ಬೆಳಗಾವಿ: ಮಕ್ಕಳನ್ನ ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

Suvarna News   | Asianet News
Published : Jan 09, 2020, 12:28 PM IST
ಬೆಳಗಾವಿ: ಮಕ್ಕಳನ್ನ ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ಸಾರಾಂಶ

ಇಬ್ಬರು ಮಕ್ಕಳನ್ನು ಕೆರೆಗೆ ಎಸೆದು ಸಾಯಿಸಿದ ತಾಯಿ| ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ| ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಣಮಾಪುರ ಗ್ರಾಮ ನಡೆದ ಘಟನೆ| 

ಬೆಳಗಾವಿ(ಜ.09): ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನ ಕೆರೆಗೆ ಎಸೆದು ಸಾಯಿಸಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಣಮಾಪುರ ಗ್ರಾಮ ಗುರುವಾರ ನಡೆದಿದೆ. ಮೃತರನ್ನ ತಾಯಿ‌ ಲಕ್ಷ್ಮವ್ವಾ ವಡ್ಡರ್(35) ಮಕ್ಕಳಾದ ಕೀರ್ತಿ(10), ಶ್ರಾವಣಿ(3) ಎಂದು ಗುರುತಿಸಾಗಿದೆ. 

ತಾಯಿ ಲಕ್ಷ್ಮವ್ವಾ ಮೊದಲು ಇಬ್ಬರು ಮಕ್ಕಳನ್ನ ಕೆರೆ ಎಸೆದು ಸಾಯಿಸಿದ್ದಾಳೆ. ಬಳಿಕ ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ತಾಯಿಯ ತಪ್ಪು ನಿರ್ಧಾರಕ್ಕೆ ಇನ್ನೂ ಬದುಕಿ ಬಾಳಬೇಕಿದ್ದ ಪುಟ್ಟ ಮಕ್ಕಳು ಬಲಿಯಾಗಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಲಕ್ಷ್ಮವ್ವಾ ತನ್ನ ಇಬ್ಬರು ಮಕ್ಕಳನ್ನು ಏಕೆ ಕೊಂದಳು ಮತ್ತೆ ತಾನೂ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ