ಶಕ್ತಿ ಯೋಜನೆ: ನಂದಿ, ಆದಿಯೋಗಿ ತಾಣಕ್ಕೆ ಮಹಿಳಾ ಪ್ರವಾಸಿಗರ ದಂಡು...!

By Kannadaprabha NewsFirst Published Jul 17, 2023, 1:30 AM IST
Highlights

ಚಿಕ್ಕಬಳ್ಳಾಪುರದ ಪ್ರವಾಸಿ ತಾಣ ಮತ್ತು ಪುಣ್ಯಕ್ಷೇತ್ರಗಳಾದ ನಂದಿ ಬೆಟ್ಟ, ನಂದಿ, ಮತ್ತು ಆವಲಗುರ್ಕಿಯ ಇಶಾ ಪೌಂಡೇಷನ್‌ನ 113 ಅಡಿಯ ಆದಿಯೋಗಿ ಶಿವನ ಪ್ರತಿಮೆ ನೋಡಲು ಮಹಿಳೆಯರು ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಚಿಕ್ಕಬಳ್ಳಾಪುರದಿಂದ ಅವಲಗುರ್ಕಿಯ ಆದಿಯೋಗಿಗೆ, ನಂದಿ, ನಂದಿಬೇಟ್ಟಕ್ಕೆ ಹೋಗಲು ಸೂಕ್ತ ಬಸ್‌ಗಳು ಸಿಗದೆ ಬಸ ನಿಲ್ದಾಣದಲ್ಲಿ ಪರದಾಡಿದರು.

ಚಿಕ್ಕಬಳ್ಳಾಪುರ(ಜು.17):  ಶಕ್ತಿ ಯೋಜನೆಯ ಪರಿಣಾಮ ಭಾನುವಾರದಂದು ಚಿಕ್ಕಬಳ್ಳಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದ್ದವು. ಪ್ರವಾಸಿ ತಾಣ ಮತ್ತು ಪುಣ್ಯಕ್ಷೇತ್ರಗಳಿಗೆ ತೆರಳುವ ಬಸ್‌ಗಳು ಫುಲ್‌ ರಷ್‌ ಆಗಿದ್ದವು. ಉಚಿತ ಪ್ರಯಾಣದಡಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಚಿಕ್ಕಬಳ್ಳಾಪುರಕ್ಕೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಸಾಗರೋಪಾದಿಯಂತೆ ಹರಿದು ಬರುತ್ತಿದ್ದರು.

ಚಿಕ್ಕಬಳ್ಳಾಪುರದ ಪ್ರವಾಸಿ ತಾಣ ಮತ್ತು ಪುಣ್ಯಕ್ಷೇತ್ರಗಳಾದ ನಂದಿ ಬೆಟ್ಟ, ನಂದಿ, ಮತ್ತು ಆವಲಗುರ್ಕಿಯ ಇಶಾ ಪೌಂಡೇಷನ್‌ನ 113 ಅಡಿಯ ಆದಿಯೋಗಿ ಶಿವನ ಪ್ರತಿಮೆ ನೋಡಲು ಮಹಿಳೆಯರು ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಚಿಕ್ಕಬಳ್ಳಾಪುರದಿಂದ ಅವಲಗುರ್ಕಿಯ ಆದಿಯೋಗಿಗೆ, ನಂದಿ, ನಂದಿಬೇಟ್ಟಕ್ಕೆ ಹೋಗಲು ಸೂಕ್ತ ಬಸ್‌ಗಳು ಸಿಗದೆ ಬಸ ನಿಲ್ದಾಣದಲ್ಲಿ ಪರದಾಡಿದರು.

ಸಾರಿಗೆ ಸಚಿವರು ನೋಡಲೇಬೇಕಾದ ಸುದ್ದಿ, ಫುಟ್‌ಬೋರ್ಡ್‌ನಲ್ಲೇ ಮಗು ಹಿಡಿದು ಮಹಿಳೆ ಪ್ರಯಾಣ!

5 ನಿಮಿಷಕ್ಕೊಂದು ಬಸ್‌:

ಇಷಾ ಆದಿಯೋಗಿಗೆ 5 ನಿಮಿಷಕ್ಕೊಂದು ವಿಶೇಷ ಬಸ್‌ ವ್ಯವಸ್ಥೆ ಮಾಡಿದ್ದರೂ ಬಸ್‌ಗಳು ಸಾಲುತ್ತಿಲ್ಲ. ಇದರೊಂದಿಗೆ ನಂದಿ, ನಂದಿ ಗಿರಿಧಾಮಕ್ಕೂ 30 ನಿಮಿಷಕ್ಕೆ ಒಂದು ಬಸ್‌ ವ್ಯವಸ್ಥೆ ಮಾಡಿದ್ದರು. ಮಹಿಳಾ ಪ್ರಯಾಣಿಕರನ್ನು ನಿಯಂತ್ರಿಸಲು ಚಾಲಕರು ಹಾಗು ನಿರ್ವಾಹಕರು ಹರಸಾಹಸ ಪಡುತ್ತಿರರುವ ದೃಶ್ಯಗಳು ಕಂಡುಬಂದವು.

ಮಹಿಳೆಯರ ನೂಕುನುಗ್ಗಲು ಕಂಡು ಪುರುಷ ಪ್ರಯಾಣಿಕರು ಮೂಕ ಪ್ರೇಕ್ಷಕನಂತೆ ನಿಲ್ಲಬೇಕಾಯಿತು. ಬಸ್‌ನಲ್ಲಿ 54 ಸೀಟ್‌ಗಳಿದ್ದು 130ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ .ಅದರಲ್ಲಿ 10 ರಿಂದ 15 ಜನ ಮಾತ್ರ ಪುರುಷ ಪ್ರಯಾಣಿಕರಿದ್ದರೆ ಉಳಿದವರೆಲ್ಲ ಮಹಿಳೆಯರು.

ಬಸ್‌ ಹತ್ತಲು ಮಹಿಳೆಯ ಸರ್ಕಸ್‌

ವೀಕೆಂಡ್‌ ಮತ್ತು ಶಕ್ತಿ ಯೋಜನೆ ಪರಿಣಾಮ ಈ ಮಾರ್ಗದ ಬಸ್‌ಗಳಲ್ಲಿ ನೂಕುನುಗ್ಗಲು ಏರ್ಪಟ್ಟಿದ್ದು, ಪುಣ್ಯಕ್ಷೇತ್ರ ಮತ್ತು ಪ್ರವಾಸಿ ತಾಣಗಳಲ್ಲಿ ಮಹಿಳೆಯರು ಹೆಚ್ಚಾಗುತ್ತಿದ್ದು, ಬಸ್‌ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿತ್ತು. ನಿಲ್ದಾಣಕ್ಕೆ ಬಸ್‌ ಬರುತ್ತಿದ್ದಂತೆ ಬಸ್‌ ಹತ್ತಲು ಮಹಿಳಾ ಮಣಿಗಳ ನೂಕು ನುಗ್ಗಲು, ತಳ್ಳಾಟ ಸಾಮಾನ್ಯವಾಗಿತ್ತು.

click me!