ಬೇಕಾಬಿಟ್ಟಿ ನೆಟ್ಟ ಗಿಡದಿಂದ ವಾರಕ್ಕೆ 2000 ರು. ಆದಾಯ

By Web Desk  |  First Published Sep 10, 2019, 10:30 AM IST

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳದ ಸಮೀಪ ದಾರಿಹೋಕರನ್ನು ನಳ ನಳಿಸುವ ಕೆಂಪು ವೆಲ್ವೆಟ್‌ ಹೂಗಳು ಸ್ವಾಗತಿಸುತ್ತವೆ. ವೆಲ್ವೆಟ್‌ನಂಥ ಮೃದುವಾದ ದಳಗಳ ಈ ಹೂಗಳಿಗೆ ಹಬ್ಬ ಹರಿದಿನಗಳ ಸಂದರ್ಭ ವಿಶೇಷ ಬೇಡಿಕೆ ಇದೆ. ಇದು ಪಾಲಯ್ಯ ಎಂಬುವವರ ಜಮೀನು. ಅವರು ವೆಲ್ವೆಟ್‌ ಹೂ ಕೃಷಿಗಿಳಿದದ್ದು ಆಕಸ್ಮಿಕವಾಗಿ, ಅಷ್ಟೇ ಅಸಡ್ಡೆಯಿಂದ. ಆದರೆ ಇಂದು ಅದೇ ಕೃಷಿ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ. ಇವರ ಕೊಳವೆ ಬಾವಿಯಲ್ಲಿ ಅರ್ಧ ಇಂಚಿನಷ್ಟುನೀರಿದೆ. ಅದರಲ್ಲೇ ವೆಲ್ವೆಟ್‌ ಹೂವಿನ ಕೃಷಿಯೂ ಸೇರಿದಂತೆ ಮಿಶ್ರ ಬೆಳೆ ಬೆಳೆದು ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ.


ಚಳ್ಳಕೆರೆ ವೀರೇಶ್‌

ಬಿಸಾಕಿದ ಬೀಜ ಮುಗುಳ್ನಕ್ಕಿತು!

Latest Videos

undefined

ಕೆಲವು ವರ್ಷಗಳ ಹಿಂದಿನ ಕತೆ ಇದು. ಮಳೆಯ ಕೊರತೆ, ಬೆಲೆಯ ಏರಿಳಿತ, ಕೃಷಿಗೆ ಬೇಕಾಗುವಷ್ಟುನೀರಿಲ್ಲ, ಬೆಳೆಗೆ ಸೂಕ್ತ ಬೆಲೆ ಸಿಕ್ಕಿಲ್ಲ ಹೀಗೆ ಹಲವಾರು ಸಮಸ್ಯೆಯ ಸುಳಿಗೆ ಸಿಕ್ಕಿದ್ದರು ಪಾಲಯ್ಯ. ಯಾಕೋ ಕೃಷಿಯೇ ಬೇಡಪ್ಪ ಅನಿಸತೊಡಗಿತ್ತು. ಆ ಹೊತ್ತಿಗೆ ಸಂಬಂಧಿಯೊಬ್ಬರು ಬಂದು ವೆಲ್ವೆಟ್‌ ಹೂವಿನ ಬೀಜ ನೀಡಿ ಬೆಳೆಯುವಂತೆ ಪ್ರೋತ್ಸಾಹಿಸಿದರು. ಆದರೆ ಅಷ್ಟೊತ್ತಿಗಾಗಲೇ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದ ಈ ರೈತ ನಿರಾಸಕ್ತಿಯಿಂದಲೇ ಹೊಲದಲ್ಲಿ ಬೇಕಾಬಿಟ್ಟಿಈ ಹೂವಿನ ಬೀಜ ಚೆಲ್ಲಿದರು. ಆಗ ಈ ಬೀಜ ಗಿಡವಾಗಿ ಹೂ ನೀಡಿ ಕೈ ಹಿಡಿಯಬಹುದು ಎಂಬ ಸಣ್ಣ ಭರವಸೆಯೂ ಇರಲಿಲ್ಲ.

ಶ್ರೀಗಂಧ ಬೀಜ ಮಾರಿದ್ರೆ ಎಕ್ರೆಗೆ ಎರಡು ಲಕ್ಷ ಆದಾಯ!

ತರಕಾರಿಗೆ ನೀರು ಹಾಯಿಸುವಾಗ ಅ ಗಿಡಗಳಿಗೂ ನೀರು ಹೋಗಿ 5 ದಿನಗಳಲ್ಲಿ ಮೊಳಕೆ ಬಿಡಲಾರಂಭಿಸಿತು. ಎಂದಿನಂತೆ ಔಷಧಿ, ಗೊಬ್ಬರ ತರಕಾರಿಗೆ ನೀಡಿದಾಗಿ ಅವುಗಳಿಗೂ ಸೇರುತ್ತಿತ್ತು. ಒಂದು ತಿಂಗಳಲ್ಲೇ ಗಿಡಗಳಲ್ಲಿ ಕೆಂಪನೆಯ ಗುಚ್ಚುಗುಚ್ಚು ಹೂವಿನ ಮೊಗ್ಗುಗಳು ಕಾಣಿಸಿಕೊಂಡವು. ನಿರ್ಲಕ್ಷತೆಯಿಂದಲೇ ಅವುಗಳನ್ನು ಕಿತ್ತು ಮಾರುಕಟ್ಟೆಗೆ ಮಾರಾಟ ಮಾಡಲಾಯಿತು. ಮೊದಲ ಬಾರಿಗೆ ಯಾವುದೇ ಬೆಲೆ ಸಿಗದೆ ನಿರಾಸಕ್ತಿ ಉಂಟು ಮಾಡಿದ ವೆಲ್‌ವೇಟ್‌ ಹೂಗಳು ಕ್ರಮೇಣ ಲಾಭ ತರಲಾರಂಭಿಸಿದವು.

ಈಗ ಒಂದು ಗಿಡ ನಾಲ್ಕೈದು ಕೆ.ಜಿ ಹೂಗಳನ್ನು ಬಿಡುತ್ತಿವೆ. ಈಗಾಗಲೇ ವಾರಕ್ಕೆ ಸುಮಾರು 20 ರಿಂದ 30 ಮಾರುಗಳಷ್ಟುವೆಲ್ವೆಟ್‌ ಹೂವು ಚಿತ್ರದುರ್ಗ, ಚಳ್ಳಕೆರೆ ಮಾರುಕಟ್ಟೆಯಲ್ಲಿ 50 ರಿಂದ 70 ರೂಪಾಯಿಯವರೆಗೂ ಮಾರಾಟವಾಗಿವೆ. ಬೇಕಾಬಿಟ್ಟಿಯಾಗಿ ನೆಟ್ಟಗಿಡಗಳು ಇಂದು ವಾರಕ್ಕೆ 2000ರು. ಆದಾಯ ತರುತ್ತಿರುವುದು ವಿಶೇಷ. ಹಬ್ಬ ಹರಿದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭವಿದೆ ಎಂದು ನುಡಿಯುತ್ತಾರೆ ಪಾಲಯ್ಯನ ಮಗಳು ಪಾಲಮ್ಮ.

ಅಡಿಕೆ ಮರ ಏರಲು ಬಂತು ಹೈಟೆಕ್ ಯಂತ್ರ, ಭಟ್ಟರ ಸಂಶೋಧನೆಗೆ ಮಹೀಂದ್ರಾ ಮೆಚ್ಚುಗೆ

ಲಾಭದಾಯ ಹೇಗೆ?

ಈ ವೆಲ್‌ವೇಟ್‌ ಗಿಡವು ಒಮ್ಮೆ ನಾಡಿ ಮಾಡಿದರೆ ಸಾಕು ತಮ್ಮ ಅದೇ ಬೀಜಗಳನ್ನು ಬೀಳಿಸಿ ಗಿಡವಾಗುತ್ತದೆ. ಹೂವಿನ ಕೆಳ ಭಾಗದಲ್ಲಿ ಬೀಜಗಳು ಸಾವಿರಾರು ಇರುತ್ತವೆ. ಹೂ ಬಿಡಿಸುವಾಗ ಕೆಳಗೆ ಬಿದ್ದು ಮತ್ತೇ ಬೆಳೆದುಕೊಂಡು ಹೂ ಬಿಡಲಾರಂಭಿಸುತ್ತವೆ. ಹೀಗಾಗಿ ಯಾವುದೇ ಖರ್ಚು ಇಲ್ಲದ ಬೆಳೆಯಾಗಿದೆ. ಕೆಂಪು ವರ್ಣದ ಈ ಹೂವನ್ನು ಸುಗಂಧರಾಜ್‌ ಹೂವಿನ ಹಾರದ ಜೊತೆಗೆ ಮಾರುಗಟ್ಟಲೆ ಕಟ್ಟಿಮಾರಾಟ ಮಾಡುತ್ತಾರೆ. ರೈತರ ಸಂಪರ್ಕಕ್ಕೆ ಮೊ: 8861285619 (ಬೋರಯ್ಯ, ಪಾಲಯ್ಯ ಅವರ ಮೊಮ್ಮಗ)

click me!