ಮಸ್ಕಿ ಪ್ರಚಾರಕ್ಕೆ ರೇಣುಕಾಚಾರ್ಯ ಆಗಮಿಸಿದಾಗ ಅವಘಡ : ಮಹಿಳೆ ಬಚಾವ್

Kannadaprabha News   | Asianet News
Published : Apr 08, 2021, 08:19 AM ISTUpdated : Apr 08, 2021, 08:31 AM IST
ಮಸ್ಕಿ  ಪ್ರಚಾರಕ್ಕೆ ರೇಣುಕಾಚಾರ್ಯ ಆಗಮಿಸಿದಾಗ ಅವಘಡ : ಮಹಿಳೆ ಬಚಾವ್

ಸಾರಾಂಶ

ಮಸ್ಕಿ ಚುನಾವಣಾ ಕಣದಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಬಿಜೆಪಿ ಮುಖಂಡ ರೇಣುಕಾಚಾರ್ಯ ಇಲ್ಲಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಅವಘಡವೊಂದು ಸಂಭವಿಸಿತು. 

ರಾಯಚೂರು (ಏ.08): ಮಸ್ಕಿ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ ಪರ ಪ್ರಚಾರಕ್ಕಾಗಿ ಗ್ರಾಮಕ್ಕೆ ಆಗಮಿಸಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಆರತಿ ಎತ್ತಿ ಸ್ವಾಗತಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಜಡೆಗೆ ಬೆಂಕಿ ತಾಗಿದ ಘಟನೆ ಬುಧವಾರ ನಡೆಯಿತು. 

ಕಣ್ಣೂರು ಗ್ರಾಮಕ್ಕೆ ಆಗಮಿಸಿದ್ದ ರೇಣುಕಾಚಾರ್ಯ ಅವರಿಗೆ ಭರ್ಜರಿ ಸ್ವಾಗತ ನೀಡಲು ಗ್ರಾಮದ ಮಹಿಳೆಯರು, ಯುವಕರು ಮುಂದಾದರು. ಈ ವೇಳೆ ಕಳಸ ಹಿಡಿದು ಆರತಿ ಬೆಳಗಲು ಮುಂದಾದ ಮಹಿಳೆಯೊಬ್ಬರ ಜಡೆಗೆ ಹಿಂದೆ ನಿಂತಿದ್ದ ಮತ್ತೊಬ್ಬ ಮಹಿಳೆಯ ಕೈಯಲ್ಲಿದ್ದ ಕಳಸದ ದೀಪದಿಂದ ಬೆಂಕಿ ಹೊತ್ತಿದೆ. 

'ಯಾರೂ ರಾಜೀನಾಮೆ ಕೊಡಲ್ಲ, ನಾವೆಲ್ಲ ಒಂದಾಗಿ ಹೊರಟಿದ್ದೇವೆ' ..

ತಕ್ಷಣ ಅಲ್ಲಿ ನೆರೆದಿದ್ದ ಜನ ಕೈಯಿಂದ ಜಡೆಗೆ ಹತ್ತಿದ್ದ ಬೆಂಕಿ ನಂದಿಸಿದರು. ಅಲ್ಲಿ ಸೇರಿದ್ದ ಜನರ ಸಮಯಪ್ರಜ್ಞೆಯಿಂದ ಬೆಂಕಿ ಇಡೀ ಜಡೆಯನ್ನು ಆಹುತಿಪಡೆಯುವುದು ತಪ್ಪಿದಂತಾಯಿತು. ಆ ನಂತರ ಕಳಸದೊಂದಿಗೆ ಡೊಳ್ಳು ಬಾರಿಸುತ್ತಾ, ಪಟಾಕಿ ಸಿಡಿಸುತ್ತಾ ರೇಣುಕಾಚಾರ್ಯರನ್ನು ಗ್ರಾಮಸ್ಥರು ಸ್ವಾಗತ ಕೋರಿದರು.

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್