ಬೆಂಗಳೂರು-ಮೈಸೂರು ರಾಜ್ಯರಾಣಿ ರೈಲು ನಿರ್ವಹಿಸಿದ ಮಹಿಳಾ ಸಿಬ್ಬಂದಿ

By Kannadaprabha News  |  First Published Mar 9, 2023, 5:21 AM IST

ನಗರದ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಿಂದ ಬೆಂಗಳೂರು-ಮೈಸೂರು ರಾಜ್ಯರಾಣಿ ಎಕ್ಸ್‌ಪ್ರೆಸ್‌ ರೈಲು ಚಾಲನೆ, ಭದ್ರತೆ ಸೇರಿ ಎಲ್ಲ ವಿಭಾಗದಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.


 ಬೆಂಗಳೂರು :  ನಗರದ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಿಂದ ಬೆಂಗಳೂರು-ಮೈಸೂರು ರಾಜ್ಯರಾಣಿ ಎಕ್ಸ್‌ಪ್ರೆಸ್‌ ರೈಲು ಚಾಲನೆ, ಭದ್ರತೆ ಸೇರಿ ಎಲ್ಲ ವಿಭಾಗದಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.

ಜೆ.ಫಾತಿಮಾ ಅವರು ಪಾಯಿಂಟ್ಸ್‌ ಮ್ಯಾನ್‌ ಆಗಿ, ಸರಸ್ವತಿ ಮತ್ತು ಪ್ರತಿಮಾ ಶರ್ಮಾ ಸ್ಟೇಷನ್‌ ಮಾಸ್ಟರ್‌ಗಳಾಗಿ ಚಾಲನೆ ನೀಡಿದರು. ಆಗಿ ಅಭಿರಾಮಿ ಅವರು ರೈಲನ್ನು ಚಾಲನೆ ಮಾಡಿದರೆ ಗಾಯತ್ರಿ ಕೃಷ್ಣನ್‌ ಸಹಾಯಕ ಲೋಕೋ ಪೈಲಟ್‌ ಆಗಿದ್ದರು. ಶೈಲಜಾ ರೈಲು ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದರು. ಇನ್ನು, ರೈಲ್ವೆ ಸಂರಕ್ಷಣಾ ಪಡೆಯ ಛಾಯಾಮಣಿ, ಶಿಲ್ಪಾ, ಎಸ್‌.ಹರತಿ ಮೀನಾ, ವಿಜಯಲಕ್ಷ್ಮಿ, ಪ್ರತಿಭಾ ಸಿಂಗ್‌ ಮತ್ತು ಎಂ.ವಿದ್ಯಾ ರೈಲಿಗೆ ಭದ್ರತೆ ಒದಗಿಸಿದರು. ಟಿಕೆಟ್‌ ಪರಿವೀಕ್ಷಕರಾದ ಪಿ.ಎಸ್‌.ಉಮಾ, ಮೀನಾಕ್ಷಿದೇವಿ, ರಮಾ ಹಂಸ, ಟೀನಾ ಜೋಸೆಫ್‌, ಸೋನಾ ಮತ್ತು ಸಿ.ಎಸ್‌.ಭಾರತಿ, ಟಿಕೆಟ್‌ ಪರಿಶೀಲನೆ ನಡೆಸಿದರು.

Latest Videos

undefined

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮಾ, ಹಿರಿಯ ವಿಭಾಗೀಯ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಪೂಜಾ ಮತ್ತಿತರರು ಈ ವೇಳೆ ಮಹಿಳಾ ಸಿಬ್ಬಂದಿಗೆ ಶುಭ ಕೋರಿದರು. 

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರು (ಮಾ.5): ಭಾರತೀಯ ರೈಲ್ವೆ ಕರ್ನಾಟಕದ ಜನರೊಂದಿಗೆ ಸಂತಸದ ಸುದ್ದಿ ಹಂಚಿಕೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಹಲವು ರೈಲು ನಿಲ್ದಾಣಗಳಲ್ಲಿ ಆರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ವಿವಿಧ ರೈಲುಗಳ ನಿಲುಗಡೆಗೆ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಹಾದು ಹೋಗುವ ಹಲವು ರೈಲುಗಳು ವಿವಿಧ ನಿಲ್ದಾಣದಲ್ಲಿ ಒಂದು ನಿಮಿಷ ನಿಂತು ಮುಂದಕ್ಕೆ ಸಾಗಲಿದೆ. ಮಾತ್ರವಲ್ಲ ರಾಜ್ಯ ಯಾವ ನಿಲ್ದಾಣದಲ್ಲಿ ಯಾವೆಲ್ಲ ರೈಲುಗಳು 1 ನಿಮಿಷ ನಿಂತು ಮುಂದೆ ಸಾಗಲಿದೆ ಎಂಬ ಬಗ್ಗೆ ನೈರುತ್ಯ ರೈಲ್ವೆಯು ಪಟ್ಟಿ ಬಿಡುಗಡೆ ಮಾಡಿದೆ. ಮಂಗಳೂರು ಮತ್ತು  ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲನ್ನು ಬಾರ್ಕೂರಿನಲ್ಲಿ ನಿಲ್ಲಿಸಬೇಕೆಂಬುದು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದಕ್ಕೆ ಈಗ ರೈಲ್ವೆ ಇಲಾಖೆ ಅಸ್ತು ಎಂದಿದೆ. ಇದರಿಂದಾಗಿ ಉಡುಪಿ, ಚಿಕ್ಕಮಗಳೂರು ಭಾಗದ ಜನರು ಸಂತಸಗೊಂಡಿದ್ದಾರೆ. ಇನ್ನು ರೈಲುಗಳು 1 ನಿಮಿಷ ನಿಂತು ತನ್ನ ಪ್ರಯಾಣ ಮುಂದುವರೆಸುತ್ತಿರುವುದಕ್ಕೆ ಜನರು ಕೂಡ ಖುಷಿಗೊಂಡಿದ್ದಾರೆ.

ಯಾವೆಲ್ಲ ರೈಲುಗಳು 1 ನಿಮಿಷ ಯಾವ ನಿಲ್ದಾಣದಲ್ಲಿ ನಿಲ್ಲಲಿದೆ ಎಂಬ ಬಗ್ಗೆ ನೈರುತ್ಯ ರೈಲ್ವೆ ಬಿಡುಗಡೆ ಮಾಡಿರುವ ಪಟ್ಟಿ ಇಲ್ಲಿದೆ:
ರೈಲು ಸಂಖ್ಯೆ 17317 ಎಸ್. ಎಸ್. ಎಸ್. ಹುಬ್ಬಳ್ಳಿ-ದಾದರ್
ರೈಲು ಸಂಖ್ಯೆ 17318 ದಾದರ್- ಎಸ್‌. ಎಸ್. ಎಸ್. ಹುಬ್ಬಳ್ಳಿ,
ರೈಲು ಸಂಖ್ಯೆ 22497 ಶ್ರೀ ಗಂಗಾನಗರ-ತಿರುಚ್ಚಿರಾಪ್ಪಲ್ಲಿ
ರೈಲು ಸಂಖ್ಯೆ 22498 ತಿರುಚ್ಚಿರಾಪ್ಪಲ್ಲಿ ಶ್ರೀ ಗಂಗಾನಗರ್   
ಈ ನಾಲ್ಕು ರೈಲುಗಳು ಚಿಕ್ಕೋಡಿ ರೋಡ್ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲಲಿದೆ.

click me!