ನಾಗಮಂಗಲ: ಕೊರೋನಾ ಧೃಡಪಟ್ಟ ಸುದ್ದಿ ಕೇಳಿ ಕಾಲುವೆಗೆ ಹಾರಿ ಮಹಿಳೆ ಆತ್ಮಹತ್ಯೆ

Suvarna News   | Asianet News
Published : Aug 07, 2020, 01:22 PM IST
ನಾಗಮಂಗಲ: ಕೊರೋನಾ ಧೃಡಪಟ್ಟ ಸುದ್ದಿ ಕೇಳಿ ಕಾಲುವೆಗೆ ಹಾರಿ ಮಹಿಳೆ ಆತ್ಮಹತ್ಯೆ

ಸಾರಾಂಶ

ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ| ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮದ ಬಳಿ ನಡೆದ ಘಟನೆ| ವೈದ್ಯರು ಕೊರೋನಾ ತಗುಲಿರುವ ತಿಳಿಸುತ್ತಿದ್ದಂತೆ ಮನೆಗೆ ಹೋಗದೆ ಹೇಮಾವತಿ ನಾಲೆಗೆ ಹಾರಿ ಪ್ರಾಣಬಿಟ್ಟ ಪದ್ಮಾವತಿ|

ಮಂಡ್ಯ(ಆ.07):  ಕೊರೋನಾ ಸೋಂಕು ಧೃಡಪಟ್ಟ ವಿಚಾರ ತಿಳಿಯುತ್ತಲೇ ಮಹಿಳೆಯೊಬ್ಬಳು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮದ ಬಸವನ ಗುಡಿ ಬಳಿ ಇಂದು(ಶುಕ್ರವಾರ) ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನ ನಾಗಮಂಗಲ ಪಟ್ಟಣದ TB ಬಡಾವಣೆ‌ ನಿವಾಸಿ ಪದ್ಮಾವತಿ(35) ಎಂದು ಗುರುತಿಲಾಗಿದೆ. ಮೃತ ಮಹಿಳೆ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದರು. ಕಳೆದ ಬುಧವಾರದಂದು ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು ಎಂದು ಹೇಳಲಾಗಿದೆ. 

ಹುಚ್ಚು ಪ್ರೀತಿಗೆ ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದ, ಮಂಡ್ಯದ ಮರ್ಡರ್ ಕಹಾನಿ

ತಮಗೆ ಕೊರೋನಾ ಪಾಸಿಟಿವ್ ಬಂದಿರುವ ವಿಚಾರ ವೈದ್ಯರು ದೃಢಪಡಿಸಿದ್ದರು. ವೈದ್ಯರು ಈ ವಿಚಾರ ತಿಳಿಸುತ್ತಿದ್ದಂತೆ ಪದ್ಮಾವತಿ ಮನೆಗೆ ಹೋಗದೆ ಬೋಗಾದಿ ಗ್ರಾಮದ ಬಸವನ ಗುಡಿ ಬಳಿಯ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
 

PREV
click me!

Recommended Stories

ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು