ಕಾರಿನಲ್ಲಿ ಪತ್ತೆಯಾಯ್ತು ಕೊಳೆತು ಹೋದ ಮಹಿಳೆ ಶವ !

By Kannadaprabha News  |  First Published Jan 3, 2020, 11:30 AM IST

ಕೊಳೆತ ಸ್ಥಿತಿಯಲ್ಲಿ ಓಮ್ನಿ ಕಾರಿನ ಒಳಗೆ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ. ಹಲವು ದಿನಗಳಿಂದ ಪಾರ್ಕ್ ಮಾಡಿದ್ದ ಓಮ್ನಿಯಲ್ಲಿ ಮೃತದೇಹ ಸಿಕ್ಕಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಶಿವಮೊಗ್ಗ [ಜ.03]: ವಿದ್ಯಾನಗರದ ರೈಲ್ವೆ ನಿಲ್ದಾಣದಲ್ಲಿ ಪಾರ್ಕ್ ಮಾಡಿದ್ದ ಮಾರುತಿ ಓಮ್ನಿ ವಾಹನದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಈ ವಾಹನದಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಆಗಮಿಸಿ ವಾಹನದ ಬಾಗಿಲು ಒಡೆದು ನೋಡಿದಾಗ ಇದರಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಯಿತು.

Tap to resize

Latest Videos

ಡಿ. 22 ರಂದು ಈ ವಾಹನವನ್ನು ಇಲ್ಲಿ ಪಾರ್ಕ್ ಮಾಡಿ ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆ ಯಾರು ಎಂದು ಈವರೆಗೆ ಪತ್ತೆಯಾಗಿಲ್ಲ. ಮೃತ ಮಹಿಳೆ ಮುಸ್ಲಿಂ ಧರ್ಮಕ್ಕೆ ಸೇರಿರಬಹುದು ಎಂದು ಆಕೆ ಧರಿಸಿರುವ ಬಟ್ಟೆ​ಯಿಂದಾ​ಗಿ ಪೊಲೀಸರು ಅಂದಾಜಿಸಿದ್ದಾರೆ.

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...

ಈ ನಡುವೆ ಸೋಮಿನಕೊಪ್ಪದ ಅಬು ಎಂಬುವವರ ಪತ್ನಿ ಎರಡು ದಿನಗಳ ಹಿಂದೆ ತನ್ನ ಗಂಡ ಹಾಗೂ ಆತನ ಮಾರುತಿ ಓಮ್ನಿ ಕಾರು ನಾಪತ್ತೆಯಾಗಿದೆ ಎಂದು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರಿನ ಮಾಲೀಕ ಅಬು ಎಂದು ಗೊತ್ತಾಗಿದೆ. ಆದರೆ ಮಹಿಳೆಯ ಬಗ್ಗೆ ಇನ್ನೂ ಪೊಲೀಸರಿಗೆ ಮಾಹಿತಿ ಸಿಕ್ಕಿಲ್ಲ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

click me!