ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 1 ಲಕ್ಷ ನೀಡುವ ಎಫೆಕ್ಟ್‌: ಅಂಚೆ ಖಾತೆ ತೆರೆಯಲು ಮಹಿಳೆಯರ ನೂಕುನುಗ್ಗಲು..!

By Kannadaprabha NewsFirst Published May 29, 2024, 12:22 PM IST
Highlights

ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ಪ್ರತಿ ತಿಂಗಳು ಎಂಟು ಸಾವಿರ ರು. ಖಾತೆಗೆ ಜಮಾ ಆಗುವ ಈ ಯೋಜನೆ ಜಾರಿಗೆ ಬರಲಿದೆ ಎಂಬ ವಿಶ್ವಾಸದಿಂದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಬಿಪಿ) ಅಡಿ ಖಾತೆ ತೆರೆಯಲು ನಗರದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. 

ಬೆಂಗಳೂರು(ಮೇ.29):  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿರುವ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರು. ನೀಡುವ 'ಮಹಾಲಕ್ಷ್ಮೀ' ಯೋಜನೆ ಜಾರಿಗೆ ಬರಲಿದೆ ಎಂದು ಸಾವಿರಾರು ಮಹಿಳೆಯರು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಗೆ (ಜಿಪಿಓ) ಕಳೆದ ಎರಡು ದಿನಗಳಿಂದ ಬೆಳ್ಳಂ ಬೆಳಗ್ಗೆ ಆಗಮಿಸಿ ಖಾತೆ ತೆರೆಯಲು ಆರಂಭಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ಪ್ರತಿ ತಿಂಗಳು ಎಂಟು ಸಾವಿರ ರು. ಖಾತೆಗೆ ಜಮಾ ಆಗುವ ಈ ಯೋಜನೆ ಜಾರಿಗೆ ಬರಲಿದೆ ಎಂಬ ವಿಶ್ವಾಸದಿಂದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಬಿಪಿ) ಅಡಿ ಖಾತೆ ತೆರೆಯಲು ನಗರದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಖಾತೆ ತೆರೆಯಲು ಮೇ 27 ಕೊನೆಯ ದಿನ ಎಂಬ ವದಂತಿ ವಾಟ್ಸ್ ಆ್ಯಪ್ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯ ಹುಟ್ಟುವ ಮುನ್ನವೇ ಜಿಪಿಓ ಕಚೇರಿಗೆ ಬರತೊಡಗಿದ್ದಾರೆ. ಖಾತೆ ತೆರೆಯಲು ತಳ್ಳಾಟ, ನೂಕಾಟ ತಡೆಯಲು ಪೊಲೀಸರ ಸಹಾಯ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

Latest Videos

ಸಾಲಮನ್ನಾ, ಹೆಣ್ಮಕ್ಕಳಿಗೆ ದುಡ್ಡು, ಜಾತಿ ಗಣತಿ, 25 ಲಕ್ಷ ಆರೋಗ್ಯ ವಿಮೆ..ಕಾಂಗ್ರೆಸ್‌ ಪ್ರಣಾಳಿಕೆಯ 10 ಪ್ರಮುಖ ಅಂಶಗಳು!

ಯಾವುದೇ ಯೋಜನೆ ಇಲ್ಲ: 

ಎಂಟು ಸಾವಿರ ರು. ಪ್ರೋತ್ಸಾಹ ಧನ ನೀಡುವ ಯಾವುದೇ ಯೋಜನೆ ಜಾರಿ ಇಲ್ಲವೆಂದು ಕಚೇರಿಯಹೊರಗಡೆ ಫಲಕ ಹಾಕಲಾಯಿತು. ಜತೆಗೆ ಜಿಪಿಒ ಕಚೇರಿಯ ಸಿಬ್ಬಂದಿ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಎಂಟು ಸಾವಿರ ರು. ಖಾತೆಗೆ ಜಮಾ ಆಗುವ ಯಾವುದೇ ಯೋಜನೆ ಜಾರಿ ಇಲ್ಲ ಎಂದು ಸಮಜಾಯಿಷಿ ನೀಡಿದರೂ ಸಹ ಮಹಿಳೆಯರು ಖಾತೆ ತೆರೆಯುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಜಿಪಿಒ ಕಚೇರಿಯಲ್ಲಿ ಬೇರೆ ಬೇರೆ ಸಿಬ್ಬಂದಿಯನ್ನು ಐಪಿಬಿಪಿ ಖಾತೆ ತೆರೆಯಲು ಬಳಸಿಕೊಳ್ಳಲಾಯಿತು ಎಂದು ಜಿಪಿಓ ಅಧಿಕಾರಿಗಳು ತಿಳಿಸಿದ್ದಾರೆ. 

Congress Manifesto: ಕರ್ನಾಟಕ, ತೆಲಂಗಾಣ ಮಾದರಿಯಲ್ಲೇ..ದೇಶಕ್ಕೂ ಪ್ರಣಾಳಿಕೆ: ಯುವ ಜನತೆಗೆ 5,000 ಕೋಟಿ ರೂ. ಸ್ಟಾರ್ಟಪ್ ಫಂಡ್!

ಟೋಕನ್ ವ್ಯವಸ್ಥೆ: 

ಸುಲಭವಾಗಿ ಖಾತೆ ತೆರೆಯಲು ಅನುಕೂಲವಾಗುವಂತೆ ಟೋಕನ್ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದರು. ಆದರೆ ಕೆಲವರು ಎರಡು ಮೂರು ಟೋಕನ್ ಪಡೆದು ಅದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆಧಾರ ಕಾರ್ಡ್ ಕೊನೆಯಸಂಖ್ಯೆಯನ್ನು ನಮೂದಿಸಿಟೋಕನ್ ಕೊಡುವ ವ್ಯವಸ್ಥೆ ಮಾಡಲಾಯಿತು ಎಂದು ತಿಳಿಸಿದರು.

ಐಪಿಬಿಪಿ ಖಾತೆಗಳನ್ನು ಯಾವುದೇ ಅಂಚೆ ಕಚೇರಿ ಅಥವಾ ಆನ್‌ಲೈನ್ ಮೂಲಕ ತೆರೆಯಬಹುದಾಗಿದೆ. ಅಂಚೆ ಕಚೇರಿ ಸಿಬ್ಬಂದಿ ಖಾತೆದಾರರ ಫಲಾನುಭವಿ ಮನೆಗೆ ಬಂದು ಆಧಾ‌ರ್ ದೃಢೀಕರಣ ಪಡೆಯಲು ಅವಕಾಶ ವಿದೆ. ಆದರೂ ಜನರು ಜಿಪಿಒ ಕಚೇರಿಗೆ ಬರತೊಡಗಿದ್ದಾರೆ, ಹೀಗಾಗಿ ಖಾತೆ ತೆರೆಯಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾ ಗಿದೆ. ಮಂಗಳವಾರ ಸಹ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

click me!