ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಸಾವು : ಮಹಿಳೆಯಿಂದ ಗಂಭೀರ ಆರೋಪ

Suvarna News   | Asianet News
Published : Apr 25, 2021, 04:13 PM IST
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಸಾವು : ಮಹಿಳೆಯಿಂದ ಗಂಭೀರ ಆರೋಪ

ಸಾರಾಂಶ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ   ಸೋಂಕಿತ ವ್ಯಕ್ತಿ ಇಂದು ಮೃತಪಟ್ಟಿದ್ದು, ಆಸ್ಪತ್ರೆ ವಿರುದ್ಧ  ಮೃತರ ಪತ್ನಿ  ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರಿ ವೈದ್ಯರು ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಕೈ ಕಾಲು ಕಟ್ಟಿಹಾಕಿದ್ದರು. ಚಿಕಿತ್ಸೆ ನೀಡಲು ಹೀಗೆ ಮಾಡಿದ್ದಾಗಿ ಹೇಳಿದ್ದರೆಂದಿದ್ದಾರೆ.

ಬೆಂಗಳೂರು (ಏ.25):    ನನ್ನ ಗಂಡನಿಗೆ ಕೈ ಕಾಲು ಕಟ್ಟಿ ಹಾಕಿ ಟ್ರೀಟ್ಮೆಂಟ್ ಕೊಟ್ಟಿದ್ರು ಸಾರ್ ಎಂದು ಮಹಿಳೆಯೋರ್ವರು ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುರೇಶ್ (41) ಎಂಬ ಸೋಂಕಿತ ವ್ಯಕ್ತಿ ಇಂದು ಮೃತಪಟ್ಟಿದ್ದು, ಆಸ್ಪತ್ರೆ ವಿರುದ್ಧ  ಮೃತರ ಪತ್ನಿ   ಆರೋಪ ಮಾಡಿದ್ದಾರೆ. ಸರ್ಕಾರಿ ವೈದ್ಯರು ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಕೈ ಕಾಲು ಕಟ್ಟಿಹಾಕಿದ್ದರು. ಚಿಕಿತ್ಸೆ ನೀಡಲು ಹೀಗೆ ಮಾಡಿದ್ದಾಗಿ ಹೇಳಿದ್ದರೆಂದಿದ್ದಾರೆ.

ಆಸ್ಪತ್ರೆಗಳಿಂದಲೇ ಕೊರೋನಾ ಸ್ಪ್ರೆಡ್‌, ಜನರ ಜೀವಕ್ಕೆ ಸಂಚಕಾರ..! .

ಕೊರೋನಾ ಪಾಸಿಟಿವ್ ಬಂದ ಕಾರಣ ಮಹಿಳೆ ತನ್ನ ಗಂಡನನ್ನು  ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿದ್ದು, ಇಲ್ಲಿನ ವೈದ್ಯರೇ ನನ್ನ ಗಂಡನ ಸಾವಿಗೆ ಕಾರಣ ಎಂದು ಹೇಳಿದ್ದಾರೆ. 
ಅಲ್ಲಿ ಯಾವ ರೀತಿ ಚಿಕಿತ್ಸೆ ಕೊಡುತ್ತಿದ್ದರು ಎನ್ನುವ ಮಾಹಿತಿಯೇ ಇಲ್ಲ. ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಪಾಸಿಟಿವ್ ಅಂತ ರಿಪೋರ್ಟ್ ಕೊಟ್ಟಿದ್ದರು.  ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗಲೇ ಅಂತ ವಿಕ್ಟೋರಿಯಾಗೆ ಹೋದೆವು. ಮೂರು ದಿನ ಆದಮೇಲೆ ಇಲ್ಲಿ ಬೆಡ್ ಸಿಕ್ಕಿದ್ದರೂ ಪ್ರಯೋಜನವಾಗಿಲ್ಲ ಎಂದು ಮಹಿಳೆ ದೂರಿದ್ದಾರೆ. 

 ಇಲ್ಲಿ ಯಾವುದೇ ರೀತಿಯ ಚಿಕಿತ್ಸೆ ಕೊಟ್ಟಿಲ್ಲ.  ನನ್ನ ಗಂಡನ ಬಳಿ ಸ್ಮಾರ್ಟ್ ಫೋನ್ ಅಲೋ ಮಾಡಲಿಲ್ಲ.  ಓನ್ಲಿ ಕೀ ಪ್ಯಾಡ್ ಅಂತ ಮಾತ್ರ ಅಲೌ ಮಾಡಿದ್ದರು. ಅವರಿಗೆ ಸ್ವಲ್ಪ ಉಸಿರಾಟದ ತೊಂದರೆ ಜೊತೆಗೆ ಬಾಯಿ ಅಲ್ಸರ್ ಆಗಿತ್ತು. ಮಾತನಾಡಲು ಆಗುತ್ತಿರಲಿಲ್ಲ. ನನ್ನ ಗಂಡನ ಸಾವಿಗೇ ಆಸ್ಪತ್ರೆಯವರೇ ಕಾರಣ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ. 
 
ಪತಿ ಮೃತಪಟ್ಟಿದ್ದು,  ಇಬ್ಬರು ಮಕ್ಕಳ ಬದುಕಿಗೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

PREV
click me!

Recommended Stories

ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!