
ಉಪ್ಪಿನಂಗಡಿ (ಜ.29): ಹಣ ದ್ವಿಗುಣಗೊಳಿಸುವುದಾಗಿ ಆಸೆ ಹುಟ್ಟಿಸಿ ಹಣ ಸಂಗ್ರಹಿಸಿದ ಅಪ್ಪ ಮಗ ಅಸಲು ಹಣವನ್ನೂ ನೀಡದೆ ವಂಚಿಸಿದ್ದಾರೆಂದು ಮಹಿಳೆಯೋರ್ವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶಿರಾಡಿ ಗ್ರಾಮದ ಪೇರಮಜಲು ಮನೆ ನಿವಾಸಿ ಜೋಯಿ ಎಂಬವರ ಪತ್ನಿ ಕೆ.ಟಿ. ವಲ್ಸಾ ಎಂಬವರಿಂದ ಶಿರಾಡಿ ಗ್ರಾಮದ ಎಲಿಯಾ ಕನ್‌ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ಸ್ ಎಂಬ ಸಂಸ್ಥೆ ಮಾಲೀಕರಾದ ಅರಿಕ್ಕಲ್ ಟೋಮಿ, ಆತನ ಮಗ ರಿಜಿ ಟೋಮಿ ಎಂಬವರು ಒಂದೇ ತಿಂಗಳಲ್ಲಿ ಹಣ ದ್ವಿಗುಣಗೊಳಿಸುವುದಾಗಿ 2 ಲಕ್ಷ ರು. ಪಡೆದಿದ್ದರು.
ಇ-ಮೇಲ್ ಲಾಗಿನ್ ಆಗದಂತೆ ಮಾಡಿದ ಪತಿ ವಿರುದ್ಧ ಪತ್ನಿ ದೂರು! .
ಆದರೆ ಹಣ ಪಡೆದ ವ್ಯಕ್ತಿ ಮಹಿಳೆಗೆ ತಾವು ಪಡೆದ ಹಣದ ಮೊತ್ತವನ್ನು ವಾಪಸ್ ನೀಡಲಿಲ್ಲ. ಇದರಿಂದ ಆತಂಕಗೊಂಡ ಮಹಿಳೆ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಹಣ ಪಡೆದು ಹಲವು ತಿಂಗಳು ಕಳೆದರೂ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.