ಬೇಲಿಯೆ ಎದ್ದು ಹೊಲ ಮೇದಂತೆ : ಪೊಲೀಸ್ ಟ್ರೈನಿಗಳಿಂದ ರೂಲ್ಸ್ ಬ್ರೇಕ್

Suvarna News   | Asianet News
Published : Apr 25, 2021, 02:54 PM IST
ಬೇಲಿಯೆ ಎದ್ದು ಹೊಲ ಮೇದಂತೆ : ಪೊಲೀಸ್ ಟ್ರೈನಿಗಳಿಂದ ರೂಲ್ಸ್ ಬ್ರೇಕ್

ಸಾರಾಂಶ

ಕೋಲಾರ ಪೊಲೀಸ್‌ ಟ್ರೈನಿಗಳೇ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ ಘಟನೆ ನಡೆದಿದೆ. ಸಾಮಾಜಿಕ ಅಂತರವೂ ಇಲ್ಲದೇ, ಮಾಸ್ಕನ್ನೂ ಧರಿಸದೇ ಕ್ರಿಕೆಟ್ ಆಯೋಜನೆ ಮಾಡಿದ್ದಾರೆ. 

ಕೋಲಾರ (ಏ.25) : ಕೋಲಾರದಲ್ಲಿ ಪೊಲೀಸ್ ಆಗಬೇಕಿರುವ ಟ್ರೈನಿ ಯುವಕರು ಕೊರೋನಾ  ರೂಲ್ಸ್ ಬ್ರೇಕ್ ಮಾಡಿರುವ ಘಟನೆ  ನಡೆದಿದೆ.  

ಕೊರೋನಾ ವೀಕೆಂಡ್ ಕರ್ಫ್ಯೂ ಇದ್ದರೂ ಡೋಂಟ್ ಕೇರ್ ಎಂದಿರುವ ಪೊಲೀಸ್ ಟ್ರೈನಿಗಳು ನಗರದ ಕವಾಯತು ಮೈದಾನದಲ್ಲಿಂದು ಕ್ರಿಕೆಟ್ ಆಡುತ್ತಾ ಎಂಜಾಯ್ ಮಾಡಿದ್ದಾರೆ. 

ಪೊಲೀಸ್ ಟ್ರೈನಿಂಗ್ ನಲ್ಲಿರುವ ಯುವಕರು ಕ್ರಿಕೆಟ್ ಆಯೋಜನೆ ಮಾಡಿ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವಿಲ್ಲದೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. 

ಹಿರಿಯೂರು: ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ, ನಾಲ್ವರ ಬಂಧನ .

ಎಸ್ಪಿ ಮನೆಯ ಎದರುಗಡೆಯಲ್ಲೇ  50 ಕ್ಕೂ ಹೆಚ್ಚು ಟ್ರೈನಿಗಳು ಮೈದಾನದಲ್ಲಿ ಸೇರಿ ಕ್ರಿಕೆಟ್ ಆಡಿದ್ದಾರೆ. ಜನಸಾಮಾನ್ಯರ ಅನವಶ್ಯಕ ಓಡಾಟಕ್ಕೆ ಫೈನ್ ಹಾಕುತ್ತಿದ್ದರೆ ಇತ್ತ ನಾಳೆ ದಿನ ಪೊಲೀಸ್ ಆಗಿ ಕಾನೂನು ಕಾಯಬೇಕಿದ್ದವರೆ ರೂಲ್ಸ್ ಬ್ರೇಕ್ ಮಾಡಿದ್ದು, ಬೇಲಿಯೇ ಎದ್ದು ಹೊಲ ಮೇದಂತಾಗಿದೆ. 

ಮಾಧ್ಯಮದವರನ್ನು ಕಂಡ ಬಳಿಕ ಇಲ್ಲಿ ಆಡಲು ಸೇರಿದ್ದ ಪೊಲೀಸ್ ಟ್ರೈನಿ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.  ಜನಸಾಮಾನ್ಯರಿಗೊಂದು ಕಾನೂನು, ಪೊಲೀಸರಿಗೆ ಇನ್ನೊಂದು ಕಾನೂನಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ