ಶಿವಮೊಗ್ಗ: ಮದುವೆಯಾಗಿ ಎರಡೇ ದಿನಕ್ಕೆ ವಧು ಕೋವಿಡ್‌ಗೆ ಬಲಿ

By Kannadaprabha News  |  First Published May 29, 2021, 11:28 AM IST

* ಮದುವೆಯಾಗಿ 2 ದಿನಕ್ಕೆ ಪೂಜಾಗೆ ಕಾಣಿಸಿಕೊಂಡಿದ್ದ ಮೈ ಕೈ ನೋವು
* ಖಾಸಗಿ ಕ್ಲಿನಿಕ್‌ಗೆ ದಾಖಲಿಸಿದ ಅರ್ಧ ಗಂಟೆಯಲ್ಲಿ ಪೂಜಾ ಸಾವು
* ಪರೀಕ್ಷೆ ನಡೆಸಿದಾಗ ಪೂಜಾ ದೇಹದಲ್ಲಿ ಕೊರೋನಾ ಸೋಂಕು ಪತ್ತೆ


ಶಿವಮೊಗ್ಗ(ಮೇ.29): ಮೂರು ದಿನಗಳ ಹಿಂದಷ್ಟೆ ಮದುವೆಯಾಗಿದ್ದ ಯುವತಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವ ದುರ್ಘಟನೆ ನಗರದ ಮಲವಗೊಪ್ಪದಲ್ಲಿ ನಡೆದಿದೆ. 

ಪೂಜಾ (24) ಅವರನ್ನು ಹರಿಗೆಯ ನಿವಾಸಿ ಮಹೇಶ್‌ (24) ಎಂಬವರ ಜೊತೆ ಸೋಮವಾರ ವಧುವಿನ ಮನೆಯಲ್ಲಿಯೇ ಮದುವೆ ಮಾಡಲಾಗಿತ್ತು. ಮದುವೆಯಾಗಿ 2 ದಿನಕ್ಕೆ ಅಂದರೆ ಬುಧವಾರ ಪೂಜಾ ಅವರಿಗೆ ಮೈ ಕೈ ನೋವು ಕಾಣಿಸಿತ್ತು. 

Tap to resize

Latest Videos

ಶಿವಮೊಗ್ಗ : ಪ್ರತಿ ತಾಲೂಕಿನಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಸಿದ್ಧ

ಅನಾರೋಗ್ಯ ಹೆಚ್ಚಾದಾಗ ಶುಕ್ರವಾರ ಖಾಸಗಿ ಕ್ಲಿನಿಕ್‌ವೊಂದಕ್ಕೆ ದಾಖಲಿಸಲಾಯಿತು. ಅರ್ಧ ಗಂಟೆಯಲ್ಲಿ ಪೂಜಾ ಕೊನೆ ಉಸಿಯುಸಿರೆಳೆದರು. ಬಳಿಕ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಪೂಜಾ ದೇಹದಲ್ಲಿ ಕೊರೋನಾ ಸೋಂಕು ಇದ್ದುದು ಪತ್ತೆಯಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!