ವಿಶೇಷ ಮಕ್ಕಳೊಂದಿಗೆ ಎಚ್‌ಡಿಕೆ ಹುಟ್ಟುಹಬ್ಬ

Kannadaprabha News   | Asianet News
Published : Dec 17, 2019, 10:04 AM IST
ವಿಶೇಷ ಮಕ್ಕಳೊಂದಿಗೆ ಎಚ್‌ಡಿಕೆ ಹುಟ್ಟುಹಬ್ಬ

ಸಾರಾಂಶ

ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬವನ್ನು ಉಡುಪಿ ಜೆಡಿಎಸ್ ವತಿಯಿಂದ ಆಚರಿಸಲಾಯಿತು. ಉಡುಪಿ ಜಿಲ್ಲಾ ಜೆಡಿಎಸ್‌ ವತಿಯಿಂದ ಇಲ್ಲಿನ ಆಶಾನಿಲಯ - ವಿಶೇಷ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೇಕ್‌ ಕತ್ತರಿಸಿ ವಿಶೇಷ ಮಕ್ಕಳಿಗೆ ವಿತರಿಸಿ ಸಂಭ್ರಮಿಸಲಾಯಿತು.

ಉಡು​ಪಿ(ಡಿ.17): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ 60ನೇ ಹುಟ್ಟುಹಬ್ಬವನ್ನು ಸೋಮವಾರ ಉಡುಪಿ ಜಿಲ್ಲಾ ಜೆಡಿಎಸ್‌ ವತಿಯಿಂದ ಇಲ್ಲಿನ ಆಶಾನಿಲಯ - ವಿಶೇಷ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೇಕ್‌ ಕತ್ತರಿಸಿ ವಿಶೇಷ ಮಕ್ಕಳಿಗೆ ವಿತರಿಸಿ ಸಂಭ್ರಮಿಸಲಾಯಿತು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ವಿ.ಶೆಟ್ಟಿಮಾತ​ನಾ​ಡಿ, ಇಂದಿಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದಕ್ಕೆ, ಅವರ ಮನೆ ಮುಂದೆ ಮುಂಜಾನೆಯಿಂದಲೇ ಬಡವರು, ಅಶಕ್ತರು ಕಾಯುತ್ತಿರುತ್ತಾರೆ. ಇದು ಅವರು ರಾಜ್ಯದ ಅತ್ಯಂತ ಜನಪ್ರಿಯ ಮತ್ತು ಜನಪರ ಮುಖ್ಯಮಂತ್ರಿ ಎಂಬುದನ್ನು ತೋರಿಸುತ್ತದೆ. ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಬಡವರ ಆಶೆಆಕಾಂಕ್ಷೆಗಳನ್ನು ಈಡೇರಿಸುವಂತಾಗಬೇಕು ಎಂದಿದ್ದಾರೆ.

3 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ, ಇಂದಿರಾ ಕ್ಯಾಂಟೀನ್‌ಗೆ ಉದ್ಘಾಟನೆ ಭಾಗ್ಯ

ಪಕ್ಷದ ನಾಯಕರಾದ ವಾಸುದೇವ್‌ ರಾವ್‌, ಜಯಕುಮಾರ್‌ ಪರ್ಕಳ, ಗಂಗಾರ್ಧ ಬಿರ್ತಿ, ಬಿ.ಟಿ.ಮಂಜುನಾಥ್‌, ಇಕ್ಬಾಲ್‌ ಅತ್ರಾಡಿ, ಜಯರಾಮ ಆಚಾರ್ಯ, ಪ್ರದೀಪ್‌ ಜಿ., ಪ್ರಕಾಶ್‌ ಶೆಟ್ಟಿ, ರವಿರಾಜ್‌ ಸಾಲ್ಯಾನ್‌, ಹರಿಣಿ, ಅಬ್ದುಲ್‌ ರಝಾಕ್‌, ರಮೇಶ್‌ ಕುಂದಾಪುರ, ಶಂಶುದ್ದೀನ್‌ ಮಜೂರು, ರಂಗಾ ಕೋಟ್ಯಾನ್‌, ಉಮೇಶ್‌ ಮತ್ತಿ​ತರ ಮುಖಂಡರು ಭಾಗವಹಿಸಿದ್ದರು.

ಆಶಾನಿಲಯದ ವಿದ್ಯಾರ್ಥಿಗಳಿಗೆ, ಆಡಳಿತ ಮಂಡಳಿ ಮತ್ತು ಶಿಕ್ಷಕ ಸಿಬ್ಬಂದಿಗೆ ಪಕ್ಷದ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC