ಕೊರೋನಾ ತೊಲಗುವವರೆಗೂ ಬರಿಗಾಲಲ್ಲಿ ನಡೀತಾರಂತೆ ಬಸಮ್ಮ..!

By Kannadaprabha NewsFirst Published May 2, 2020, 7:53 AM IST
Highlights

ಇಲ್ಲೊಬ್ಬರು ಕೂಲಿ ಕಾರ್ಮಿಕ ಮಹಿಳೆ ಕೊರೋನಾ ಸೋಂಕು ದೇಶ ಬಿಟ್ಟೋಡುವ ತನಕ ಬರಿಗಾಲಲ್ಲಿ ನಡೆಯುವ ಹರಕೆ ಹೊತ್ತಿದ್ದಾರೆ. ಅಲ್ಲದೆ, ಶುಕ್ರವಾರ ದಿನಪೂರ್ತಿ ಉಪವಾಸದ ಹರಕೆಯನ್ನು ಕೂಡ ತುಳುನಾಡಿನ ದೈವದ ಎದುರು ಹೊತ್ತಿದ್ದಾರೆ.

ಮಂಗಳೂರು(ಮೇ.02): ಇಲ್ಲೊಬ್ಬರು ಕೂಲಿ ಕಾರ್ಮಿಕ ಮಹಿಳೆ ಕೊರೋನಾ ಸೋಂಕು ದೇಶ ಬಿಟ್ಟೋಡುವ ತನಕ ಬರಿಗಾಲಲ್ಲಿ ನಡೆಯುವ ಹರಕೆ ಹೊತ್ತಿದ್ದಾರೆ. ಅಲ್ಲದೆ, ಶುಕ್ರವಾರ ದಿನಪೂರ್ತಿ ಉಪವಾಸದ ಹರಕೆಯನ್ನು ಕೂಡ ತುಳುನಾಡಿನ ದೈವದ ಎದುರು ಹೊತ್ತಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿರುವ, ಬಾಗಲಕೋಟೆ ಮೂಲದ ಬಸಮ್ಮ ಈ ವಿಶಿಷ್ಟಹರಕೆ ಹೊತ್ತವರು.

ಬಸಮ್ಮ 3 ವರ್ಷಗಳ ಹಿಂದೆ ಊರು ಬಿಟ್ಟು ಪತಿಯೊಂದಿಗೆ ಮಂಗಳೂರಿಗೆ ಬಂದು ಕೂಲಿ ಮಾಡಿಕೊಂಡಿದ್ದರು. ಮದ್ಯ ವ್ಯಸನಿಯಾಗಿದ್ದ ಪತಿ ಮಕ್ಕಳು ಚಿಕ್ಕವರಿರುವಾಗಲೇ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಬಸಮ್ಮ ಇದ್ದ ಕೆಲಸವನ್ನೂ ಕಳೆದುಕೊಂಡರು.

ಮಂಗಳೂರಿನ ವಿವಿಧೆಡೆ ಗಾಳಿ-ಮಳೆ, ಅಪಾರ ಹಾನಿ

ಆಗ ತಾನು ಬಾಡಿಗೆ ಮನೆಯಲ್ಲಿದ್ದ ಮಂಗಳೂರಿನ ಕೂಳೂರು ಸಮೀಪದ ಗುಡ್ಡೆಯಂಗಡಿಯಲ್ಲಿರುವ ಕಲ್ಲುರ್ಟಿ ದೈವದ ಮೊರೆಹೋಗಿದ್ದರು. ಪವಾಡವೆಂಬಂತೆ ಮರುದಿನವೇ ಕೆಲಸಕ್ಕೆ ಆಗಮಿಸುವಂತೆ ಕರೆ ಬಂದಿತ್ತು.

ಆ ಬಳಿಕ ತನಗೆ ಏನೇ ಸಂಕಷ್ಟಬಂದೊದಗಿದರೂ ಇದೇ ಕಲ್ಲುರ್ಟಿ ದೈವಕ್ಕೆ ಹರಕೆ ಹೇಳುವ ಬಸಮ್ಮ, ಇದೀಗ ಕೊರೋನಾ ಸಂಕಷ್ಟಕಳೆಯಲು ಕಲ್ಲುರ್ಟಿ ದೈವದ ಹೆಸರಿನಲ್ಲಿಯೇ ಹರಕೆ ಹೊತ್ತಿದ್ದಾರೆ.

ಲಾಕ್‌ಡೌನ್‌ ಮಧ್ಯೆ ವೇತನ ಏರಿಕೆ: ಡಿಪ್ಲೋಮಾ ಕಾಲೇಜು ಬೋಧಕರಿಂದಲೇ ಅಸಮಾಧಾನ!

ತನ್ನ ಎಲ್ಲ ಸಂಕಷ್ಟವನ್ನು ಪರಿಹರಿಸಿರುವ ದೈವವೇ ಇದೀಗ ಕೊರೋನಾವನ್ನೂ ಮಣಿಸಲಿದೆ ಎನ್ನುತ್ತಾರೆ ಬಸಮ್ಮ. ಶುಕ್ರವಾರ ಪೂರ್ತಿ ಉಪವಾಸದಿಂದಿರುವ ಹರಕೆ ಹೊತ್ತಿದ್ದೇನೆ. ಸೋಂಕು ಪೂರ್ತಿ ಹೋಗುವವರೆಗೂ ಈ ಹರಕೆಯನ್ನು ನಿರಂತರವಾಗಿ ಪಾಲಿಸುತ್ತೇನೆ ಎಂದು ತಿಳಿಸಿದ್ದಾರೆ.

click me!