ಪ್ರಿಯತಮನ ಮರ್ಮಾಂಗ ಕತ್ತರಿಸಿದ್ದ ವೈದ್ಯೆಗೆ 10 ವರ್ಷ ಜೈಲು

By Suvarna NewsFirst Published Dec 17, 2019, 10:07 AM IST
Highlights

ವಂಚಿಸಿದ್ದ ಹಿನ್ನೆಲೆ ಪ್ರಿಯತಮನ ಮರ್ಮಾಂಗವನ್ನೇ ಕತ್ತರಿಸಿದ್ದ ಮಹಿಳೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವೈದ್ಯೆಯಾಗಿದ್ದ ಈಕೆಗೆ ದಂಡವನ್ನು ವಿಧಿಸಲಾಗಿದೆ. 

ಮೈಸೂರು [ಡಿ.17]: ಪ್ರಿಯತಮನ ಮರ್ಮಾಂಗ ಕತ್ತರಿಸಿದ್ದ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮೈಸೂರು ಸಿಟಿ ಸೆಷನ್ ಕೋರ್ಟ್ ಆದೇಶ ನೀಡಿದೆ. 

ಡೆಂಟಿಸ್ಟ್ ಆಗಿದ್ದ ಸೈಯಿದಾ ಅಮೀದಾ ನಹೀಂ ಎಂಬ ಬೆಂಗಳೂರು ಮೂಲದ ಮಹಿಳೆ 2008ರಲ್ಲಿ ತನ್ನ ಪ್ರಿಯತಮನನ್ನು ಆಸ್ಪತ್ರೆಗೆ ಕರೆತಂದು ಆತನಿಗೆ ಜ್ಯೂಸ್ ನಲ್ಲಿ ನಿದ್ದೆ ಮಾತ್ರೆ ಸೇರಿ ಕೊಟ್ಟಿದ್ದಳು. ಆತ ಪ್ರಜ್ಞೆ ತಪ್ಪುತ್ತಿದ್ದಂತೆ ಆತನ ಮರ್ಮಾಂಗ ಕತ್ತರಿಸಿದ್ದಳು. 

ಈ ಸಂಬಂಧ ಪ್ರಿಯಕರನಿಂದ ದಾಖಲಾದ ದೂರಿನ ಅನ್ವಯ 10 ವರ್ಷಗಳಿಂದ ನಡೆದ ವಿಚಾರಣೆ ಬಳಿಕ ಇದೀಗ ಮೈಸೂರು ಸೆಷನ್ ಕೋರ್ಟ್ ತೀರ್ಪು ಪ್ರಕಟಿಸಿದೆ. ಮಹಿಳೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ 2 ಲಕ್ಷ ರು. ದಂಡ ವಿಧಿಸಲಾಗಿದೆ. 

ಸೈಯಿದಾಗೆ ವಂಚಿಸಿದ್ದ ಕಾರಣದಿಂದ ಆಕೆ ಆಸ್ಪತ್ರೆಯಲ್ಲಿದ್ದ ಟೂಲ್ಸ್ ಗಳಿಂದ ಮರ್ಮಾಂಗ ಕತ್ತರಿಸಿ ಬಾತ್ರೂಮಿನ ಡ್ರೈನ್ ಗೆ ಹಾಕಿ ಫ್ಲಶ್ ಮಾಡಿದ್ದಳು. ಆತನಿಗೆ ಪ್ರಜ್ಞೆ ಮರುಕಳಿಸಿದ ಬಳಿಕ ತೀವ್ರ ರಕ್ತಸ್ರಾವ ಆಗುತ್ತಿದ್ದು, ಕಂಡು ಆಕೆಯೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಳು. 

ವಿದ್ಯಾರ್ಥಿನಿಯರ ಗುಪ್ತಾಂಗಕ್ಕೆ ಕೈ ಹಾಕಿ ಲೈಂಗಿಕ ಕಿರುಕುಳ..! ಸಿಕ್ಕಿಬಿದ್ದ ಕಾಮುಕ ಶಿಕ್ಷಕ...

ಈ ಘಟನೆಯ ಬಗ್ಗೆ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಪ್ರಿಯಕರ ದೂರು ದಾಖಲಿಸಿದ್ದು, ಬಳಿಕ ಕೋರ್ಟ್ ಮೆಟ್ಟಿಲೇರಿದ್ದ. ಕೇಸಿನ ಆಧಾರದಲ್ಲಿ ಇದೀಗ ಸೈಯಿದಾಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.

click me!