ಆರೋಗ್ಯ ಸಚಿವರ ತವರಲ್ಲೇ ಅವ್ಯವಸ್ಥೆ : ಬಡರೋಗಿಗಳ ಪರದಾಟ

Published : Sep 10, 2019, 10:25 AM IST
ಆರೋಗ್ಯ ಸಚಿವರ ತವರಲ್ಲೇ ಅವ್ಯವಸ್ಥೆ : ಬಡರೋಗಿಗಳ ಪರದಾಟ

ಸಾರಾಂಶ

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಎರಡು ತುರ್ತು ವಾಹನಗಳಿದ್ದು ಇದರಿಂದ ಜಿಲ್ಲೆಯ ಬಡರೋಗಿಗಳ ಗೋಳು ಕೇಳುವವರಿಲ್ಲದಂತಾಗಿದೆ.

ಚಿತ್ರದುರ್ಗ (ಸೆ.10) :  ಆರೋಗ್ಯ ಸಚಿವ‌ರ ತವರು ಜಿಲ್ಲೆಯಲ್ಲಿಯೇ ಅಂಬ್ಯುಲೆನ್ಸ್ ಗಾಗಿ ರೋಗಿಗಳು ಪರದಾಡುತ್ತಿದ್ದಾರೆ. 

ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆ ಯಲ್ಲಿ ಕೇವಲ ಎರಡು ಅಂಬ್ಯುಲೆನ್ಸ್ ಗಳಿದ್ದು, ಇದರಿಂದ ಇಲ್ಲಿನ ಜನರು  ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. 

ಇನ್ನು 17 ಆ್ಯಂಬುಲೆನ್ಸ್ ಗಳು  ರಿಪೇರಿಗೆ ಎಂದು ಮೂಲೇ ಸೇರಿ ತುಕ್ಕು ಹಿಡಿಯುತ್ತಿವೆ. ಹೀಗೆ ಮೂಲೆಯಲ್ಲಿ ನಿಲ್ಲಿಸಿರುವ ಹಾಳಾದ ಆ್ಯಂಬುಲೆನ್ಸ್ ಗಳು ಮದ್ಯ ವ್ಯಸನಿಗಳ ಅಕ್ರಮ ಚಟುವಟಿಕೆ ಕೇಂದ್ರವಾಗುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನೊಂದು ಕಡೆ ಗಂಭೀರ ಆರೋಪ ಒಂದು ಕೇಳಿ ಬರುತ್ತಿದ್ದು, ಆ್ಯಂಬ್ಯುಲೆನ್ಸ್ ಮಾಲಿಕರು  ಹಾಗೂ ಆರೋಗ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ.  ಆರೋಗ್ಯ ಸಚಿವರ ತವರಿನಲ್ಲಿಯೇ ಈ ರೀತಿ ಸಮಸ್ಯೆಯಾಗುತ್ತಿದ್ದು, ಬಡ ರೋಗಿಗಳು ಪರದಾಡುವಂತಾಗಿದೆ. 

ಕೇವಲ ಎರಡು ಆ್ಯಂಬುಲೆನ್ಸ್ ಗಳಿರುವ ಕಾರಣದಿಂದ  ಇಲ್ಲಿನ ಜನರು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ. 

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ