ಆಸ್ಪತ್ರೆ ಮುಂಭಾಗ ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಹೆರಿಗೆ ಮಾಡಿಸಿಕೊಂಡು ತಾಯಿ ಹಾಗೂ ಮಗುವಿನ ಪ್ರಾಣ ರಕ್ಷಿಸಿದ ತಾಲೂಕು ವೈದ್ಯಾಧಿಕಾರಿ ಡಾ.ದೇವರಾಜ್.
ಚಿಕ್ಕಮಗಳೂರು(ಜೂ.27): ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲೊಂದು ಮನಕಲಕುವ ಘಟನೆ ನಡೆದಿದೆ. ಹೌದು, ಆಸ್ಪತ್ರೆ ಮುಂಭಾಗ ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ತಾಲೂಕು ವೈದ್ಯಾಧಿಕಾರಿ ಡಾ.ದೇವರಾಜ್ ಅವರು ಹೆರಿಗೆ ಮಾಡಿಸಿಕೊಂಡು ತಾಯಿ ಹಾಗೂ ಮಗುವಿನ ಪ್ರಾಣ ರಕ್ಷಿಸಿದ್ದಾರೆ.
ಅಜ್ಜಂಪುರ ತಾಲೂಕಿನ ಗಡಿರಂಗಾಪುರದ ತುಂಬು ಗರ್ಭಿಣಿ ಮಹಿಳೆ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗುತ್ತಿದ್ದಳು. ಬಿ ನೆಗೆಟೀವ್ ರಕ್ತಕ್ಕಾಗಿ ಮಹಿಳೆ ಶಿವಮೊಗ್ಗಕ್ಕೆ ಹೋಗುತ್ತಿದ್ದರು. 3 ತಿಂಗಳು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ 30 ಸಾವಿರ ಕೇಳಿದರು ಎಂದು ಶಿವಮೊಗ್ಗಕ್ಕೆ ಹೋಗಲು ಮಹಿಳೆ ನಿರ್ಧರಿಸಿದ್ದರು.
undefined
ಅಭಿಮಾನಿಗಳ ಜತೆ ಕುಣಿದು ಕುಪ್ಪಳಿಸಿದ ವೈಎಸ್‌ವಿ ದತ್ತ: ಡಾ.ರಾಜ್ ಹಾಡಿಗೆ ನೃತ್ಯ
ತರೀಕೆರೆಯಲ್ಲಿ ಬಸ್ಸಿಗಾಗಿ ಕಾಯುವಾಗ ಗರ್ಭಿಣಿ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತರೀಕೆರೆ ಸರ್ಕಾರಿ ಆಸ್ಪತ್ರೆ ಬಾಗಿಲು ಮುಂದೆ ಗರ್ಭಿಣಿ ಮಹಿಳೆ ನೋವಿನಿಂದ ನರಳಾಡುತ್ತಿದ್ದರು. ರಸ್ತೆ ಬದಿ ಇದ್ದ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಡಾ.ದೇವರಾಜ್ ಅವರು ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯನಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.