ತಂಗಿ ಸಾವಿನ ಸುದ್ದಿ ಕೇಳಿ ಅಂತಿಮ ದರ್ಶನಕ್ಕೆ ಅಣ್ಣ ಪರದಾಟ

By Kannadaprabha NewsFirst Published Apr 8, 2021, 7:48 AM IST
Highlights

ರಾಜ್ಯದಲ್ಲಿ ನಡೆಯುತ್ತಿರುವ  ಬಸ್ ಮುಷ್ಕರ ಸಾಮಾನ್ಯ ಜನ ಜೀವನದ ಮೇಲೆ ಭಾರಿ ಪರಿಣಾಮ ಉಂಟು ಮಾಡಿದೆ. ಅನೇಕ ಪ್ರದೇಶಗಳಲ್ಲಿ ಜನರು ತಾವು ತಲುಪಬೇಕಾದ ಸ್ಥಳಕ್ಕೆ ತೆರಳಲಾಗದೆ ಪರದಾಡಿದರು.

 ಉಡು​ಪಿ (ಏ.08):  ಹುಬ್ಬಳ್ಳಿಯಲ್ಲಿ ಮೃತಪಟ್ಟತನ್ನ ತಂಗಿಯ ಅಂತಿಮ ದರ್ಶನಕ್ಕೆ ತೆರಳಲು ಬಸ್ಸಿಲ್ಲದೆ ಅಣ್ಣನೊಬ್ಬ ಸಂಕಷ್ಟಪಟ್ಟಘಟನೆ ಬುಧವಾರ ಉಡುಪಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಬಸವರಾಜು ಇಲ್ಲಿ ವಲಸೆ ಕಾರ್ಮಿಕನಾಗಿದ್ದು, ಮಂಗಳವಾರ ಆತನ ತಂಗಿ ಮೃತಪಟ್ಟಸುದ್ದಿ ಬಂದಿದೆ. ಸರ್ಕಾರಿ ಬಸ್‌ಗಳ ಮುಷ್ಕರದ ವಿಷಯ ಗೊತ್ತಿಲ್ಲದ ಆತ ಮುಂಜಾನೆ ಬಸ್‌ ನಿಲ್ದಾಣಕ್ಕೆ ಬಂದಾಗ ಬಸ್ಸಿಲ್ಲದೆ ಕಂಗಾಲಾದ, ಆ ಹೊತ್ತಿಗೆ ಹುಬ್ಬಳ್ಳಿಗೆ ಹೋಗುವ ಖಾಸಗಿ ಬಸ್ಸೂ ಇರಲಿಲ್ಲ. ಯಾರೋ ಟ್ಯಾಕ್ಸಿಯಲ್ಲಿ ಹೋಗುವಂತೆ ಸಲಹೆ ಮಾಡಿದರು.

ಬಸ್ ಮುಷ್ಕರ : ಸಾರಿಗೆ ನಿಗಮಗಳಿಗೆ 17 ಕೋಟಿ ರು. ನಷ್ಟ ...

ಆದರೆ ಟ್ಯಾಕ್ಸಿ ದರ ದರ ಕೇಳಿ ಕೂಲಿ ಕಾರ್ಮಿಕ ಬಸವರಾಜು ಇನ್ನೂ ಕಂಗಲಾದ. ಕಣ್ಣೀರು ತುಂಬಿಕೊಂಡು ಬಸ್‌ ನಿಲ್ದಾಣದಲ್ಲಿ ಅತ್ತಿತ್ತ ಓಡಾಡುತಿದ್ದ. ಆತನ ಪುಣ್ಯಕ್ಕೆ ಯಾರೋ ಟ್ಯಾಕ್ಸಿ ಮಾಡಿಕೊಂಡು ಹುಬ್ಬಳ್ಳಿಗೆ ಹೋಗುವವರು ಸಿಕ್ಕಿ, ಆತನನ್ನು ತಮ್ಮ ಜೊತೆ ಕರೆದುಕೊಂಡು ಹೋದರು.

click me!