ಚಿಕ್ಕಮಗಳೂರು: ‘ಸತ್ರೆ ಸಾಯ್ತಿವಿ ಹೋಗ್ರಿ’ ಎಂದ ಸೋಂಕಿತ ವ್ಯಕ್ತಿ

By Kannadaprabha NewsFirst Published May 29, 2021, 11:41 AM IST
Highlights

* ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಹೋಬಳಿಯ ನೆರಡಿ ಗ್ರಾಮದಲ್ಲಿ ನಡೆದ ಘಟನೆ
* ಸೋಂಕಿತ ವ್ಯಕ್ತಿ ತೋಟದಿಂದ ಮನೆಗೆ ಬರುವ ವೇಳೆ ಪ್ರಶ್ನಿಸಿದ ಸಿಬ್ಬಂದಿ
* ಸೋಂಕಿತ ವ್ಯಕ್ತಿಯ ವಿರುದ್ಧ ಆಲ್ದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಚಿಕ್ಕಮಗಳೂರು(ಮೇ.29): ‘ಸತ್ರೆ ಸಾಯ್ತಿವಿ ಹೋಗ್ರಿ, ಎಲ್ಲರಿಗೆ ಆಗೋ ಹಾಗೇ ನಮಗೂ ಆಗುತ್ತೆ..’ ಹೀಗಂತ ಕೋವಿಡ್‌ ಸೋಂಕಿತ ವ್ಯಕ್ತಿ ಕೋವಿಡ್‌ ಕಾರ್ಯ ಪಡೆ ಎದುರು ಹೇಳಿರುವ ಘಟನೆ ತಾಲೂಕಿನ ವಸ್ತಾರೆ ಹೋಬಳಿಯ ನೆರಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ನೆರಡಿ ಗ್ರಾಮಕ್ಕೆ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿದ್ದರು. ಕೋವಿಡ್‌ ಸೋಂಕಿನ ಲಕ್ಷಣ ಇರುವುದರಿಂದ ನೆರಡಿ ಗ್ರಾಮದ ವ್ಯಕ್ತಿಯೋರ್ವರ ಗಂಟಲ ಮತ್ತು ಮೂಗಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಚಿಕ್ಕಮಗಳೂರು : ಅವೈಜ್ಞಾನಿಕ ಲಾಕ್‌ಡೌನ್-ಜನರ ಆಕ್ರೋಶ

ಕಾರ್ಯಪಡೆಯ ತಂಡ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ಆ ವ್ಯಕ್ತಿ ತೋಟದಿಂದ ಮನೆಗೆ ಬರುವ ವೇಳೆ ಸಿಬ್ಬಂದಿ ಪ್ರಶ್ನಿಸಿದರು ಆಗ, ‘ತೋಟದಲ್ಲಿ ಕಳೆ ಕಿತ್ತು ಔಷಧಿ ಹೊಡೆಯಬೇಕಾಗಿದೆ, ಆ ಕೆಲಸಕ್ಕೆ ಹೋಗಿದ್ದೆ, ಹೋಗ್ರಿ ಸತ್ರೆ ಸಾಯ್ತಿವಿ’ ಎಂದು ಹೇಳಿದ್ದಾರೆ. ಈತನ ವಿರುದ್ಧ ಆಲ್ದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!