'ಅನಂತ್ ಕುಮಾರ್ ಹೆಗಡೆ ಪ್ರಧಾನಿಯೂ ತಲೆ ತಗ್ಗಿಸೋ ಕೆಲಸ ಮಾಡಿದ್ದರು'

Kannadaprabha News   | Asianet News
Published : Apr 08, 2021, 07:59 AM ISTUpdated : Apr 08, 2021, 08:15 AM IST
'ಅನಂತ್ ಕುಮಾರ್ ಹೆಗಡೆ ಪ್ರಧಾನಿಯೂ ತಲೆ ತಗ್ಗಿಸೋ ಕೆಲಸ ಮಾಡಿದ್ದರು'

ಸಾರಾಂಶ

ಅನಂತ್ ಕುಮಾರ್ ಹೆಗಡೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಹೇಳಿದ್ದೆ. ಬೇರಾವುದೇ ರೀತಿ ಮಾತನಾಡಿಲ್ಲವೆಂದು ಮಾಜಿ ಸಚಿವರು ಸ್ಪಷ್ಟನೆ ನೀಡಿದ್ದು  ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ

ಕಾರವಾರ (ಏ.08): 25 ವರ್ಷದಿಂದ ಅಧಿಕಾರದಲ್ಲಿದ್ದು, ಜಿಲ್ಲೆಯ ಅಭಿವೃದ್ಧಿ ಮಾಡದೇ ಇರುವುದರಿಂದ ಅನಂತಕುಮಾರ ಹೆಗಡೆ ಸಂಸದರಾಗಿ ಇದ್ದರೆಷ್ಟುಬಿಟ್ಟರೆಷ್ಟುಎಂದು ಹೇಳಿದ್ದೇನೆಂದು ಮಾಜಿ ಸಚಿವ ಆನಂದ ಅಸ್ನೋಟಿಕರ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ ಸಾಯಬೇಕು. ಸತ್ತರೆ ಒಳ್ಳೆಯದು ಎಂದು ತಾವು ಹೇಳಲಿಲ್ಲ. 

ಅನಂತಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ

ಬಿಜೆಪಿಗರು ತಪ್ಪಾಗಿ ಅರ್ಥೈಸಿದ್ದಾರೆ. ಈ ಹಿಂದೆ ಅನಂತಕುಮಾರ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಒಳಗೊಂಡು ಬಿಜೆಪಿಗರು ತಲೆತಗ್ಗಿಸುವ ಕೆಲಸವನ್ನು ಸಂಸದರು ಮಾಡಿಲ್ಲವೇ? ತಾನು ಬಿಜೆಪಿಯಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅನಂತಕುಮಾರ ರೀತಿ ಪಕ್ಷದ ಮಾನ, ಮರ್ಯಾದೆ ತೆಗೆಯುವ ಕೆಲಸ ಮಾಡಿಲ್ಲ ಎಂದರು.

PREV
click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!