ಬಳ್ಳಾರಿ: ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಸಾವು, ಕಾರಣ..?

Kannadaprabha News   | Asianet News
Published : May 17, 2020, 09:51 AM ISTUpdated : May 18, 2020, 05:14 PM IST
ಬಳ್ಳಾರಿ: ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಸಾವು, ಕಾರಣ..?

ಸಾರಾಂಶ

ಬಳ್ಳಾರಿ ನಗರದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಮಹಿಳೆ ಸಾವು| ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಮಹಿಳೆ|, ಗಂಟಲುದ್ರವ ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗಿತ್ತು| ಸತತ ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥಳಾಗಿ ಮೃತಪಟ್ಟ ಮಹಿಳೆ|

ಬಳ್ಳಾರಿ(ಮೇ.17): ನಗರದಲ್ಲಿ ಕ್ವಾರಂಟೈನ್‌ನಲ್ಲಿದ್ದ 37 ವರ್ಷದ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಮಹಿಳೆ ಇಲ್ಲಿನ ವಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಪ್ರತಿ ವರ್ಷದಂತೆ ಈ ಬಾರಿಯೂ ಆಂಧ್ರಪ್ರದೇಶಕ್ಕೆ ವಲಸೆ ಹೋಗಿದ್ದಳು. ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಈ ಮಹಿಳೆ ಮರಳಿ ಜಿಲ್ಲೆಗೆ ಆಗಮಿಸುತ್ತಿದ್ದಂತೆಯೇ ಕ್ವಾರಂಟೈನ್‌ ಮಾಡಲಾಗಿತ್ತಲ್ಲದೆ, ಗಂಟಲುದ್ರವ ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗಿತ್ತು. ಏತನ್ಮಧ್ಯೆ ಸತತ ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥಳಾಗಿ ಮೃತಪಟ್ಟಿದ್ದಾಳೆ. 

ಕರ್ತವ್ಯ ನಿರ್ವಹಿಸುತ್ತಲೇ ಪ್ರಾಣಬಿಟ್ಟ ಕೊರೋನಾ ವಾರಿಯರ್ ಭೀಮಕ್ಕ..!

ಮೃತ ಮಹಿಳೆಯ ಗಂಟಲುದ್ರವ ಪರೀಕ್ಷೆ ವರದಿ ಬಂದಿಲ್ಲ. ಅನಾರೋಗ್ಯ ಹಿ​ನ್ನೆಲೆಯಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಗಂಟಲುದ್ರವ ಪರೀಕ್ಷೆ ವರದಿ ಬಳಿಕ ಈ ಮಹಿಳೆಗೆ ಸೋಂಕು ಹರಡಿತ್ತೇ? ಅಥವಾ ಇಲ್ಲವೇ? ಎಂಬುದು ಗೊತ್ತಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
 

PREV
click me!

Recommended Stories

ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!
ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!