ಮಹಿಳೆಯರು ಕೀಳರಿಮೆಯಿಂದ ಹೊರಬರಬೇಕು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಕರೆ ನೀಡಿದರು.
ಮೈಸೂರು : ಮಹಿಳೆಯರು ಕೀಳರಿಮೆಯಿಂದ ಹೊರಬರಬೇಕು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಕರೆ ನೀಡಿದರು.
ರಾಮಕೃಷ್ಣ ನಗರದ ಸುಯೋಗ್ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಅಂಗವಾಗಿ ಬುಧವಾರ ಆಯೋಜಿಸಿದ್ದ ಸುಯೋಗ್ ವುಮೆನ್ಸ್ ಹೆಲ್ತ್ ಕ್ಲಬ್ ಉದ್ಘಾಟನೆ ಹಾಗೂ ವರ್ಷವಿಡೀ ಜರುಗುವ ಮಹಿಳೆಯರ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
undefined
ಮಹಿಳೆಯರು ಹುಟ್ಟಿನಿಂದಲೇ ಸದೃಢ ಮನಸ್ಸುಳ್ಳವರಾಗಿದ್ದು, ಪರಿಸರದ ಪ್ರಭಾವದಿಂದ ಕೀಳರಿಮೆಗೀಡಾಗುತ್ತಾರೆ. ಅಂತಹ ಪರಿಸರವನ್ನು ಹಿಮ್ಮೆಟ್ಟಿಮಹಿಳೆ ಜನ್ಮದತ್ತವಾಗಿ ಬಂದ ಸದೃಢ ದೇಹ ಮತ್ತು ಮನಸ್ಸುಗಳನ್ನು ವಿಕಾಸಗೊಳಿಸುವ ದಿಕ್ಕಿನಲ್ಲಿ ಇಂದಿನ ವಾತಾವರಣ ಸಹಕಾರಿಯಾಗಿದ್ದು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸುಯೋಗ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ಸಂತಾನಾಂಗ ತಜ್ಞರಾದ ಡಾ. ಗೀತಾ ಅವರು ಮುಟ್ಟಿನ ಅವ್ಯವಸ್ಥೆಗಳು ಮತ್ತು ಡಾ. ಸ್ವಪ್ನಾ ಅವರು ಸ್ತ್ರೀಯಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿದರು.
ಇದೇ ವೇಳೆ ಸ್ತ್ರೀ ಸಂತಾನಾಂಗ ಮತ್ತು ಪ್ರಸೂತಿ ತಜ್ಞೆ ಡಾ. ಗೀತಾ, ಶುಶ್ರೂಷಕಿ ರೇಷ್ಮಾ, ಆರೋಗ್ಯ ಸ್ವಚ್ಛತಾ ಕಾರ್ಯಕರ್ತೆ ರುಕ್ಮಿಣಿ , ಆಡಳಿತ ಸಹಾಯಕಿ ಮಹಾಲಕ್ಷಿ ್ಮ, ಸುಯೋಗ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ನಾಗಮಣಿ, ಸಮಾಜ ಸೇವಕಿಯರಾದ ಪ್ರೇಮ ಶ್ರೀಕಂಠಸ್ವಾಮಿ ಹಾಗೂ ಉಷಾ ಅವರನ್ನು ಸುಯೋಗ್ ಆಸ್ಪತ್ರೆಯ ನಿರ್ದೇಶಕಿ ಸುಧಾ ಯೋಗಣ್ಣ ಸನ್ಮಾನಿಸಿದರು.
ಮೈಸೂರು ವೈದ್ಯಕೀಯ ಕಾಲೇಜು ಡೀನ್ ಮತ್ತು ನಿರ್ದೇಶಕ ಡಾ. ದಾಕ್ಷಾಯಿಣಿ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ಸಿಇಓ ಡಾ. ಮಂಜುನಾಥ್, ವ್ಯವಸ್ಥಾಪಕದ ನಿರ್ದೇಶಕ ಡಾ. ಸುಯೋಗ್ ಯೋಗಣ್ಣ, ನರ್ಸಿಂಗ್ ಕಾಲೇಜಿನ ಸಿಇಒ ಡಾ. ರಾಜೇಂದ್ರಪ್ರಸಾದ್ ಇದ್ದರು. ವಿಜಯ ಮಂಜುನಾಥ್ ಸ್ವಾಗತಿಸಿದರು. ರಾಜ ರಾಜೇಶ್ವರಿ ನಿರೂಪಿಸಿದರು. ಪನ್ನಗ ವಿಜಯಕುಮಾರ್ ವಂದಿಸಿದರು.
ಹೆಣ್ಣು ಮಕ್ಕಳಿಗಾಗಿ ಮರು ಮದುವೆ
ಕಾಸರಗೋಡು: ಸಾಕ್ಷರತೆಯ ವಿಚಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕೇರಳ ರಾಜ್ಯದಲ್ಲಿ ಮುಸ್ಲಿಂ ಜೋಡಿಯೊಂದು ತಾವು ಮದ್ವೆಯಾದ 29 ವರ್ಷಗಳ ನಂತರ ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಮತ್ತೊಮ್ಮೆ ವಿವಾಹವಾಗಿದ್ದಾರೆ.
ಅದರಲ್ಲೇನು ವಿಶೇಷ ಅಂತೀರಾ? ಇವರು ತಮ್ಮ ಮೂವರು ಹೆಣ್ಣು ಮಕ್ಕಳಿಗೆ ತಮ್ಮ ಅನುವಂಶೀಯ ಆಸ್ತಿ ಹೋಗುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಮದ್ವೆಯಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆ ಇಂತಹ ವಿಶೇಷ ಮದ್ವೆಗೆ ಸಾಕ್ಷಿಯಾಯ್ತು. ಕುಂಚಾಕೊ ಬೋಬನ್ (Kunchacko Boban) ಅಭಿನಯದ 'ಎನ್ ತಾನ್ ಕೇಸ್ ಕೊಡು' ಎಂಬ ಮಲೆಯಾಳಂ ಸಿನಿಮಾದಲ್ಲಿ ನಟಿಸಿರುವ ವೃತ್ತಿಯಲ್ಲಿ ವಕೀಲರು ಆಗಿರುವ, ನಟ ಸಿ ಶುಕ್ಕೂರ್ ಹಾಗೂ ಇವರ ಪತ್ನಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಪ್ರೊ. ವೈಸ್ ಚಾನ್ಸೆಲರ್ ಡಾ ಶೀನಾ ಹೀಗೆ ಮರು ಮದುವೆಯಾದವರು. ಇದಕ್ಕೂ ಮೊದಲು ಈ ಜೋಡಿ 1994ರ ಅಕ್ಟೋಬರ್‌ನಲ್ಲಿ ವಿವಾಹವಾದರು. ಅಂದು ಅವರ ವಿವಾಹವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಾಣಕ್ಕಾಡ್ ಸೈಯದ್ ಹೈದರ್ ಅಲಿ ಶಿಹಾಬ್ ತಂಗಲ್ ಅವರು ನಡೆಸಿ ಕೊಟ್ಟಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ದಂಪತಿಗಳು ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವಾಗ ಪ್ರತಿಜ್ಞೆಯನ್ನು ಹೊಸದಾಗಿಸುವುದು ಸಾಮಾನ್ಯವಾಗಿದೆ.