಂಡ ಸಂತೋಷ್​ ಕೇಸ್​ನಲ್ಲೂ ಇದೆ, ಗಂಭೀರ ಆರೋಪ

'ಅತಿಥಿ ಉಪನ್ಯಾಸಕರು ಕಾಲ ಕಸ ಅಲ್ಲ'

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಅತಿಥಿ ಉಪನ್ಯಾಸಕಿಯೊಬ್ಬರು, 'ಕಳೆದ ಕೆಲವು ದಿನಗಳಿಂದ ಸರ್ದಾರ್ ಪಿಯು ಕಾಲೇಜಿನ ಇಂಗ್ಲಿಷ್ ವಿಭಾಗದ ಖಾಯಂ ಉಪನ್ಯಾಸಕ ಅಮಿತ್ ಬಸವಮೂರ್ತಿ ಅಸಭ್ಯವಾಗಿ ವರ್ತಿಸುತ್ತಿದ್ದ. ಕಾಲೇಜಿಗೆ ಮದ್ಯಪಾನ ಸೇವಿಸಿ ಬರುತ್ತಿದ್ದರು. 

NEP: ಸಮಗ್ರ ಅಭಿವೃದ್ಧಿಗೆ ರಾಷ್ಟೀಯ ಶಿಕ್ಷಣ ನೀತಿ ಅವಶ್ಯಕ: ಸಚಿವ ನಾಗೇಶ

ಎಕ್ಸಾಂ ಡ್ಯೂಟಿ ಮಾಡುವ ಸಂದರ್ಭದಲ್ಲಿ ತೊಂದರೆ ಕೊಡೋದು. ಸ್ಟಾಫ್ ರೂಮ್ ಗೆ ಬಂದು ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದ. ಅತಿರೇಕಕ್ಕೆ ಹೋಗಿ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಅದಕ್ಕಾಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ತಮಗೆ ನ್ಯಾಯ ಒದಗಿಸಲು ಮನವಿ ಮಾಡಿದ್ದಾರೆ. 

ಇದು ಕೇವಲ ಅತಿಥಿ ಉಪನ್ಯಾಸಕಿಯರಿಗೆ ಅಷ್ಟೇ ಅಲ್ಲ ನಮ್ಮ ಜೊತೆ ಇರುವ ಇತರ ಮಹಿಳಾ ಸಿಬ್ಬಂದಿಗೂ ತೊಂದರೆ ಕೊಡುತ್ತಿದ್ದಾರೆ. ಇನ್ನೊಬ್ಬರ ಮೇಲೆ ಕೈ ಮಾಡೋದು ಪ್ರತಿದಿನ ಸಾರಾಯಿ ಕುಡಿದು ಕರ್ತವ್ಯಕ್ಕೆ ಬರ್ತಾರೆ. ಆದರೂ ಯಾವುದೂ ಕ್ರಮ ಕೈಗೊಂಡಿಲ್ಲ. ದಯಮಾಡಿ ಅತಿಥಿ ಉಪನ್ಯಾಸಕಿಯರು ಕಾಲು ಕಸ ಅಲ್ಲ, ಅವರಿಗೆ ನ್ಯಾಯ ಒದಗಿಸಿಕೊಡಬೇಕು‌. ಮಹಿಳೆಯರಿಗಾಗುತ್ತಿರುವ ತೊಂದರೆ ಸೂಕ್ಷ್ಮವಾಗಿ ಪರಿಗಣಿಸಿ ನ್ಯಾಯ ಒದಗಿಸಿಕೊಡಬೇಕು' ಅಂತಾ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
 

PREV
Read more Articles on
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ