ಹಾವೇರಿ: ಕರಡಿಯೊಂದಿಗೆ ಸೆಣಸಾಡಿ ಗಂಡ, ಸಹೋದರನ ಪ್ರಾಣ ರಕ್ಷಿಸಿ ವೀರವನಿತೆಯಾದ ಸಬೀನಾ..!

By Girish Goudar  |  First Published Jun 27, 2023, 10:34 AM IST

ಗಂಡ ಹಾಗೂ ಸಹೋದರನ ಪ್ರಾಣ ಉಳಿಸಲು ಕರಡಿಯನ್ನೇ ಹೊಡೆದು ಕೊಂದ ಮಹಿಳೆ, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ನಡೆದ ಘಟನೆ.  


ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ 

ಹಾವೇರಿ(ಜೂ.27):  ಅವರೆಲ್ಲಾ ಕೃಷಿ ಕೆಲಸಕ್ಕೆ ಅಂತಾ ಜಮೀನಿಗೆ ಹೋಗಿದ್ದರು. ಕೃಷಿ ಕೆಲಸ ಮಾಡುವ ವೇಳೆ ಏಕಾಏಕಿ ರೈತರ ಮೇಲೆ ಕರಡಿ ದಾಳಿ ನಡೆಸಿ, ಗಾಯಗೊಳಿಸಿದೆ. ಅದರೆ, ಕರಡಿ ದಾಳಿಯ ವೇಳೆ ಪತ್ನಿಯೇ ಕರಡಿಯನ್ನ ಮಚ್ಚಿನಿಂದ ಹೊಡೆದು ಓಡಿಸಿ, ಪತಿ ಹಾಗೂ ಸಹೋದರ ಜೀವವನ್ನ ಕಾಪಾಡಿದ್ದಾಳೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ 

Tap to resize

Latest Videos

ಮಚ್ಚಿನಿಂದ ಏಟು ತಿಂದ ಕರಡಿ ಸಾವನ್ನಪ್ಪಿದೆ. ಕರಡಿಯಿಂದ ಪತಿಯನ್ನ ಕಾಪಾಡಿದ ವೀರವನಿತೆ ಇವರು.  ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸೀರಸಾಬ್ ರಜಾಕ್ ಮತ್ತು ಸಬೀನಾ ಕೃಷಿ ಕೆಲಸ‌ ಮಾಡಲು ಜಮೀನಿಗೆ ಹೋಗಿದ್ದರು. ಅದರೆ ಕೆಲಸ ಮಾಡುತ್ತಿದ್ದ ವೇಳೆ ಕರಡಿ ಏಕಾಏಕಿ ದಾಳಿ ನಡೆದಿದೆ. ಬಸೀರಸಾಬ್ ಮತ್ತು ರಜಾಕ್ ಇಬ್ಬರಿಗೂ ಕೈ- ಕಾಲು ಸೇರಿದಂತೆ ಮುಖಕ್ಕೆ ಎರಚಿ ಗಾಯಗೊಳಿಸಿದೆ. ಅದರೆ ಬಸೀರಸಾಬ್‌ನ‌ ಪತ್ನಿ ಸಬೀನಾ ದಿಟ್ಟತನದಿಂದ ಕರಡಿಗೆ ಮಚ್ಚಿನಿಂದ ಮೂರು ಸಲ ಹೊಡೆದು ಓಡಿಸಿದ್ದಾಳೆ. ಕೂಡಲೇ ಗಾಯಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಸಬೀನಾ ಕರಡಿಯೊಂದಿಗೆ ಸೆಣಸಾಡಿ ಪತಿ ಹಾಗೂ ಸಹೋದರನ್ನ ಜೀವವನ್ನ ರಕ್ಷಣೆ ಮಾಡಿದ್ದಾಳೆ.

Horticulture crop : ತೋಟಗಾರಿಕೆ ಬೆಳೆ ಹವಾಮಾನ ಆಧಾರಿತ ವಿಮೆಯಿಂದ ವಂಚಿತ

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಕರಡಿ ಹಾಗೂ ಕರಡಿ ಮರಿಯೊಂದಿಗೆ ಆಗಮಿಸಿದ್ದವು. ಅದರೆ ಕರಡಿಯ ಮರಿಗಳು ಓಡಿಹೋಗಿವೆ. ಮಚ್ಚಿನಿಂದ ಏಟು ತಿಂದ ಕರಡಿ ಬೇರೆ ಜಮೀನಿಗೆ ಹೋಗಿ ಪ್ರಾಣ ಬಿಟ್ಟಿದೆ. ಸಬೀನಾ ಪತಿ ಬಸೀರಸಾಬ್ ಮತ್ತು ರಜಾಕ್ ಪ್ರಾಣ ಕಾಪಾಡಿದ್ದಾಳೆ. ಅವಳಿಗೂ ಸಹ ಸಣ್ಣಪುಟ್ಟ ಗಾಯಗಳಾಗಿವೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ. ಕರಡಿ ಜೊತೆಗೆ ಹೋರಾಡಿ ಗಂಡ ಮತ್ತು ಸಹೋದರ ಜೀವ ಕಾಪಾಡಿದ ಮಹಿಳೆಗೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಡುಪ್ರಾಣಿಗಳು ಅಂದರೆ ಎಲ್ಲರಿಗೂ ಜೀವಭಯ ಇರುತ್ತೇ. ಆದರೆ ದಿಟ್ಟತನದಿಂದ ಕರಡಿಯ ಜೊತೆಗೆ ಹೋರಾಡಿ ಪತಿ ಮತ್ತು ಸಹೋದರ ಜೀವನ್ನ ರಕ್ಷಣೆ ಮಾಡಿದ ಮಹಿಳೆಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

click me!