ಮುಂದಿನ ಜೆಡಿಎಸ್ ಚುನಾವಣಾ ಪ್ಲಾನ್ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ

Kannadaprabha News   | Asianet News
Published : Jan 29, 2021, 03:40 PM IST
ಮುಂದಿನ ಜೆಡಿಎಸ್ ಚುನಾವಣಾ ಪ್ಲಾನ್ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ

ಸಾರಾಂಶ

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮುಂದಿನ ಚುನಾವಣಾ ಪ್ಲಾನ್ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಖಿಲ್ ಹೇಳಿದ್ದೇನು..?

ಕನಕಪುರ (ಜ.29):  ಮುಂಬರುವ ವಿಧಾನಸಭಾ ಸಭಾ ಚುನಾವಣೆಯಲ್ಲಿ ಜೆಡಿಎಸ್‌ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿ ಚುನಾವಣೆ ಎದುರಿಸಲಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಹಾರೋಹಳ್ಳಿ ಹೋಬಳಿಯ ಕೊಟ್ಟಗಾಳು ಗ್ರಾಮದ ಮಾರಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾತ​ನಾ​ಡಿದ ಅವರು, ರಾಮನಗರ ವಿಧಾನಸಭಾ ಕ್ಷೇತ್ರ ನಮ್ಮ ತಂದೆ, ತಾಯಿಗಳಿಗೆ ಕರ್ಮಭೂಮಿಯಾಗಿದೆ. ಹೀಗಾಗಿ ಕ್ಷೇತ್ರದ ಅಭಿ​ವೃದ್ಧಿ ಹಾಗೂ ಪಕ್ಷ ಸಂಘ​ಟ​ನೆಗೆ ಹೆಚ್ಚಿನ ಆದ್ಯತೆ ನೀಡು​ತ್ತೇನೆ. ಹಳೇ ಮೈಸೂರು ಪ್ರಾಂತ್ಯವಾದ ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್‌ ಯುವ ಕಾರ್ಯಕರ್ತರ ಪಡೆ ಕಟ್ಟುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಸಂಚರಿಸಿ ಯುವಕರನ್ನು ಜೆಡಿಎಸ್‌ ಪಕ್ಷಕ್ಕೆ ಸೆಳೆದು ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸು​ತ್ತೇನೆ ಎಂದು ಹೇಳಿ​ದರು.

ಅಭಿಮಾನಿಗಳ ಜೊತೆಗಿದ್ದ ನಿಖಿಲ್‌ನನ್ನು ಬಾಲ್ಕನಿಯಿಂದ ನೋಡಿ ನಾಚಿ ನೀರಾದ ಪತ್ನಿ! ..

ನಾರಾಯಣಪುರ ಗ್ರಾಮದ ಜೆಡಿಎಸ್‌ ಕಾರ್ಯಕರ್ತ ಶ್ರೀಧರ್‌ ಅಕಾಲಿಕ ಮರಣ ಹೊಂದಿದ ಹಿನ್ನೆ​ಲೆ​ಯಲ್ಲಿ ಅವರ ಮನೆಗೆ ಭೇಟಿ ನೀಡಿದ ನಿಖಿಲ್‌ ಕುಮಾ​ರ​ಸ್ವಾಮಿ, ಕುಟುಂಬ​ದ​ವ​ರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

ಈ ಭಾಗದ ಯುವ ಮುಖಂಡ ಶ್ರೀಧರ್‌ ಅಕಾಲಿಕ ಮರಣಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ಭೇಟಿ ನೀಡಿದ್ದೆ. ಅವರ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿರು​ವು​ದಾಗಿ ತಿಳಿ​ಸಿ​ದರು.

ಕೊಟ್ಟಗಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್‌, ಜೆಡಿಎಸ್‌ ಮುಖಂಡರಾದ ರಾಮ, ಲಕ್ಷ್ಮಣ ಮತ್ತಿ​ತ​ರರು ಹಾಜ​ರಿ​ದ್ದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು