ಕೊಪ್ಪಳ: ಆಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ..!

By Suvarna NewsFirst Published May 29, 2021, 12:37 PM IST
Highlights

* ಮುನಿರಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್‌ 
* ತಾಯಿ, ಮಕ್ಕಳು ಹಿಟ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು
* ಸುರಕ್ಷಿತ ಹೆರಿಗೆ ಮಾಡಿಸಿದ 108 ಆಂಬುಲೆನ್ಸ್‌ ಸಿಬ್ಬಂದಿಗೆ ಕುಟುಂಬಸ್ಥರ ಅಭಿನಂದನೆ 
 

ಕೊಪ್ಪಳ(ಮೇ.29): 108 ಆಂಬುಲೆನ್ಸ್‌ನಲ್ಲೇ ಮಹಿಳೆಯೊಬ್ಬಳು ಅವಳಿ ಹೆಣ್ಣು ಮಕ್ಕಳಿಗೆ ಮಗುವಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

ಹುಲಿಗಿ ಗ್ರಾಮದ ನಿವಾಸಿ ಮಾರಿಯಮ್ಮ ಸುನಿಲ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮಹಿಳೆಯನ್ನ ಹಿಟ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು 108 ಆಂಬುಲೆನ್ಸ್‌ ಆಗಮಿಸಿತ್ತು. ಮಹಿಳೆಗೆ ಹೆರಿಗೆ ನೋವು ಹೆಚ್ಚಾದ ಪರಿಣಾಮ ರಾತ್ರಿ 10.15 ಸುಮಾರಿಗೆ ಶುಶ್ರೂಷಕ ಬಸವರಾಜ್ ಅವರು ಮಾರ್ಗ ಮಧ್ಯೆ ಆಂಬುಲೆನ್ಸ್‌ನಲ್ಲೇ ಮಹಿಳೆಗೆ ಸುರಕ್ಷಿತ ಮಾಡಿಸಿದ್ದಾರೆ.  

ಯಡಿಯೂರಪ್ಪ ಶ್ರಮದಿಂದಲೇ ರಾಜ್ಯದಲ್ಲಿ ಕೊರೋನಾ ಕಡಿಮೆ ಆಗ್ತಿದೆ: ದಢೇಸುಗೂರು 

ಈ ವೇಳೆ ಮಾರಿಯಮ್ಮ ಸುನಿಲ್ ಮುದ್ದಾದ ಅವಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ತಾಯಿ ಮಗುವನ್ನು ಹಿಟ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಿದ 108 ಆಂಬುಲೆನ್ಸ್‌ ಸಿಬ್ಬಂದಿಗಳಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. 
 

click me!